ಮಡಿಕೇರಿ, ಅ. ೧೮; ಮಾದಕ ವಸ್ತು ಎಂ.ಡಿ.ಎA.ಎ. ಅನ್ನು ಮಾರಾಟ ಹಾಗೂ ಸಾಗಾಟಕ್ಕೆ ಯತ್ನಿಸಿದ ಇಬ್ಬರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೇರಳ ರಾಜ್ಯದ ಕಾಸರಗೋಡು ಮೂಲದ ಟಿ.ಎಂ. ಅಮೀರ್ (೨೮), ಕೆ. ಮಹಮ್ಮದ್ ಶಬೀರ್ (೩೦) ಬಂಧಿತ ಆರೋಪಿಗಳು. ಮಡಿಕೇರಿ-ಕುಶಾಲನಗರ ರಾಷ್ಟಿçÃಯ ಹೆದ್ದಾರಿ ನಡುವೆ ಈ ಕೃತ್ಯ ಎಸಗುವ ಸಂದರ್ಭ ದಾಳಿ ನಡೆಸಿದ ಪೊಲೀಸರು ೨೦ ಗ್ರಾಂ ಎಂ.ಡಿ.ಎA.ಎ. ಸಹಿತ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮಾದಕ ವಸ್ತು ತಡೆ ಹಿನ್ನೆಲೆ ರಚನೆಯಾಗಿರುವ ಡಿವೈಎಸ್ಪಿ ಜಗದೀಶ್, ಸಿಪಿಐ ಐ.ಪಿ. ಮೇದಪ್ಪ, ಅನೂಪ್ ಮಾದಪ್ಪ, ನಗರ ಪಿಎಸ್ಐ ಲೋಕೇಶ್, ಸಿಬ್ಬಂದಿಗಳು ಹಾಗೂ ಡಿಸಿಆರ್ಬಿ ವಿಶೇಷ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.