ಶನಿವಾರಸಂತೆ, ಅ. ೧೯: ಪಟ್ಟಣದ ತ್ಯಾಗರಾಜ ಕಾಲೋನಿ ಯಲ್ಲಿರುವ ಶ್ರೀಚಾಮುಂಡೇ ಶ್ವರಿದೇವಿ-ಗುಳಿಗ ದೈವದ ಬನದಲ್ಲಿ ಗುರುವಾರ ನವರಾತ್ರಿಯ ೫ನೇ ದಿನ ನವದುರ್ಗೆಯರ ಪಂಚಮ ಸ್ವರೂಪ ಶ್ರೀ ಸ್ಕಂದಮಾತಾ ದೇವಿಯ ಆರಾಧನಾ ಪೂಜಾ ಕೈಂಕರ್ಯ ಶ್ರದ್ಧಾಭಕ್ತಿಯಿಂದ ನೆರವೇರಿತು.
ಭಕ್ತರಾದ ಲತಾ ನಾಗೇಶ್ ಅವರ ಸೇವಾರ್ಥದೊಂದಿಗೆ, ಭಕ್ತಾದಿಗಳು ಸ್ಕಂದಮಾತಾ ದೇವಿ ಮತ್ತು ಗುಳಿಗ ದೈವಕ್ಕೆ ವಿವಿಧ ಬಗೆಯ ಹೂಗಳು, ಹಣ್ಣುಕಾಯಿ, ನೈವೇದ್ಯ ಸಮರ್ಪಿಸಿ ದರು. ಅರ್ಚಕರಾದ ಪ್ರಕಾಶ್ಚಂದ್ರ ಸುವರ್ಣ ಪೂಜಾ ವಿಧಿ ನೆರವೇರಿಸಿ ದರು. ಮಹಾಮಂಗಳಾರತಿ ನಂತರ ತೀರ್ಥ-ಪ್ರಸಾದ ವಿನಿಯೋಗ ನಡೆದು ಪೂಜಾ ಕಾರ್ಯ ಸಂಪನ್ನವಾಯಿತು.