ಸೋಮವಾರಪೇಟೆ, ಅ. ೧೯: ಶ್ರೀ ರಾಧಾ ಸುರಭಿ ಗೋ ಮಂದಿರ, ರಾಷ್ಟಿçÃಯ ಗೋಸೇವಾ ಸಂಸ್ಥಾನ ಹಾಗೂ ಗೋ ಸೇವಾ ಗತಿವಿಧಿ ಕರ್ನಾಟಕ ಇವರ ನೇತೃತ್ವದಲ್ಲಿ ನ. ೧೪ ರಿಂದ ೨೪ ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಪುದು ಗ್ರಾಮದಲ್ಲಿ ನಡೆಯಲಿರುವ ಅಷ್ಟೋತ್ತರ ಶ್ರೀಮದ್ ಭಾಗವತ ಸಪ್ತಾಹ ಮತ್ತು ೧೧೦೮ ನಾರಾಯಣ ಕವಚದ ಮಹಾಯಜ್ಞದ ಅಂಗವಾಗಿ ರಾಜ್ಯಾದ್ಯಂತ ಸಂಚರಿಸಲಿರುವ ಗೋ ಸಂರಕ್ಷಣಾ ರಥ ಸೋಮವಾರಪೇಟೆಗೆ ಆಗಮಿಸಿದ ಸಂದರ್ಭ ಬಸವೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಸ್ವಾಗತಿಸಲಾಯಿತು.

ಪಟ್ಟಣದ ಬಸವೇಶ್ವರ ದೇವಾಲಯದಲ್ಲಿ ದೊಡ್ಡಬಳ್ಳಾಪುರ ಮಠದ ಶ್ರೀ ನಿಶ್ಚಲ ದೇಶಿಕೇಂದ್ರ ಸ್ವಾಮೀಜಿ ಅವರು ಗೋವಿಗೆ ಪೂಜೆ ಸಲ್ಲಿಸುವುದ ರೊಂದಿಗೆ, ಅಕ್ಕಿ ಬೆಲ್ಲ ತಿನ್ನಿಸಿ ವಿಶೇಷ ಗೋ ಪೂಜೆ ನೆರವೇರಿಸಿದರು.

ಈ ಸಂದರ್ಭ ವೀರಶೈವ ಸಮಾಜದ ಪ್ರಮುಖರಾದ ಬಿ.ಪಿ. ಶಿವಕುಮಾರ್, ಜಯಣ್ಣ, ನಾಗರಾಜ್, ರಾಜಣ್ಣ, ಯೋಗೇಶ್, ಕಲಾಗಿರೀಶ್, ಮಂಜುಳಾ ಬಸವರಾಜ್, ಉಮಾ ರುದ್ರಪ್ರಸಾದ್, ಎಸ್. ಮಹೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.