ಮಡಿಕೇರಿ, ಅ. ೧೯: ಕಳೆದ ೧೨ ರಂದು ದಕ್ಷಿಣ ಕನ್ನಡ ಜಿಲ್ಲೆಯ ಅಪ್ರಾಪ್ತ ಬಾಲಕಿಯೊಬ್ಬಳನ್ನು ಕೊಡಗಿಗೆ ಕರೆ ತಂದು ಸಂಬAಧಿಕರ ಮನೆಯಲ್ಲಿಯೇ ಅತ್ಯಾಚಾರ ಎಸಗಿದ ಪ್ರಕರಣ ಮಾಸುವ ಮುನ್ನ ಮತ್ತೊಂದು ಪ್ರಕರಣ ವರದಿಯಾಗಿದೆ.

ಕುಕ್ಕೆ ಸುಬ್ರಹ್ಮಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ೮ನೇ ತರಗತಿಯ ಬಾಲಕಿಯೊಬ್ಬಳನ್ನು ಮಡಿಕೇರಿಗೆ ಕರೆ ತಂದು ಅತ್ಯಾಚಾರ ಎಸಗಿದ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಆದರ್ಶ್ (೨೬) ಎಂದು ಗುರುತಿಸಲಾಗಿದೆ. ಈತನು ಸುಬ್ರಹ್ಮಣ್ಯದ ಲಾಡ್ಜ್ ಒಂದರ ಮೇಲ್ವಿಚಾರಕನಾಗಿ ಕೆಲಸ ಮಾಡಿಕೊಂಡಿದ್ದ. ಈತನಿಗೆ ಇನ್ಸಾ÷್ಟಗ್ರಾಂನಲ್ಲಿ ಪರಿಚಯವಾದ ಬಾಲಕಿಯನ್ನು ‘ಮಡಿಕೇರಿ ನೋಡಿಕೊಂಡು ಬರೋಣ ಬಾ’ ಎಂದು ಪುಸಲಾಯಿಸಿ ತಾ.೧೪ ರಂದು ಕರೆ ತಂದಿದ್ದಾನೆ. ನಗರದ ಲಾಡ್ಜ್ ಒಂದರಲ್ಲಿ ರೂಂ ಮಾಡಿ ಅಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿ ಮರು ದಿನ ಕರೆದುಕೊಂಡು ಹೋಗಿ ಸುಬ್ರಹ್ಮಣ್ಯದಲ್ಲಿ ಬಿಟ್ಟಿದ್ದಾನೆ.

ಆದರೆ, ಸಂಜೆ ಶಾಲೆಯಿಂದ ಮನೆಗೆ ಹಿಂತಿರುಗದ ಬಾಲಕಿ ತನ್ನ ಮೊಬೈಲ್ ಮೂಲಕ ಅಜ್ಜನ ಮನೆಗೆ ಹೋಗುವುದಾಗಿ ಕರೆ ಮಾಡಿದ್ದಳು. ಪೋಷಕರು ಸಂಜೆ ಅಜ್ಜನಿಗೆ ಕರೆ ಮಾಡಿದಾಗ ಬಾಲಕಿ ಅಲ್ಲಿಗೆ ಹೋಗಿ ನಂತರ ಗೆಳತಿಯ ಮನೆಗೆ ಹೋಗುವುದಾಗಿ ಹೇಳಿ ಹೋಗಿರುವುದು ತಿಳಿದು ಬಂತು. ಆದರೆ ಬಾಲಕಿಯ ಮೊಬೈಲ್ ‘ಸ್ವಿಚ್ ಆಫ್’ ಆಗಿತ್ತು.

ಕಳವಳಗೊಂಡ ಪೋಷಕರು ಪೊಲೀಸ್ ಪ್ರಕರಣ ದಾಖಲಿಸಿದ್ದರು. ಸುಬ್ರಹ್ಮಣ್ಯ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿದ್ದರು. ಬಾಲಕಿ ಮನೆಗೆ ಹಿಂತಿರುಗಿದ ನಂತರ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ೧೪ ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. -ಕೋವರ್ ಕೊಲ್ಲಿ ಇಂದ್ರೇಶ್