ಗೋಣಿಕೊಪ್ಪಲು, ಅ. ೧೯: ೪೫ನೇ ವರ್ಷದ ಗೋಣಿಕೊಪ್ಪ ದಸರಾ ಜನೋತ್ಸವದ ೫ನೇ ದಿನದ ಕಾರ್ಯಕ್ರಮದ ಅಂಗವಾಗಿ ವೀರಾಜಪೇಟೆಯ ಇಂಟೋಪಿಸ್ ಡ್ಯಾನ್ಸ್ ಟೀಮ್ ನಡೆಸಿಕೊಟ್ಟ ನೃತ್ಯ ಕಾರ್ಯಕ್ರಮ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಯಿತು. ಭರತನಾಟ್ಯ ಸೇರಿದಂತೆ ಇನ್ನಿತರ ನೃತ್ಯಗಳ ಪ್ರದರ್ಶನ ಉತ್ತಮವಾಗಿ ಮೂಡಿ ಬಂತು.
ಮAಗಳೂರಿನ ‘ಹೆಜ್ಜೆನಾದ’ ತಂಡದಿAದ ನಡೆಸಿಕೊಟ್ಟ ನೃತ್ಯ ಹಾಗೂ ಸಂಗೀತ ಕಾರ್ಯಕ್ರಮಗಳು ನೋಡುಗರನ್ನು ಮಂತ್ರಮುಗ್ದರನ್ನಾಗಿಸಿತ್ತು. ಹಲವು ಯುವ ಪ್ರತಿಭೆಗಳು ಕಾವೇರಿ ಕಲಾವೇದಿಕೆಯಲ್ಲಿ ನೃತ್ಯ ಪ್ರದರ್ಶನ ಮಾಡಿದರು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು.