ಪೊನ್ನಂಪೇಟೆ, ಅ. ೧೯: ಪೊನ್ನಂಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೨೦೨೩-೨೮ನೇ ಸಾಲಿನ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಚೀರಂಡ ಕಂದ ಸುಬ್ಬಯ್ಯ ಹಾಗೂ ಉಪಾಧ್ಯಕ್ಷರಾಗಿ ಕೋಳೆರ ಸಿ. ದಿನು ಅವಿರೋಧವಾಗಿ ಆಯ್ಕೆಯಾದರು.

೧೩ ನಿರ್ದೇಶಕರುಗಳನ್ನೊಳ ಗೊಂಡ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾ ವಣೆಯು ಸಂಘದ ಸಭಾಂಗಣದಲ್ಲಿ ನಡೆಯಿತು. ನೂತನವಾಗಿ ಆಯ್ಕೆಗೊಂಡ ನಿರ್ದೇಶಕರುಗಳಿಗೆ ದೃಢೀಕರಣ ಪತ್ರವನ್ನು ವಿತರಿಸಲಾಯಿತು.

ಅಧ್ಯಕ್ಷರಾಗಿ ನೇಮಕಗೊಂಡ ಚೀರಂಡ ಕಂದಾ ಸುಬ್ಬಯ್ಯ ಮಾತನಾಡಿ, ಸಂಘದ ಸದಸ್ಯರ ಸಹಕಾರದಿಂದ ಸಂಘ ಅಭಿವೃದ್ಧಿಯತ್ತ ಸಾಗುತ್ತಿದೆ. ಸದಸ್ಯರ ಹಿತ ಕಾಪಾಡುವುದು ಆಡಳಿತ ಮಂಡಳಿಯ ಕರ್ತವ್ಯವಾಗಿದೆ.

ಮುಂದಿನ ದಿನಗಳಲ್ಲಿ ೧ ಕೋಟಿ ರೂಪಾಯಿಗೂ ಅಧಿಕ ರಸಗೊಬ್ಬರ ವ್ಯವಹಾರ ಮಾಡುವ ಗುರಿ ಇದ್ದು, ಸದಸ್ಯರಿಗೆ ಸಕಾಲದಲ್ಲಿ ರಸಗೊಬ್ಬರವನ್ನು ಒದಗಿಸಲಾಗುವುದು. ಹೊಸ ಕಟ್ಟಡ, ವಾಣಿಜ್ಯ ಸಂಕಿರ್ಣ ನಿರ್ಮಾಣ ಮಾಡಲಾಗುವುದು. ಸಂಘದ ವತಿಯಿಂದ ವಾರ್ಷಿಕವಾಗಿ ೧೫ ಕೋಟಿಯಷ್ಟು ವ್ಯವಹಾರ ನಡೆಸುವ ಗುರಿಯನ್ನು ಹೊಂದಲಾಗಿದೆ ಎಂದರು.

ಈ ಸಂದರ್ಭ ನಿರ್ದೇಶಕರು ಗಳಾದ ಅಡ್ಡಂಡ ಕೆ. ತಿಮ್ಮಯ್ಯ (ಜಾಲಿ), ಆಲೀರ ಅಬ್ದುಲ್ ಅಜೀಜ್, ಅಡ್ಡಂಡ ಸಿ. ಕುಶಾಲಪ್ಪ (ಪ್ರಕಾಶ್), ಪಡಿಞರಂಡ ಗಿರೀಶ್, ಚೀರಂಡ ಎಂ. ಚಂಗಪ್ಪ, ಮಂಜುವAಡ ಬೆಳ್ಳಿಯಪ್ಪಮಯ್ಯ (ಅರುಣ), ಮಚ್ಚಿಯಂಡ ಸುವಿನ್ ಮಾಚಯ್ಯ, ಮೂಕಳೇರ ಪಿ. ಸರಸ್ವತಿ, ಹೆಚ್.ಟಿ. ವಿಠಲ, ಸುಮಿತ ವಿಶ್ವನಾಥ್, ಕಾಕೇರ ಆರ್. ತಾರ, ಕಾರ್ಯ ನಿರ್ವಹಣಾಧಿಕಾರಿ ಶ್ರೀನಿವಾಸ್ ನಾಯ್ಡು ಇದ್ದರು. ಚುನಾವಣಾಧಿಕಾರಿ ಪಿ. ಆಶಾ ಚುನಾವಣಾ ಪ್ರಕ್ರಿಯೆ ನಡೆಸಿದರು.