ಬೆಂಗಳೂರು, ಅ. ೧೯: ಮಡಿಕೇರಿ ದಸರಾ ಸಂದರ್ಭ ರಾತ್ರಿ ೧೦ ಗಂಟೆ ಬಳಿಕ ಬೆಳಿಗ್ಗೆ ೬ ರವರೆಗೆ ಡಿಜೆ, ಸಾರ್ವಜನಿಕವಾಗಿ ಧ್ವನಿವರ್ಧಕಗಳ ಬಳಕೆ, ಲೇಸರ್ ಬೆಳಕು ಬಳಕೆಗಳ ವಿರುದ್ಧ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದೆ. ರಾಜ್ಯ ಉಚ್ಚ ನ್ಯಾಯಾಲಯ ವಕೀಲರಾದ ಅಮೃತೇಶ್.ಎನ್.ಪಿ. ಅವರು ರಿಟ್ ಅರ್ಜಿ ಸಲ್ಲಿಸಿದ್ದಾರೆೆ. ಪ್ರತಿವಾದಿಗಳಾಗಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪರಿಸರ ಇಲಾಖೆ, ಕೊಡಗು ಜಿಲ್ಲಾಧಿಕಾರಿ, ಎಸ್.ಪಿ. ಮಡಿಕೇರಿ, ದಸರಾ ಸಮಿತಿ ಅಧ್ಯಕ್ಷರು, ಜಿಲ್ಲಾ ಪರಿಸರ ಅಧಿಕಾರಿ ಇವರುಗಳನ್ನು ಪರಿಗಣಿÀಸಲಾಗಿದೆ.
ಅಕ್ಟೋಬರ್ ೨೪ ರಂದು ಮಡಿಕೇರಿ ದಸರಾ ನಡೆಯಲಿದೆ. ಮಡಿಕೇರಿ ದಸರಾದ ೧೦ ಮಂಟಪದಲ್ಲಿ ಹೊಗೆ ಯಂತ್ರಗಳು, ಲೇಸರ್ ಬೆಳಕು, ಡಿಜೆ ಸಾರ್ವಜನಿಕ ಧ್ವನಿವರ್ಧಕ ಬಳಸದಂತೆ ತಡೆಯಾಜ್ಞೆ ನೀಡುವಂತೆ ಕೋರಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಪರಿಮಿತಿಗೆ ಒಳಪಟ್ಟು ಬಳಸÀಬೇಕಾಗಿದೆ. ಹೆಚ್ಚಿನ ಡೆಸಿಬಲ್ ಸಂಗೀತ, ಪಟಾಕಿಗಳು ಮತ್ತು ಹಾನಿಕಾರಕ ರಾಸಾಯನಿಕಗಳ ಬಳಕೆಯನ್ನು ತಡೆಗಟ್ಟುವಂತೆ ಕೋರಲಾಗಿದೆ. ಇದು ಆರೋಗ್ಯದ ಮೇಲೆ ದುಷ್ಪರಿಣಾಮವುಂಟು ಮಾಡುವುದರೊಂದಿಗೆ, ಅಪಾಯ ಗಳು ಮತ್ತು ಪರಿಸರ ಉಲ್ಲಂಘನೆಗೆ ಕಾರಣವಾಗುತ್ತದೆ ಎಂದು ವಾದಿಸಲಾಗಿದೆ. ಹಿರಿಯ ನಾಗರಿಕರು, ಚಿಕ್ಕ ಮಕ್ಕಳು, ಸಾಕುಪ್ರಾಣಿಗಳಂತಹ ದುರ್ಬಲ ಗುಂಪುಗಳಿಗೆ ಸಂಬAಧಿಸಿ ದಂತೆ ತೀವ್ರ ಪರಿಣಾಮ ಬೀರುತ್ತದೆ ಎಂದು ಗಮನಕ್ಕೆ ತರಲಾಗಿದೆ,
ಹೆಚ್ಚಿನ ಡೆಸಿಬಲ್ ಧ್ವನಿ, ಲೇಸರ್ ದೀಪಗಳಿಂದಾಗಿ ಕಣ್ಣು, ಕಿವಿಗಳ ಮೇಲೆ ದುಷ್ಪರಿಣಾಮ ಉಂಟಾಗುವುದಾಗಿ ಗಮನಕ್ಕೆ ತರಲಾಗಿದೆ. ನಿಯಂತ್ರಣ ರಹಿತ ಧ್ವನಿ ಹಾಗೂ ಬೆಳಕಿನ ಮೂಲಕ ಅನೇಕರು ದೃಷ್ಟಿ ಕಳೆದುಕೊಂಡ, ಕಿವುಡಾದ ಹಾಗೂ ಕೆಲವರು ಸಾವಿಗೀಡಾಗಿರುವ ಪ್ರಕರಣಗಳನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.