ಸೋಮವಾರಪೇಟೆ, ಅ. ೧೯: ಇಲ್ಲಿನ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದ ವತಿಯಿಂದ ಆಯೋಜಿಸಿರುವ ಆಯುಧ ಪೂಜೋತ್ಸವ ಅಂಗವಾಗಿ, ಸ್ಥಳೀಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಸಂಘದ ಸದಸ್ಯರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು.

ಕಾರ್ಯಕ್ರಮವನ್ನು ಚೌಡ್ಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನತೀಶ್ ಮಂದಣ್ಣ ಉದ್ಘಾಟಿಸಿದರು. ನಂತರ ಮಾತನಾಡಿ, ವರ್ಷವಿಡೀ ವಾಹನ ಚಾಲನೆ ಮಾಡುವ ಚಾಲಕರಿಗೆ ಒಂದು ದಿನ ಆಟೋಟ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಅವಕಾಶ ವನ್ನು ಸಂಘ ಮಾಡಿಕೊಡುತ್ತಿರುವುದು ಶ್ಲಾಘನೀಯ. ಕ್ರೀಡೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢಗೊಳಿಸುತ್ತದೆ. ಪ್ರತಿ ದಿನ ಒಂದು ಗಂಟೆಯನ್ನಾದರೂ ಎಲ್ಲರೂ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಳ್ಳಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಕೆ.ಜಿ. ಸುರೇಶ್ ವಹಿಸಿದ್ದರು. ವೇದಿಕೆಯಲ್ಲಿ ಉದ್ಯಮಿ ಎ.ಪಿ. ವೀರರಾಜು, ಟಿ.ಕೆ. ರಮೇಶ್, ಗುತ್ತಿಗೆದಾರ ಗಂಧರ್ವ, ದಾನಿಗಳಾದ ಮಸಗೋಡು ದೇವರಾಜು, ಸಂಘದ ಉಪಾಧ್ಯಕ್ಷ ಬಾಲಕೃಷ್ಣ ಪೂಜಾರಿ ಹಾಗೂ ಪದಾಧಿಕಾರಿಗಳು ಇದ್ದರು.

ಸದಸ್ಯರಿಗೆ ನಡೆಸಿದ ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು ಕಾರ್ ಸ್ಟಾö್ಯಂಡ್, ದ್ವಿತೀಯ ಪಿಕಪ್ ಸ್ಟಾö್ಯಂಡ್, ತೃತೀಯ ವ್ಯಾನ್ ಸಾöö್ಯಂಡ್ ಪಡೆಯಿತು. ಹಗ್ಗ ಜಗ್ಗಾಟದಲ್ಲಿ ಕಾರ್ ಸ್ಟಾö್ಯಂಡ್(ಪ್ರ), ಪಿಕಪ್ ಸ್ಟಾö್ಯಂಡ್(ದ್ವಿ), ವ್ಯಾನ್ ಸ್ಟಾö್ಯಂಡ್(ತೃ) ಸ್ಥಾನ ಪಡೆಯಿತು.

೧೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ಶರತ್ ಕಾರೆಕೊಪ್ಪ (ಪ್ರ), ಯೋಗೇಶ್ (ದ್ವಿ) ಹಾಗೂ ಮಣಿಕಂಠ ಕಾರೆಕೊಪ್ಪ (ತೃ) ಸ್ಥಾನಗಳಿಸಿದರು. ಭಾರದ ಗುಂಡು ಎಸೆತದಲ್ಲಿ ದೀಪಕ್ ಕೆ.ಎನ್(ಪ್ರ), ಶುಖಾಂತ್ (ದ್ವಿ) ಮತ್ತು ದೊರೆಮಣಿ (ತೃ) ಸ್ಥಾನಗಳಿಸಿದರು. ಬಾಂಬ್ ಇನ್ ದ ಸಿಟಿಯಲ್ಲಿ ಸುರೇಶ್(ಪ್ರ), ಏಳುಮಲೈ (ದ್ವಿ) ಹಾಗೂ ರಾಘವ ಎಂ.ಆರ್. (ತೃ) ಸ್ಥಾನ ಗಳಿಸಿದರು.