ವೀರಾಜಪೇಟೆ: ತಲಕಾವೇರಿ ಸನ್ನಿಧಿಯಲ್ಲಿ ಮಂಗಳವಾರ ನಡೆದ ಶ್ರೀ ಕಾವೇರಿ ತೀರ್ಥೋದ್ಭವದ ಪ್ರಯುಕ್ತ ವೀರಾಜಪೇಟೆ ‘ವಿ' ಫ್ರೆಂಡ್ಸ್ ಸಂಸ್ಥೆ ವತಿಯಿಂದ ೨೭ನೇ ವರ್ಷದ ಕಾವೇರಿ ತೀರ್ಥ ಪ್ರಸಾದ ವಿತರಣೆ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು.

ವೀರಾಜಪೇಟೆ ಅಪ್ಪಯ್ಯಸ್ವಾಮಿ ರಸ್ತೆಯಲ್ಲಿರುವ ಕಾವೇರಿ ಆಶ್ರಮದಲ್ಲಿ ಕಾವೇರಿ ತೀರ್ಥಕ್ಕೆ ಪೂಜೆ ಸಲ್ಲಿಸಿದ ಬಳಿಕ ವಾಹನದಲ್ಲಿ ಮಂಟಪದೊAದಿಗೆ ‘ವಿ' ಫ್ರೆಂಡ್ಸ್ ಸದಸ್ಯರು ದೇವಾಂಗಬೀದಿ, ದಖ್ಖನಿಮೊಹಲ್ಲಾ, ತೆಲುಗರಬೀದಿ, ಜೈನರಬೀದಿ, ದೊಡ್ಡಟ್ಟಿ ಚೌಕಿ ಮಾರ್ಗವಾಗಿ ಗಡಿಯಾರ ಕಂಬದ ಬಳಿಯಿಂದ ಮುಖ್ಯರಸ್ತೆ, ಗಾಂಧಿನಗರ, ತಾಲೂಕು ಮೈದಾನ ರಸ್ತೆಯಿಂದ ಚಿಕ್ಕಪೇಟೆ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಸಾರ್ವಜನಿಕರಿಗೆ ಕಾವೇರಿ ತೀರ್ಥ ವಿತರಿಸಲಾಯಿತು.

ಈ ಸಂದರ್ಭ ‘ವಿ' ಫ್ರೆಂಡ್ಸ್ ಅಧ್ಯಕ್ಷ ಸಂಪಿ ಪೂಣಚ್ಚ, ಕಾರ್ಯದರ್ಶಿ ಪಟ್ಟಡ ವಿಜಯ್, ಸದಸ್ಯರಾದ ಜೀವನ್, ಅಪ್ಪನೆರವಂಡ ವಿಜಯ್, ತ್ರಿಶು ಗಣಪತಿ ಮತ್ತಿತರರು ಹಾಜರಿದ್ದರು.

ಅದೆ ರೀತಿ ‘ಹಿಂದೂ ಅಗ್ನಿದಳ' ಸಂಘಟನೆ ವೀರಾಜಪೇಟೆ ಇವರ ವತಿಯಿಂದ ಬುಧವಾರ ಮುಂಜಾನೆಯಿAದ ಕಾವೇರಿ ತೀರ್ಥವನ್ನು ವಾಹನದಲ್ಲಿರಿಸಿ ನಗರದ ಪ್ರಮುಖ ಬೀದಿಗಳಾದ ಮುರ್ನಾಡು ರಸ್ತೆ, ಮೀನುಪೇಟೆ, ಖಾಸಗಿ ಬಸ್ ನಿಲ್ದಾಣ, ಪಂಜರುಪೇಟೆ, ಗೋಣಿಕೊಪ್ಪ ರಸ್ತೆ ಸೇರಿದಂತೆ ನಗರದ ಇತರೆಡೆಗಳಲ್ಲಿ ಹಿಂದೂ ಅಗ್ನಿದಳ ಸದಸ್ಯರು ಉತ್ಸಾಹದಿಂದ ಸಾರ್ವಜನಿಕರಿಗೆ ಕಾವೇರಿ ತೀರ್ಥವನ್ನು ವಿತರಿಸಿದರು.ಮೂರ್ನಾಡು : ಇಲ್ಲಿನ ಗಜಾನನ ಯುವಕ ಸಂಘದ ವತಿಯಿಂದ ಕಾವೇರಿ ತೀರ್ಥವನ್ನು ಮೂರ್ನಾಡಿನ ಪಟ್ಟಣದಲ್ಲಿ ವಿತರಣೆ ಮಾಡಲಾಯಿತು. ಮೂರ್ನಾಡಿನ ಅಯ್ಯಪ್ಪ ದೇವಸ್ಥಾನದಿಂದ ಪ್ರಾರಂಭಿಸಿ ಮೂರ್ನಾಡಿನ ಮುಖ್ಯ ರಸ್ತೆ, ಗಾಂಧಿನಗರ, ಶಾಸ್ತಿçÃನಗರಗಳಲ್ಲಿ ಸಂಘದ ಸದಸ್ಯರು ತೀರ್ಥ ವಿತರಣೆ ಮಾಡಿದರು. ಸಂಘದ ಅಧ್ಯಕ್ಷ ಬಿ.ಎಸ್. ಅರುಣ್ ರೈ ನೇತೃತ್ವದಲ್ಲಿ ಸಂಘದ ಸದಸ್ಯರು ಕಾರ್ಯನಿರ್ವಹಿಸಿದರು.ಕುಶಾಲನಗರ: ಪವಿತ್ರ ಕಾವೇರಿ ತೀರ್ಥೋದ್ಭವ ಅಂಗವಾಗಿ ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಸಂಘ ಸಂಸ್ಥೆಗಳ ಮೂಲಕ ತೀರ್ಥ ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಿತು.

ಕುಶಾಲನಗರದ ಕಾವೇರಿ ತೀರ್ಥ ವಿತರಣಾ ಸಮಿತಿ ವತಿಯಿಂದ ಕುಶಾಲನಗರ ತಾಲೂಕಿನಾದ್ಯಂತ ಕಾವೇರಿ ತೀರ್ಥ ವಿತರಣೆ ಕಾರ್ಯ ನಡೆಯಿತು.

ಕುಶಾಲನಗರ ಕಾರು ನಿಲ್ದಾಣದಲ್ಲಿ ತೀರ್ಥ ವಿತರಣೆ ಕಾರ್ಯಕ್ರಮಕ್ಕೆ ಸಿದ್ದಲಿಂಗಪುರದ ಮಂಜುನಾಥ ಕ್ಷೇತ್ರದ ಗುರುಗಳಾದ ಶ್ರೀ ರಾಜೇಶನಾಥ ಜೀ ತೀರ್ಥ ವಿತರಣೆ ವಾಹನಗಳಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು ಧಾರ್ಮಿಕ ಕಾರ್ಯಕ್ರಮಗಳು, ಇನ್ನಿತರ ಚಟುವಟಿಕೆಗಳ ಮೂಲಕ ನದಿ ಜಲ ಮೂಲಗಳ ಸಂರಕ್ಷಣೆ ಮಾಡಲು ಸಾಧ್ಯ. ಪ್ರತಿಯೊಬ್ಬರೂ ಪ್ರಕೃತಿ ಆರಾಧನೆ ಮಾಡಬೇಕು. ಎಲ್ಲರೂ ಇಂತಹ ಕಾರ್ಯಗಳಿಗೆ ಕೈಜೋಡಿಸಬೇಕಾಗಿದೆ ಎಂದರು.

ಸಮಿತಿಯ ಕಾರ್ಯಕರ್ತರು ಪಟ್ಟಣದ ಎಲ್ಲಾ ದೇವಾಲಯಗಳಿಗೆ ಹಾಗೂ ಕೂಡಿಗೆ, ಕೂಡುಮಂಗಳೂರು ಹಾರಂಗಿ, ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ವಾಹನಗಳ ಮೂಲಕ ತೆರಳಿ ತೀರ್ಥ ವಿತರಣೆ ಮಾಡಿದರು.

ಕಾವೇರಿ ತೀರ್ಥ ವಿತರಣೆ ಸಮಿತಿ ಸಂಚಾಲಕರಾದ ಕೆ.ಎಸ್.ಶಶಿಕುಮಾರ್ ಗೌಡ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.

ಈ ಸಂದರ್ಭ ಕಾವೇರಿ ತೀರ್ಥ ವಿತರಣಾ ಸಮಿತಿ ಪ್ರಮುಖರಾದ ಕೆ.ಜಿ.ಮನು, ಎಂ.ಡಿ.ಕೃಷ್ಣಪ್ಪ, ಕೆ.ಡಿ.ಪ್ರಶಾಂತ್, ರವಿ, ಶಿವಾಜಿ, ಮಂಜು, ಹರೀಶ್, ಮಹೇಶ್ ಮತ್ತಿತರರು ಇದ್ದರು.

ಭಾರವಿ ಸಂಘದಿAದ

ಕುಶಾಲನಗರ, ಕುಶಾಲನಗರ ಕಾವೇರಿ ಪ್ರತಿಮೆ ಬಳಿ ಭಾರವಿ ಕನ್ನಡ ಸಂಘ ನೇತೃತ್ವದಲ್ಲಿ ಕಾವೇರಿ ತೀರ್ಥ ವಿತರಣೆ ಮತ್ತು ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು.

ಇದೇ ಸಂದರ್ಭ ಕಾವೇರಿ ಪ್ರತಿಮೆ ಆವರಣದಲ್ಲಿ ನಿರ್ಮಿಸಿರುವ ಕಾವೇರಿ ಅನ್ನ ಸಂತರ್ಪಣ ಭವನವನ್ನು ಉದ್ಯಮಿ ಎಸ್‌ಎಲ್‌ಎನ್ ಸಾತಪ್ಪನ್ ಉದ್ಘಾಟಿಸಿ ದರು. ಮಡಿಕೇರಿ ಕ್ಷೇತ್ರ ಶಾಸಕ ಡಾ. ಮಂಥರ್ ಗೌಡ ಮತ್ತು ಪಕ್ಷದ ಪ್ರಮು ಖರು ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ತೀರ್ಥ ವಿತರಣೆಗೆ ಚಾಲನೆ ನೀಡಿದರು. ಸುಮಾರು ೫ ಲಕ್ಷದಲ್ಲಿ ನಿರ್ಮಾಣಗೊಂಡಿರುವ ಭವನ ನಿರ್ಮಾಣಕ್ಕೆ ಸಹಕರಿ ಸಿದ ಉದ್ಯಮಿ ಸುದೀಪ್ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು. ಭಕ್ತಾದಿ ಗಳಿಗೆ ತೀರ್ಥ ವಿತರಣೆ ಮತ್ತು ಅನ್ನ ಸಂತರ್ಪಣ ಕಾರ್ಯ ನಡೆಯಿತು. ಭಾರವಿ ಕನ್ನಡ ಸಂಘದ ಪ್ರಮುಖರಾದ ಬಬಿಂದ್ರ ಪ್ರಸಾದ್ ರವೀಂದ್ರ ಪ್ರಸಾದ್ ವಿಜಯೇಂದ್ರ ಪ್ರಸಾದ್ ಉದ್ಯಮಿ ವೆಂಕಟಾಚಲA ಮತ್ತಿತರರು ಇದ್ದರು.

ಚೆಯ್ಯಂಡಾಣೆ: ಮಲ್ಮ ಯುವಕ ಸಂಘ ಕಕ್ಕಬ್ಬೆ ವತಿಯಿಂದ ೧೮ನೇ ವರ್ಷದ ಕಾವೇರಿ ತೀರ್ಥ ವಿತರಣೆ ಚೆಯ್ಯಂಡಾಣೆ ಪಟ್ಟಣದಲ್ಲಿ ನಡೆಯಿತು. ಕಕ್ಕಬ್ಬೆ ಮೂಲಕ ಹಾದು ಚೆಯ್ಯಂಡಾಣೆ ಪಟ್ಟಣದವರೆಗೆ ಕಾವೇರಿ ತೀರ್ಥ ವಿತರಿಸಲಾಯಿತು.ಚೆಟ್ಟಳ್ಳಿ: ಚೆಟ್ಟಳ್ಳಿ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ವತಿಯಿಂದ ೧೬ನೇ ವರ್ಷದ ತೀರ್ಥ ವಿತರಣಾ ಕಾರ್ಯಕ್ರಮ ನೆರವೇರಿತು.

ಸಹಕಾರ ಸಂಘದ ಮುಂದಿರುವ ಕಾವೇರಿ ಮಾತೆಗೆ ವಿಶೇಷ ಅಲಂಕಾರದೊAದಿಗೆ ಪೂಜೆ ಸಲ್ಲಿಸಿ ತೀರ್ಥ ವಿತರಿಸಲಾಯಿತು.

ಈ ಬಾರಿಯ ತುಲಾ ಸಂಕ್ರಮಣ ದಂದು ತಲಕಾವೇರಿಯ ತೀರ್ಥೋ ದ್ಭವದ ಪವಿತ್ರ ತೀರ್ಥವನ್ನು ಸಾರ್ವಜನಿಕರಿಗೆ ವಿತರಿಸಲಾಗುತ್ತಿದೆ.

ಈ ಸಂದರ್ಭ ಚೆಟ್ಟಳ್ಳಿ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರು, ಸಿಬ್ಬಂದಿ ವರ್ಗ ಹಾಗೂ ಸಾರ್ವಜನಿಕರು ಹಾಜರಿದ್ದರು.ಕೂಡಿಗೆ: ಕೂಡಿಗೆ, ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಮತ್ತು ಗ್ರಾಮದ ದೇವಾಲಯದ ಮುಖ್ಯಸ್ಥರ ಸಮ್ಮುಖದಲ್ಲಿ ಮತ್ತು ತೀರ್ಥ ವಿತರಣೆ ಸಮಿತಿ ಪ್ರಮುಖ ಕೆ.ಎಸ್.ಶಶಿಕುಮಾರ್ ಗೌಡ ನೇತೃತ್ವ ದಲ್ಲಿ ವಿತರಣೆ ಮಾಡಲಾಯಿತು. ತಲಕಾವೇರಿಯಿಂದ ತಂದ ತೀರ್ಥವನ್ನು ಕೂಡಿಗೆ ಕೂಡುಮಂಗಳೂರು, ಮುಳ್ಳುಸೋಗೆ ವ್ಯಾಪ್ತಿಯಲ್ಲಿ ತೆರೆದ ವಾಹನ ಗಳಲ್ಲಿ ದೇವಾಲಯಗಳು ಸೇರಿದಂತೆ ಸಾರ್ವಜನಿಕರಿಗೆ ವಿತರಣೆ ಮಾಡಿದರು.

ಈ ಸಂದರ್ಭ ಕಾವೇರಿ ತೀರ್ಥ ವಿತರಣಾ ಸಮಿತಿ ಪ್ರಮುಖರಾದ ಕೆ.ಜಿ. ಮನು, ಎಂ.ಡಿ. ಕೃಷ್ಣಪ್ಪ, ಕೆ.ಡಿ. ಪ್ರಶಾಂತ್, ರವಿ, ಶಿವಾಜಿ, ಮಂಜು, ಹರೀಶ್, ಮಹೇಶ್ ಮತ್ತಿತರರು ಇದ್ದರು.