ಕೂಡಿಗೆ. ಅ. ೧೮: ತೊರೆನೂರು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆಯು ಸಂಘದ ಸಭಾಂಗಣದಲ್ಲಿ ನಡೆಯಿತು.

೨೦೨೩-೨೮ನೇ ಸಾಲಿನ ಆಡಳಿತ ಮಂಡಳಿಗೆ ೧೨ ಮಂದಿ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ಭಾನುವಾರ ನಡೆಯಿತು.

ಸಾಲಗಾರರ ಸಾಮಾನ್ಯ ಕ್ಷೇತ್ರದ ದಿಂದ ಕೆ.ಎಸ್. ಕೃಷ್ಣಗೌಡ, ಟಿ.ಬಿ. ಜಗದೀಶ್, ಹೆಚ್.ಬಿ. ಚಂದ್ರಪ್ಪ, ಹೆಚ್.ಸಿ. ಮೂರ್ತಿ, ಹೆಚ್.ಟಿ. ಕುಶಾಲಪ್ಪ, ಸಾಲಗಾರ ಮಹಿಳಾ ಕ್ಷೇತ್ರದಿಂದ ಹೇಮ, ಗೌರಮಣಿ ಆಯ್ಕೆಯಾದರು.

ಸಾಲಗಾರ ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಟಿ.ಕೆ. ಉದಯಕುಮಾರ್, ಪರಿಶಿಷ್ಟ ಜಾತಿ ಕ್ಷೇತ್ರದಿಂದ ಹರೀಶ್, ಸಾಲಗಾರ ಹಿಂದುಳಿದ ವರ್ಗ "ಬಿ," ಕ್ಷೇತ್ರದಿಂದ ಕೆ.ಬಿ. ದೇವರಾಜ್, ಸಾಲಗಾರರ ಹಿಂದುಳಿದ ವರ್ಗ "ಎ" ಕ್ಷೇತ್ರದಿಂದ ಟಿ.ಜೆ. ರವಿಕುಮಾರ್ ಮತ್ತು ಸಾಲಗಾರರಲ್ಲದ ಕ್ಷೇತ್ರದಿಂದ ಟಿ.ಎ. ರವಿಚಂದ್ರ ಗೆಲುವು ಸಾಧಿಸಿದರು.

ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆಯ ಕಣದಲ್ಲಿ ಒಟ್ಟು ೩೪ ಅಭ್ಯರ್ಥಿಗಳು ಸ್ಪರ್ಧಿಸಿದರು. ಚುನಾವಣೆಯ ಮತಚಲಾಯಿಸಲು ೮೦೦ ಸಾಲಗಾರರ ಸದಸ್ಯರು ಮತ್ತು ೬೫೦ ಸಾಲಗಾರರಲ್ಲದ ಸದಸ್ಯರು ಅರ್ಹರಾಗಿದ್ದರು. ಇದರಲ್ಲಿ ೭೦೦ ಸದಸ್ಯರು ಚುನಾವಣೆಯಲ್ಲಿ ಮತ ಚಲಾಯಿಸಿದರು.

೧೨ ಸ್ಥಾನಗಳಿಗೆ, ಸಹಕಾರ ಸಂಘದ ವ್ಯಾಪ್ತಿಯ ವಿವಿಧ ಕ್ಷೇತ್ರವಾರು ಹಾಗೂ ಮೀಸಲಾತಿ ಅನ್ವಯ ಚುನಾವಣೆ ನಡೆಯಿತು.

ಚುನಾವಣಾ ಅಧಿಕಾರಿಯಾಗಿ ಸಹಕಾರ ಇಲಾಖೆ ಅಧಿಕಾರಿ ಸಂದೀಪ್. ಅವರ ನೇತೃತ್ವದಲ್ಲಿ ವಿವಿಧ ಸಹಕಾರ ಸಂಘಗಳ ನೌಕರರ ಸಹಕಾರದೊಂದಿಗೆ ಚುನಾವಣಾ ಪ್ರಕ್ರಿಯೆಗಳು ನಡೆದವು.