ಗೋಣಿಕೊಪ್ಪಲು, ಅ. ೧೮: ೪೫ನೇ ವರ್ಷದ ಗೋಣಿಕೊಪ್ಪ ದಸರಾ ಜನೋತ್ಸವದ ಅಂಗವಾಗಿ ಹಲವು ಕಾರ್ಯಕ್ರಮಗಳು ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಯುವ ದಸರಾ ಸಮಿತಿ ವತಿಯಿಂದ ಆಯೋಜನೆಗೊಂಡಿದ್ದ ಬೈಕ್ ಸ್ಟಂಟ್ ಯುವ ಸಮೂಹವನ್ನು ಆಕರ್ಷಿಸಿತು.

ಗೋಣಿಕೊಪ್ಪ ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ಬೈಕ್ ಸ್ಟಂಟ್‌ನಲ್ಲಿ ರೈಡರ್‌ಗಳಾದ ಮೈಸೂರಿನ ಸ್ಯುಮ್‌ಸನ್, ಸೌರಭ್ ಹಾಗೂ ಸಾದವ್ ತಮ್ಮ ಮೂರು ಬೈಕ್‌ಗಳಲ್ಲಿ ಸ್ಟಂಟ್ ಮಾಡಿದರು. ತಂಡದ ಸಾಹಸ ನೋಡುಗರನ್ನು ನಿಬ್ಬೆರಗಾಗುವಂತೆ ಮಾಡಿತು. ವೀಲಿಂಗ್, ಸ್ಟಾಪೀ, ಡಾರ್ನೆಟ್, ಕ್ಯಾನ್ ಕ್ರಶ್, ಫ್ರೀ ಸ್ಟೆöÊಲ್ ವ್ಹೀಲಿಂಗ್ ಸಾಹಸ ಪ್ರದರ್ಶನಗಳು ಸೇರಿದಂತೆ ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು.

ಬೈಕ್ ಸ್ಟಂಟ್ ವೀಕ್ಷಿಸಲು ಜನರು ಕಿಕ್ಕಿರಿದು ಪಾಲ್ಗೊಂಡಿದ್ದರು. ಒಂದೇ ಚಕ್ರದಲ್ಲಿ ಸವಾರಿ, ಬೈಕ್ ಮೇಲೆ ನಿಂತು ಚಲಿಸುವ ಚಾಕಚಕ್ಯತೆಯನ್ನು ಕಣ್ತುಂಬಿಕೊAಡರು. ಕಾವೇರಿ ದಸರಾ ಸಮಿತಿ ಅಧ್ಯಕ್ಷ ಪ್ರಮೋದ್ ಗಣಪತಿ ಖಜಾಂಚಿ ಧ್ಯಾನ್ ಸುಬ್ಬಯ್ಯ, ಯುವ ದಸರಾ ಸಮಿತಿ ಅಧ್ಯಕ್ಷ ನಾಮೇರ ಅಂಕಿತ್‌ಪೊನ್ನಪ್ಪ ಹಾಗೂ ಇವರ ತಂಡದ ಸದಸ್ಯರು ಪಾಲ್ಗೊಂಡಿದ್ದರು.

ಮುಂಜಾನೆ ವೇಳೆ ನಗರದ ಉಮಾಮಹೇಶ್ವರಿ ದೇವಾಲಯ ಆವರಣದಿಂದ ಜಿಲ್ಲಾ ಮಟ್ಟದ ಸೈಕಲ್ ರೇಸ್ ಕ್ರೀಡೆಗೆ ಠಾಣಾಧಿಕಾರಿಗಳಾದ ರೂಪದೇವಿ ಬೀರಾದರ್ ಚಾಲನೆ ನೀಡಿದರು. ಮಕ್ಕಳು,ಮಹಿಳೆಯರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಾಳುಗಳು ಭಾಗವಹಿಸಿದ್ದರು. ವಿಜೇತರಿಗೆ ಕಾವೇರಿ ಕಲಾ ವೇದಿಕೆಯಲ್ಲಿ ಬಹುಮಾನಗಳನ್ನು ನೀಡಲಾಯಿತು.

ಸಂಜೆ ನಡೆದ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯು ಗಮನ ಸೆಳೆಯಿತು. ರಾಜ್ಯದ ವಿವಿಧ ಭಾಗದಿಂದ ನೃತ್ಯ ತಂಡವು ಭಾಗವಹಿಸಿ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾದರು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು.

ಯುವ ದಸರಾ ಸಮಿತಿ ವತಿಯಿಂದ ಆಯೋಜನೆಗೊಂಡಿದ್ದ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಮಡಿಕೇರಿಯ ಟೀಮ್ ಡ್ಯಾನ್ಸ್ ಲ್ಯಾಬ್ ತಮ್ಮದಾಗಿಸಿಕೊಂಡಿತು. ಅಭಿಷೇಕ್ ಹಾಗೂ ತಂಡ ದ್ವಿತೀಯ ಸ್ಥಾನ ಪಡೆಯಿತು. ಮಡಿಕೇರಿಯ ಟೀಮ್ ಗಾಡ್ ತಂಡ ಹಾಗೂ ಚಿಕ್ಕಮಗಳೂರಿನ ಆರ್ಯ ಡ್ಯಾನ್ಸ್ ಸ್ಕೂಲ್ ತೃತೀಯ ಸ್ಥಾನವನ್ನು ಸಮನಾಗಿ ಹಂಚಿಕೊAಡಿತು. ಅಕ್ಷರ ಡ್ಯಾನ್ಸ್ ಸ್ಕೂಲ್ ರಾಯಚೂರು ಸಮಧಾನಕರ ಬಹುಮಾನ ಪಡೆದರು. ಹಲವು ನೃತ್ಯಗಳು ಗಮನ ಸೆಳೆಯುವಲ್ಲಿ ಯಶಸ್ವಿಯಾದವು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಕಾರ್ಯಕ್ರಮ ವೀಕ್ಷಿಸಿದರು. ವಿವಿಧ ಭಾಗದಿಂದ ೧೭ ತಂಡಗಳು ಭಾಗವಹಿಸಿದ್ದರು. ವಿಜೇತರಿಗೆ ದಸರಾ ಸಮಿತಿಯ ಅಧ್ಯಕ್ಷರಾದ ಕುಲ್ಲಚಂಡ ಪ್ರಮೋದ್ ಗಣಪತಿ ಬಹುಮಾನ ವಿತರಿಸಿದರು ಯುವ ದಸರಾ ಸಮಿತಿಯ ಅಂಕಿತ್ ಪೊನ್ನಪ್ಪ, ರಮೇಶ್, ದಿಲನ್ ಚಂಗಪ್ಪ ಸೇರಿದಂತೆ ಇನ್ನಿತರ ಸಮಿತಿ ಸದಸ್ಯರು ಉಪಸ್ಥಿತರಿದ್ದರು.