ಸಿದ್ದಾಪುರ, ಅ. ೧೮: ಅಮೂಲ್ಯ ವಾದ ಜೀವಗಳನ್ನು ಉಳಿಸಲು ರಕ್ತದಾನ ಅತ್ಯವಶ್ಯಕವಾಗಿದ್ದು ಪ್ರತಿಯೊಬ್ಬರೂ ರಕ್ತದಾನಿಗಳಾಗಿ ಕೈಜೋಡಿಸಬೇಕೆಂದು ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ರಾಘವೇಂದ್ರ ಹೇಳಿದರು. ಸಿದ್ದಾಪುರದ ಸಂತ ಜೋಸೆಫರ ಸೇವಾ ಸಂಘದ ವತಿಯಿಂದ ಸೆಂಟಿನರಿ ಸಭಾಂಗಣ ದಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಅಪಘಾತ ಸೇರಿದಂತೆ ಯಾವುದೇ ಘಟನೆಗಳು ನಡೆಯದಂತೆ ಎಚ್ಚರ ವಹಿಸುವುದರೊಂದಿಗೆ ನಿಯಮ ಪಾಲನೆ ಮಾಡಬೇಕು. ಕೆಲವು ತುರ್ತು ಸಂದರ್ಭಗಳಲ್ಲಿ ರಕ್ತವು ಸಿಗದೆ ಹಲವು ಸಾವು-ನೋವುಗಳು ಸಂಭವಿಸುತ್ತದೆ. ಅಮೂಲ್ಯ ಜೀವಗಳನ್ನು ಉಳಿಸಲು ಯುವ ಸಮೂಹ ಹೆಚ್ಚು ರಕ್ತದಾನ ಶಿಬಿರ ಗಳನ್ನು ಆಯೋಜನೆ ಮಾಡುವುದರ ಮೂಲಕ ಅಮೂಲ್ಯ ಜೀವಗಳನ್ನು ಉಳಿಸಲು ಮುಂದಾಗಬೇಕೆAದರು.

ಕೊಡಗು ಜಿಲ್ಲಾ ರಕ್ತನಿಧಿ ಘಟಕದ ಅಧಿಕಾರಿ ಡಾ. ಕರುಂಬಯ್ಯ ಮಾತನಾಡಿ, ರಕ್ತದಾನದ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವುದರೊಂದಿಗೆ ಅಮೂಲ್ಯ ಜೀವಗಳನ್ನು ಉಳಿಸಲು ಸಾಧ್ಯವಾಗಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಿಗಳು ಮುಂದೆ ಬಂದಲ್ಲಿ ಘಟಕದಲ್ಲಿ ರಕ್ತದ ಕೊರತೆ ನೀಗಿಸಲು ಸಾಧ್ಯವಾಗಲಿದೆ.

ನಾವು ಪಡೆಯುವ ರಕ್ತ ಸರಕಾರದ ದರದಂತೆ ಸುಲಭವಾಗಿ ಅಗತ್ಯವಾದವರಿಗೆ ಲಭಿಸಲಿದೆ. ಆದ್ದರಿಂದ ರಕ್ತದಾನದಲ್ಲಿ ಯುವ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವುದರ ಮೂಲಕ ಮತ್ತೊಬ್ಬರ ಜೀವವನ್ನು ಉಳಿಸಲು ಮುಂದಾಗಬೇಕೆAದರು.

ಸAತ ಜೋಸೆಫರ ಸೇವಾ ಸಂಘದ ಅಧ್ಯಕ್ಷ ಕುರಿಯಾ ಕೋಸ್ ಮಾತನಾಡಿ, ಸೇವಾ ಮನೋಭಾವ ದೊಂದಿಗೆ ಕಳೆದ ಒಂದು ವರ್ಷದಿಂದ ನಿರಂತರ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಬರುತ್ತಿದ್ದು, ಸಂಘದ ಮೊದಲನೇ ವಾರ್ಷಿ ಕೋತ್ಸವದ ಅಂಗವಾಗಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಎಸ್.ಎನ್.ಡಿ.ಪಿ. ಜಿಲ್ಲಾಧ್ಯಕ್ಷ ವಿ.ಕೆ. ಲೋಕೇಶ್ ಮಾತನಾಡಿ, ಸೇವಾ ಮನೋಭಾವದೊಂದಿಗೆ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡು ಸಂಘಟನೆಗಳ ಮೂಲಕ ಸಂಕಷ್ಟದಲ್ಲಿರುವವರಿಗೆ ನೆರವಾಗುವ ಎಂಬ ಚಿಂತನೆಯನ್ನು ಇಟ್ಟುಕೊಂಡು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವ ಶಿಬಿರದಲ್ಲಿ ೫೦ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿ ಮಾನವೀಯತೆ ತೋರಿದರು. ಸಂತ ಜೋಸೆಫ್‌ರ ಸೇವಾ ಸಂಘದ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಶಿಬಿರ ಕಾರ್ಯಕ್ರಮದಲ್ಲಿ ಸಂತ ಜೋಸೆಫ್ ಚರ್ಚ್ನ ಫಾದರ್ ಮೈಕಲ್ ಮೇರಿ, ಡಾ. ಉದಯ ಕುಮಾರ್, ಡಾ. ಟ್ರೀಸಾ, ಫಾದರ್ ಮ್ಯಾಥ್ಯು, ಸಮಾಜ ಸೇವಕ ಜೋಸೆಫ್ ಶ್ಯಾಮ್, ಜಿಮ್ಮಿ ಸ್ವಕೇರಾ, ಸಾಮಾಜಿಕ ಕಾರ್ಯಕರ್ತ ಎಂ.ಎ. ಅಜೀಜ್, ಸಂಘದ ಉಪಾಧ್ಯಕ್ಷ ಜೋಶಿ, ಕಾರ್ಯದರ್ಶಿ ಸನಿಲ್, ಜೋಯಿ, ವಿನ್ಸಿ, ಜಾರ್ಜ್ ಜೋಸೆಫ್, ತೋಮಸ್ ಸೇರಿದಂತೆ ಮುಂತಾದವರು ಹಾಜರಿದ್ದರು.