ಮಡಿಕೇರಿ, ಅ. ೧೮: ಕಿಗ್ಗಟ್‌ನಾಡ್ ಕ್ರಿಕೆಟ್ ಫೆಸ್ಟಿವಲ್ (ಕೆ.ಸಿ.ಎಫ್.) ಸೀಸನ್ ೩ನ್ನು ಕಾಕಮಾಡ ಅಜಿತ್ ಅವರ ನೇತೃತ್ವದಲ್ಲಿ ಡಿ. ೨೮ ರಿಂದ ೩೧ ರವರೆಗೆ ಹಾತೂರು ಸರ್ಕಾರಿ ಶಾಲಾ ಮೈದಾನದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕ್ರೀಡಾಕೂಟವನ್ನು ಸಂಪೂರ್ಣವಾಗಿ ಯೂಟ್ಯೂಬ್‌ನಲ್ಲಿ ನೇರ ಪ್ರಸಾರ ಮಾಡಲಾಗುವುದು ಎಂದು ತಿಳಿಸಿರುವ ಆಯೋಜಕರು, ಕ್ರೀಡಾಕೂಟದಲ್ಲಿ ಪೊನ್ನಂಪೇಟೆ ತಾಲೂಕಿನ ಎಲ್ಲಾ ಕ್ರಿಕೆಟ್ ಕ್ರೀಡಾಪಟುಗಳಿಗೆ ಮುಕ್ತ ಅವಕಾಶವನ್ನು ಕಲ್ಪಿಸಲಾಗಿದೆ. ಕ್ರೀಡಾಕೂಟ ಐ.ಪಿ.ಎಲ್. ಮಾದರಿಯಲ್ಲಿ ಬಿಡ್ಡಿಂಗ್ ಮೂಲಕ ನಡೆಯಲಿದೆ.

ಈಗಾಗಲೇ ಅರ್ಜಿ ಫಾರ್ಮ್ ವಿತರಿಸಲಾಗಿದ್ದು, ಅ. ೨೫ ಹಿಂತಿರುಗಿಸಲು ಕೊನೆಯ ದಿನಾಂಕವಾಗಿದೆ. ನ. ೧೨ ರ ಭಾನುವಾರ ಬಿಡ್ಡಿಂಗ್ ಕಾರ್ಯಕ್ರಮ ನಡೆಯಲಿದೆ. ಕ್ರೀಡಾಕೂಟದಲ್ಲಿ ಹುದಿಕೇರಿ ವಾರಿಯರ್ಸ್, ಎ.ಜೆ ಬಾಯ್ಸ್, ಬಿ.ವೈ.ಸಿ. ಕಾಕೋರು, ಡ್ರೀಮ್ ಕ್ರಷರ್ಸ್, ಟೀಮ್ ಐಕನಿಕ್, ಸ್ಟಾರ್ ವಾರಿಯರ್ಸ್, ಪ್ರೊಟೆಕ್ಟ್ ಕ್ರಿಕೆಟರ್ಸ್, ಟೀಮ್ ಐಲೀನ್, ಟೀಮ್ ಎ.ಬಿ.ಡಿ., ಎವನ್ ಕ್ರಿಕೆಟರ್ಸ್, ಪ್ರತಿಭಾ ಕ್ರಿಕೆಟರ್ಸ್, ಸ್ಟಾರ್ ಇಲೆವೆನ್, ನ್ಯೂ ಸ್ಟೆçöÊಕರ್, ಮನು ಕ್ರಿಕೆಟರ್ಸ್, ರೈಸಿಂಗ್ ಕಮಾಂಡೋಸ್, ಬ್ಲೂ ಬಾಯ್ಸ್ ತಂಡಗಳು ಸೇರಿದಂತೆ ೧೬ ತಂಡಗಳು ಸೆಣಸಾಡಲಿದೆ.

ವಿಜೇತ ತಂಡಕ್ಕೆ ಪ್ರಥಮ ಬಹುಮಾನ ರೂ. ೭೭,೭೭೭ ಮತ್ತು ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ ರೂ. ೪೪,೪೪೪ ಮತ್ತು ಆಕರ್ಷಕ ಟ್ರೋಫಿ ನೀಡಿ ಗೌರವಿಸಲಾಗುವುದು. ಜೊತೆಗೆ ಎಲ್ಲಾ ವೈಯಕ್ತಿಕ ಬಹುಮಾನಗಳು ಹಾಗೂ ಉಳಿದ ೧೪ ತಂಡಗಳಿಗೆ ಆಕರ್ಷಕ ಟ್ರೋಫಿಯನ್ನು ನೀಡಿ ಗೌರವಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.