ನಮ್ಮ ಮೆಟ್ರೋ ವಿಸ್ತೃತ ಮಾರ್ಗಕ್ಕೆ ಮೋದಿ ಚಾಲನೆ

ಬೆಂಗಳೂರು, ಅ. ೨೦: ಕೆ.ಆರ್. ಪುರ-ಬೈಯಪ್ಪನಹಳ್ಳಿ ಹಾಗೂ ಕೆಂಗೇರಿ-ಚಲ್ಲಘಟ್ಟದವರೆಗೆ ನಮ್ಮ ಮೆಟ್ರೋ ವಿಸ್ತೃತ ಮಾರ್ಗವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಶುಕ್ರವಾರ ಉದ್ಘಾಟಿಸಿದರು. ವೀಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿಯವರು ನಮ್ಮ ಮೆಟ್ರೋ ಮಾರ್ಗಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದ ವೇಳೆ ಸಿಎಂ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್, ಸಿಎಸ್. ವಂದಿತಾ ಶರ್ಮಾ, ಮೆಟ್ರೋ ಎಂಡಿ ಅಂಜುಮ್ ಪರ್ವೇಜ್ ಉಪಸ್ಥಿತರಿದ್ದರು. ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನಾನು ಕನ್ನಡದಲ್ಲೇ ಮಾತನಾಡುತ್ತೇನೆಂದು ಹೇಳಿ, ಪ್ರಧಾನಿ ಮೋದಿಯವರಿಗೆ ಧನ್ಯವಾದ ತಿಳಿಸಿದರು. ಬೆಂಗಳೂರು ನಗರ ಪರವಾಗಿ ಪ್ರಧಾನಿ ಮೋದಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಟ್ರಾಫಿಕ್ ಸಮಸ್ಯೆ ಹೆಚ್ಚಾಗಿರುವುದರಿಂದ ಮೆಟ್ರೋ ಸೇವೆ ಅತ್ಯಗತ್ಯ. ಮೆಟ್ರೋ ಯೋಜನೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಸೇರಿ ಯೋಜನೆ ಮಾಡಲಾಗುತ್ತಿದೆ. ರೂ. ೫,೬೦೦ ಕೋಟಿ ಹಣ ರಾಜ್ಯ ಸರ್ಕಾರ ಮೆಟ್ರೋ ಯೋಜನೆಗೆ ನೀಡಲಾಗಿದೆ ಎಂದು ಹೇಳಿದರು. ಇದೇ ವೇಳೆ ಮಾಜಿ ರಾಷ್ಟçಪತಿ ದಿವಂಗತ ಪ್ರಣಬ್ ಮುಖರ್ಜಿಯವರನ್ನು ಸ್ಮರಿಸಿದರು.

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ

ನವದೆಹಲಿ, ಅ. ೨೦: ದೇಶದ ಆಗ್ನೇಯ ಹಾಗೂ ಅರಬ್ಬಿ ಸಮುದ್ರದ ನೈಋತ್ಯ ಭಾಗದಲ್ಲಿ ಕಡಿಮೆ ಒತ್ತಡದ ಪ್ರದೇಶ ಸೃಷ್ಟಿಯಾಗಿದೆ. ಇದು ಚಂಡಮಾರುತವಾಗಿ ಮಾರ್ಪಡುವ ಸಾಧ್ಯತೆಯಿದ್ದು, ತಾ. ೨೧ರಂದು ಮಹಾರಾಷ್ಟçಕ್ಕೆ ಹೊಂದಿಕೊAಡಿರುವ ಕರಾವಳಿ ಪ್ರದೇಶಕ್ಕೆ ಅಪ್ಪಳಿಸುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶುಕ್ರವಾರ ತಿಳಿಸಿದೆ. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಪ್ರತಿಕೂಲ ವಾತಾವರಣ ಸೃಷ್ಟಿಗೆ ಕಾರಣವಾಗಲಿದೆ. ಈ ಚಂಡಮಾರುತಕ್ಕೆ ‘ತೇಜ್' ಎಂದು ಹೆಸರಿಡಲಾಗಿದೆ. ಪ್ರಸಕ್ತ ವರ್ಷದಲ್ಲಿ ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾದ ಎರಡನೇ ಚಂಡಮಾರುತ ಇದಾಗಿದೆ ಎಂದು ವಿವರಿಸಿದೆ. ಭಾನುವಾರದ ವೇಳೆಗೆ ತೀವ್ರತೆ ಪಡೆದುಕೊಳ್ಳುವ ಈ ಚಂಡಮಾರುತವು ಒಮನ್ ಹಾಗೂ ಅದಕ್ಕೆ ಹೊಂದಿಕೊAಡ ಯೆಮನ್‌ನ ದಕ್ಷಿಣ ಕರಾವಳಿ ಪ್ರದೇಶಗಳತ್ತ ಚಲಿಸಲಿದೆ ಎಂದು ಹೇಳಿದೆ.

ಚರ್ಚ್ ಮೇಲೆ ಇಸ್ರೇಲ್ ವೈಮಾನಿಕ ದಾಳಿ

ಗಾಜಾ, ಅ. ೨೦: ಸುಮಾರು ೫೦೦ ಪ್ಯಾಲೆಸ್ತೀನಿಯರು ವಾಸಿಸುತ್ತಿದ್ದ ಗಾಜಾದಲ್ಲಿರುವ ಆರ್ಥೊಡಾಕ್ಸ್ ಗ್ರೀಕ್ ಚರ್ಚ್ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದೆ ಎಂದು ಹಮಾಸ್ ನಿಯಂತ್ರಿತ ಆಂತರಿಕ ಸಚಿವಾಲಯ ತಿಳಿಸಿದೆ. ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವೆ ಯುದ್ಧ ಪ್ರಾರಂಭವಾದ ನಂತರ, ಪ್ಯಾಲೇಸ್ಟಿನಿಯರು ಮನೆಗಳನ್ನು ತೊರೆದು ಇಲ್ಲಿ ಆಶ್ರಯ ಪಡೆದಿದ್ದರು. ಈ ವಿನಾಶಕ್ಕೆ ಚರ್ಚ್ ಅಧಿಕಾರಿಗಳು ಇಸ್ರೇಲ್ ಅನ್ನು ದೂಷಿಸಿದ್ದಾರೆ. ಗ್ರೀಕ್ ಆರ್ಥೊಡಾಕ್ಸ್ ಸೇಂಟ್ ಪೋರ್ಫಿರಿಯಸ್ ಚರ್ಚ್ ಗಾಜಾದ ಅತ್ಯಂತ ಹಳೆಯ ಚರ್ಚ್ ಆಗಿದೆ. ಅಲ್ ಜಜೀರಾ ಪ್ರಕಾರ, ಚರ್ಚ್ನ ಪಾದ್ರಿಯೊಬ್ಬರು ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಅಲ್ಲಿ ಆಶ್ರಯ ಪಡೆದಿರುವ ಕಾರಣ ಅದನ್ನು ಗುರಿಯಾಗಿಸಲಾಗಿದೆ. ಚರ್ಚ್ನಲ್ಲಿ ವಾಸವಿದ್ದ ೫೦೦ಕ್ಕೂ ಹೆಚ್ಚು ಜನರ ಸ್ಥಿತಿಯ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಮಕ್ಕಳು ಮತ್ತು ಶಿಶುಗಳು ಸೇರಿದಂತೆ ನಿರಾಶ್ರಿತರು ಮಲಗಿದ್ದ ಎರಡು ಚರ್ಚ್ ಹಾಲ್‌ಗಳ ಮೇಲೆ ಬಾಂಬ್ ದಾಳಿಯಾಗಿದೆ ಎಂದು ಹಮಾಸ್ ಹೇಳಿಕೆಯಲ್ಲಿ ತಿಳಿಸಿದೆ. ಅವಶೇಷಗಳಲ್ಲಿ ಬದುಕಿರುವವರಿಗಾಗಿ ಹುಡುಕುತ್ತಿದ್ದಾರೆ. ದಾಳಿಯಲ್ಲಿ ೧೫೦-೨೦೦ ಜನರು ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಲಾಗಿದೆ.

ಭಾರತದಲ್ಲಿದ್ದ ಪಾಕಿಸ್ತಾನದ ಬೇಹುಗಾರನ ಬಂಧನ

ನವದೆಹಲಿ, ಅ. ೨೦: ಗುಜರಾತ್ ಎಟಿಎಸ್ ತಾರಾಪುರದಲ್ಲಿ ಪಾಕಿಸ್ತಾನದ ಬೇಹುಗಾರನನ್ನು ಬಂಧಿಸಿದೆ. ಆತನ ಬಂಧನದ ನಂತರ ಆತನ ರಹಸ್ಯಗಳನ್ನು ಬಹಿರಂಗಪಡಿಸಲು ವಿಚಾರಣೆ ನಡೆಸಲಾಗುತ್ತಿದೆ. ಪೊಲೀಸರ ಪ್ರಕಾರ, ಆರೋಪಿ ಲಾಭಶಂಕರ್ ಮಹೇಶ್ವರಿ ಮೂಲತಃ ಪಾಕಿಸ್ತಾನಿ ಹಿಂದೂ. ೧೯೯೯ರಲ್ಲಿ ತನ್ನ ಹೆಂಡತಿಯೊAದಿಗೆ ಚಿಕಿತ್ಸೆಗಾಗಿ ಭಾರತಕ್ಕೆ ಬಂದಿದ್ದನು. ಆರಂಭದಲ್ಲಿ ಆತ ತಾರಾಪುರದಲ್ಲಿರುವ ಅತ್ತೆಯ ಮನೆಯಲ್ಲಿ ತಂಗಿದ್ದರು. ಅಲ್ಲಿ ಹಲವಾರು ಅಂಗಡಿಗಳನ್ನು ತೆರೆದು ವ್ಯಾಪಾರ ಮಾಡುತ್ತಿದ್ದರು. ೨೦೦೬ರಲ್ಲಿ ಲಾಭಶಂಕರ್ ಭಾರತದ ಪೌರತ್ವ ಪಡೆದರು. ಇದರ ನಂತರ ಅವರು ೨೦೨೨ರ ಆರಂಭದಲ್ಲಿ ತನ್ನ ಪೋಷಕರನ್ನು ಭೇಟಿ ಮಾಡಲು ಪಾಕಿಸ್ತಾನಕ್ಕೆ ತೆರಳಿದರು. ವೀಸಾ ಪ್ರಕ್ರಿಯೆಯಲ್ಲಿ ಮತ್ತು ಅವರ ಪೋಷಕರ ಮನೆಯಲ್ಲಿ ಒಂದೂವರೆ ತಿಂಗಳು ಇದ್ದಾಗ ಅಲ್ಲಿ ಬ್ರೆöÊನ್‌ವಾಶ್ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಅಂದಿನಿAದ ಅವರು ಪಾಕಿಸ್ತಾನದ ಗುಪ್ತಚರ ಸಂಸ್ಥೆಯೊAದಿಗೆ ಸಂಪರ್ಕದಲ್ಲಿದ್ದಾರೆ.

ಶಿವಕುಮಾರ ಪೂಜಾರಿ ಆತ್ಮಹತ್ಯೆ ಪ್ರಕರಣ-ಸಿಐಡಿ ತನಿಖೆಗೆ

ತುಮಕೂರು, ಅ. ೨೦: ಕಲಬುರಗಿ ಜಿಲ್ಲೆಯ ಬಿಜೆಪಿ ಕಾರ್ಯಕರ್ತ ಶಿವಕುಮಾರ ಪೂಜಾರಿ ಆತ್ಮಹತ್ಯೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ತನಿಖಾ ವರದಿ ಬಂದ ನಂತರ ಸತ್ಯಾಂಶ ಹೊರ ಬರಲಿದೆ. ಇದರಲ್ಲಿ ಯಾರು ಭಾಗಿಯಾಗಿದ್ದಾರೆ, ಯಾರೆಲ್ಲ ಕೈವಾಡ ಇದೆ ಎಂಬುದು ಗೊತ್ತಾಗಲಿದ ಎಂದು ತಿಳಿಸಿದರು. ಸಚಿವ ಡಾ. ಶರಣಪ್ರಕಾಶ ಪಾಟೀಲ್ ಪಾತ್ರ ಇದೆ ಎಂದು ಕೆಲವರು ಆರೋಪ ಮಾಡುತ್ತಿದ್ದಾರೆ. ಅದನ್ನು ಪರಿಶೀಲಿಸಿ, ಖಚಿತ ಪಡಿಸಿಕೊಳ್ಳಬೇಕಿದೆ. ಆರೋಪ ಮಾಡುತ್ತಿರುವವರ ಹೇಳಿಕೆಯನ್ನು ಪಡೆದುಕೊಂಡು ಪರಿಶೀಲಿಸಬೇಕಿದೆ. ಅದಕ್ಕಾಗಿ ಸಿಐಡಿ ತನಿಖೆ ನಡೆಸಲಾಗುತ್ತಿದೆ ಎಂದರು.