ಕೂಡಿಗೆ: ಶ್ರೀ ರಾಧಾ ಸುರಭಿ ಗೋ ಮಂದಿರ, ರಾಷ್ಟಿçÃಯ ಗೋ ಸೇವಾ ಸಂಸ್ಥಾನ ಮತ್ತು ಗೋ ಸೇವಾ ಗತಿವಿಧಿ ಕರ್ನಾಟಕ ಇದರ ಸಂಯುಕ್ತ ಆಶ್ರಯದಲ್ಲಿ ಶ್ರೀ ಭಕ್ತಿ ಭೂಷಣ್ ದಾಸ್ ಪ್ರಭೂಜೀಯವರ ಮಾರ್ಗದರ್ಶನದಲ್ಲಿ ವಿವಿಧ ಜಿಲ್ಲೆಯಲ್ಲಿ ಸಂಚರಿಸಿ ನಂತರ ಕೂಡಿಗೆ ಮೂಲಕ ಕುಶಾಲನಗರಕ್ಕೆ ಆಗಮಿಸಿತು.
ಈ ಸಂದರ್ಭದಲ್ಲಿ ಕೂಡಿಗೆ ರಾಷ್ಟಿçÃಯ ಸೇವಾ ಸಮಿತಿ ಮತ್ತು ಹಿಂದೂಪರ ಸಂಘಟನೆಯ ಪ್ರಮುಖ ಸಹಕಾರದೊಂದಿಗೆ ಕೂಡಿಗೆ, ಹುದುಗೂರು ಮದಲಾಪುರ, ಕೂಡುಮಂಗಳೂರು, ಕೂಡ್ಲೂರು ಗ್ರಾಮಗಳಲ್ಲಿ ಮೆರವಣಿಗೆ ಸಾಗಿ ನಂತರ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಭರತ್ ಮಾಚಯ್ಯ, ರಾಜೀವ್, ಪ್ರಶಾಂತ್, ನಂದನ, ಪ್ರದೀಪ್, ಕೆ. ವರದ, ಕೂಡಿಗೆ ಎಸ್.ಎಂ. ರವಿ, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸದಸ್ಯ ಚಂದ್ರಶೇಖರ್, ಕೇಶವ ರೈ, ಧನಪಾಲ, ಲೋಕೇಶ್, ಚಿಮ್ಮಿ, ಪ್ರಕಾಶ್, ಸಂತೋಷ್, ಎಸ್.ಎಂ. ರವಿ, ಯೊಗೇಶ್ ಸೇರಿದಂತೆ ವಿವಿಧ ಘಟಕದ ಪದಾಧಿಕಾರಿಗಳು, ಮಹಿಳಾ ಘಟಕ ಪದಾಧಿಕಾರಿಗಳು ಕಾರ್ಯಕರ್ತರು ಭಾಗವಹಿಸಿದ್ದರು.ಚೆಟ್ಟಳ್ಳಿ: ಬಂಟ್ವಾಳ ತಾಲೂಕಿನ ಬ್ರಹ್ಮಗಿರಿ ಗೋವಿನ ತೋಟ ಹಾಗೂ ಗೋ ಸೇವಾ ಗತಿವಿಧಿ ಸಂಯುಕ್ತ ಆಶ್ರಯದಲ್ಲಿ ಗೋ ರಥಯಾತ್ರೆಯು ಕೊಡಗಿನಾದ್ಯಂತ ಸಂಚರಿಸಿ ಸುಂಟಿಕೊಪ್ಪ ಮಾರ್ಗವಾಗಿ ಚೆಟ್ಟಳ್ಳಿಗೆ ಆಗಮಿಸುತ್ತಿದ್ದಂತೆ ಚೆಟ್ಟಳ್ಳಿಯಲ್ಲಿ ರಥವನ್ನು ಸ್ವಾಗತಿಸಲಾಯಿತು. ಚೆಟ್ಟಳ್ಳಿ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಅವರು ರಥಯಾತ್ರೆಯ ಗೋವಿಗೆ ಬಾಳೆ ಹಣ್ಣು ಹಾಗೂ ಹಸಿ ಹುಲ್ಲನ್ನು ತಿನ್ನಿಸುವ ಮೂಲಕ ಗೌರವ ಸಲ್ಲಿಸಿ ಸ್ವಾಗತಿಸಿದರು.
ಸ್ಥಳೀಯ ಹಿಂದೂ ಸಂಘಟನೆಯ ಪ್ರಮುಖರಾದ ಬಲ್ಲಾರಂಡ ಕಂಠಿ ಕಾರ್ಯಪ್ಪ ಮಾತನಾಡಿ, ಹಿಂದೂ ಧರ್ಮದಲ್ಲಿ ಗೋವಿಗೆ ಪೂಜ್ಯ ಸ್ಥಾನವಿದೆ. ತಾಯಿಯು ಮಗುವಿಗೆ ಒಂದೆರÀಡು ವರ್ಷ ಹಾಲುಣಿಸಿ ಪೋಷಿಸಿದರೆ ಗೋವು ನಿರಂತರ ಹಾಲುಣಿಸುವ ಪುಣ್ಯ ಕಾರ್ಯವನ್ನು ಮಾಡುವ ಮೂಲಕ ಗೋಮಾತೆ ಎನಿಸಿಕೊಂಡಿದೆ. ಗೋವನ್ನು ಕಸಾಯಿಕಾನೆಗೆ ಮಾರಾಟ ಮಾಡುವುದು ತಡೆಯಾಗಬೇಕೆಂದರು. ಈಗಿನ ದಿನಗಳಲ್ಲಿ ಗೋವನ್ನು ಪೋಷಿಸುವವರ ಸಂಖ್ಯೆ ಕಡಿಮೆಯಾಗುತ್ತಿದ್ದು ಪ್ರತಿಯೊಂದು ಮನೆಯಲ್ಲೂ ಗೋವನ್ನು ಪೋಷಿಸುವಂತಾಗಬೇಕೆAದು ಚೆಟ್ಟಳ್ಳಿ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ತಿಳಿಸಿದರು. ಹಿಂದಿನ ಸರಕಾರ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಿದ್ದು ಈಗಿನ ಸರಕಾರ ಕಾಯ್ದೆಯನ್ನು ರದ್ದುಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾವೇರಿ ತೀರ್ಥವನ್ನು ವಿತರಿಸುವ ಮೂಲಕ ಗೋಯಾತ್ರೆಯನ್ನು ಬೀಳ್ಕೊಡಲಾಯಿತು. ಚೆಟ್ಟಳ್ಳಿ ಸಹಕಾರ ಸಂಘದ ಆಡಳಿತ ಮಂಡಳಿಯ ಪದಾಧಿಕಾರಿಗಳು, ಸಿಬ್ಬಂದಿಗಳು, ಚೆಟ್ಟಳ್ಳಿ ಸ್ಥಳೀಯ ಬಿಜೆಪಿಯ ಪ್ರಮುಖರು, ಸಾರ್ವಜನಿಕರು ಹಾಜರಿದ್ದರು.ಗುಡ್ಡೆಹೊಸೂರು: ನವರಾತ್ರಿ ಉತ್ಸವದ ಸಂದೇಶ ಸಾರುವ ಗೋ ರಥವು ಕುಶಾಲನಗರ ಮೂಲಕ ಗುಡ್ಡೆಹೊಸೂರಿಗೆ ಆಗಮಿಸಿದ ಸಂದರ್ಭ ಸಾರ್ವಜನಿಕರು ಹಾಜರಿದ್ದು ರಥಕ್ಕೆ ಪೂಜೆ ಸಲ್ಲಿಸಿದರು. ಈ ಸಂದರ್ಭ ರಥದಲ್ಲಿದ್ದ ಗೋವುಗಳಿಗೆ ಗೋಪುಜೆ ಮತ್ತು ಗೋ ಗ್ರಾಸ ಸೇವೆ ಮಾಡಲಾಯಿತು.