ಯಂ.ಸಿ. ನಾಣಯ್ಯ ಭರವಸೆ

ಮಡಿಕೇರಿ, ಅ. ೧೮: ಅಮೃತ ಮಹೋತ್ಸವದ ಸಂಭ್ರಮದಲ್ಲಿರಬೇಕಾದ ಫೀ.ಮಾ. ಕೆ.ಎಂ. ಕಾರ್ಯಪ್ಪ ಕಾಲೇಜು ಇಂದು ಮಂಗಳೂರು ವಿಶ್ವ ವಿದ್ಯಾನಿಲಯ ಮತ್ತು ಕೊಡಗು ವಿಶ್ವವಿದ್ಯಾನಿಲಯದ ಗೊಂದಲಕ್ಕೆ ಸಿಲುಕಿ ಮೂಲಭೂತ ಸಮಸ್ಯೆಯನ್ನು ಎದುರಿಸುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಸೆಳೆದು ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುವುದಾಗಿ ಮಾಜಿ ಸಚಿವ ಮೇರಿಯಂಡ ಸಿ. ನಾಣಯ್ಯ ಭರವಸೆ ನೀಡಿದ್ದಾರೆ.

ಕೊಡವ ಮಕ್ಕಡ ಕೂಟ, ಮಂಗಳೂರು ವಿಶ್ವವಿದ್ಯಾನಿಲಯದ ಕೊಡವ ಸಾಂಸ್ಕೃತಿಕ ಅಧ್ಯಯನ ಪೀಠ ಮತ್ತು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಲೇಖಕ ನಾಗೇಶ್ ಕಾಲೂರು ಬರೆದಿರುವ ಶ್ರೀ ಕಾವೇರಿ ದರ್ಶನಂ ಮತ್ತು ಕೊಡಗಿನಿಂದ ಗಿರಿಯವರೆಗೆ (ಮೂಲ ಲೇಖಕರು ದಿ. ಮಳವಂಡ ಗೌರಮ್ಮ ಅಚ್ಚಯ್ಯ) ಕೃತಿಗಳ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಕಾವೇರಿ ದರ್ಶನಂ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಮೂಲಭೂತ ಸೌಲಭ್ಯಗಳಿಂದ ವಂಚಿತವಾಗುತ್ತದೆ ಎಂಬ ಕಾರಣಕ್ಕೆ ತನ್ನ ಅಧಿಕಾರ ಅವಧಿಯಲ್ಲಿಯೇ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜನ್ನು ಮಂಗಳೂರು ವಿಶ್ವ ವಿದ್ಯಾನಿಲಯದ ಭಾಗವಾಗಿ ಮಾಡಲಾಗಿತ್ತು. ಆದರೆ ಇಂದು ಕೊಡಗಿನ ಪ್ರತಿಷ್ಠಿತ ಕಾಲೇಜು ಮೂಲಭೂತ ಸಮಸ್ಯೆಗಳನ್ನು ಎದುರಿಸುತ್ತಿರುವುದು ಬೇಸರದ ವಿಚಾರ ಎಂದ ಅವರು, ಇದು ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಮೇಲೆ ಪ್ರಭಾವ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ತಾನು ಈ ಕಾಲೇಜಿನ ಹಳೇ ವಿದ್ಯಾರ್ಥಿಯಾಗಿದ್ದು, ಕಾಲೇಜಿನ ಸಮಸ್ಯೆಯನ್ನು ಮುಖ್ಯಮಂತ್ರಿಗಳ ಬಳಿ ಚರ್ಚಿಸಿ ಸಮಸ್ಯೆ ಪರಿಹಾರಕ್ಕೆ ಮುಂದಾಗುವುದಾಗಿ ತಿಳಿಸಿದರು. ಕೊಡವ ಮಕ್ಕಡ ಕೂಟದ ಮೂಲಕ ಸಂಘಟನೆಯ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಅವರು ಹಲವು ಬರಹಗಾರರನ್ನು ಪ್ರೋತ್ಸಾಹಿಸುತ್ತಾ ಬಂದಿದ್ದು, ಯುವಕರಿಗೆ ಮಾದರಿಯಾಗಿದ್ದಾರೆ ಎಂದು ನಾಣಯ್ಯ ಹೇಳಿದರು.

ಕೊಡಗಿನಿಂದ ಗಿರಿಯವರೆಗೆ ಮೂಲ ಲೇಖಕರು ದಿ. ಮಳವಂಡ ಗೌರಮ್ಮ ಅಚ್ಚಯ್ಯ ಅವರು ಸ್ವಾತಂತ್ರö್ಯ ಹೋರಾಟಗಾರರ ಕುಟುಂಬದವರಾಗಿದ್ದು, ತಮ್ಮ ಕೃತಿಗಳ ಮೂಲಕ ಬರಹಗಾರರ ಜೀವನ ಚರಿತ್ರೆಯನ್ನು ವಿವರಿಸಿದ್ದಾರೆ. ಅಂದಿನ ಕಾಲದ ಕೊಡಗಿನ ಸಂಪೂರ್ಣ ಚಿತ್ರಣವನ್ನು ಪುಸ್ತಕದಲ್ಲಿ ವಿವರಿಸಿದ್ದು, ಲೇಖಕ ನಾಗೇಶ್ ಕಾಲೂರು ಅವರು ಉತ್ತಮ ರೀತಿಯಲ್ಲಿ ಭಾಷಾಂತರಗೊಳಿಸಿದ್ದಾರೆ. ಶ್ರೀ ಕಾವೇರಿ ದರ್ಶನಂ ಕೃತಿ ಷಟ್ಪದಿ ರೂಪದಲ್ಲಿ ಹಾಡಿನ ರೂಪದಲ್ಲಿ ಬರೆಯಲಾಗಿದೆ. ಕೊಡಗಿನ ಕಾವೇರಿಯ ಇತಿಹಾಸವನ್ನು ತೋರಿಸಿದ್ದು, ಇದು ಜನಾಂಗದ ಗೌರವವನ್ನು ಉಳಿಸುವ ಪುಸ್ತಕವಾಗಿದೆ ಎಂದರು.

ಪದ್ಮಶ್ರೀ ರಾಣಿ ಮಾಚಯ್ಯ ಅವರು ಕಳೆದ ೩೫ ವರ್ಷಗಳಿಂದ ದೇಶ ವಿದೇಶಗಳಲ್ಲಿ ಕೊಡವ ಸಂಸ್ಕೃತಿಯನ್ನು ಪರಿಚಯಿಸಿದ್ದಾರೆ. ಅವರ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸಿರುವುದು ಶ್ಲಾಘನೀಯ. ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಪುಸ್ತಕವನ್ನು ಓದುವ ಮೂಲಕ ಜ್ಞಾನ ಸಂಪಾದಿಸಿಕೊಳ್ಳಬೇಕು. ಶಿಕ್ಷಕರು ಪೋತ್ಸಾಹಿಸುವ ಕೆಲಸ ಮಾಡಬೇಕು ಎಂದು ನಾಣಯ್ಯ ತಿಳಿಸಿದರು.

ಸಾಹಿತಿ ನಾಗೇಶ್ ಕಾಲೂರು ಮಾತನಾಡಿ, ಪ್ರಕೃತಿಯನ್ನು ಉಳಿಸಬೇಕು, ರಾಸಾಯನಿಕ ಗೊಬ್ಬರಗಳ ಬಳಕೆ ಕಡಿಮೆ ಮಾಡಬೇಕು, ಜಲ ಸಂರಕ್ಷಣೆಗೆ ಮುಂದಾಗಬೇಕೆAದು ಕರೆ ನೀಡಿದರು.

ಶ್ರೀ ಕಾವೇರಿ ದರ್ಶನಂ ಪುಸ್ತಕ ಪ್ರಾಕೃತಿಕ ವಿಕೋಪದ ಸಂದರ್ಭ ಸೃಷ್ಠಿಯಾಯಿತು. ಪುರಾಣದಲ್ಲಿರುವ ವಿವಿಧ ವಿಚಾರವನ್ನು ಈ ಪುಸ್ತಕದಲ್ಲಿ ಉಲ್ಲೇಖಿಸಲಾಗಿದ್ದು, ಹಿಂದಿನ ಕಾಲದ ಹಲವು ಸಂಸ್ಕೃತಿಯನ್ನು ಇದರಲ್ಲಿ ಕ್ರೋಡೀಕರಿಸಲಾಗಿದೆ. ಇದರಲ್ಲಿ ೧೮ ಅಧ್ಯಾಯಗಳಿದ್ದು, ಬೇರೆ ಬೇರೆ ಕಥೆಗಳನ್ನು ಉಲ್ಲೇಖ ಮಾಡಲಾಗಿದೆ ಎಂದು ತಿಳಿಸಿದರು.

ಕೊಡಗಿನಿಂದ ಗಿರಿಯವರೆಗೆ ಕೃತಿಯ ಮೂಲ ಲೇಖಕರು ದಿ. ಮಳವಂಡ ಗೌರಮ್ಮ ಅಚ್ಚಯ್ಯ ಅವರಾಗಿದ್ದು, ಅದನ್ನು ಭಾಷಾಂತರಕಾರಗೊಳಿಸಲಾಗಿದೆ. ೧೯೨೫ ರಿಂದ ೨೦೦೦ ಇಸವಿಯ ಸಂಪೂರ್ಣ ಮಾಹಿತಿ ಈ ಪುಸ್ತಕದಲ್ಲಿದ್ದು, ಅಂದಿನ ಪದ್ಧತಿ ಪರಂಪರೆ, ಕೊಡಗಿನ ಜನಜೀವನದ ಬಗ್ಗೆ ವಿವರಿಸಲಾಗಿದೆ ಎಂದರು. ಕೊಡವ ಮಕ್ಕಡ ಕೂಟ ದಾಖಲೆಯ ೭೫ ಪುಸ್ತಕಗಳನ್ನು ಬಿಡುಗಡೆ ಮಾಡಿದ್ದು, ಎಲ್ಲರೂ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಷಟ್ಪದಿ ರೂಪದಲ್ಲಿರುವ ಪುಸ್ತಕವನ್ನು ಗದ್ಯಕ್ಕೆ ತರ್ಜುಮೆ ಮಾಡುವ ಯೋಜನೆ ಇದೆ ಎಂದು ತಿಳಿಸಿದರು.

ಮಂಗಳೂರು ವಿಶ್ವ ವಿದ್ಯಾನಿಲಯದ ಪ್ರೊ. ಕೋಡಿರ ಲೋಕೇಶ್ ಮಾತನಾಡಿ, ಮನುಷ್ಯನ ಜೀವನದಲ್ಲಿ ಧಾರ್ಮಿಕತೆ ಅತ್ಯಂತ ಮುಖ್ಯವೆನಿಸುತ್ತದೆ. ಧಾರ್ಮಿಕ ಜೀವನ ಪುರಾಣದಿಂದ ಕೂಡಿರುತ್ತದೆ. ಪುರಾಣ ಎಂಬುವುದು ಮನುಷ್ಯನ ನಂಬಿಕೆ. ಅದನ್ನು ತೆಗೆದು ಹಾಕಿದರೆ ಮನುಷ್ಯನ ಜೀವನ ಯಾಂತ್ರೀಕೃತಗೊಳ್ಳುತ್ತದೆ ಎಂದರು.

ಕಾವೇರಿ ದರ್ಶನಂ ಪುಸ್ತಕದಲ್ಲಿ ನಾಗರೀಕತೆ ಮತ್ತು ಪರಿಸರದ ನಡುವೆಯ ಹೋರಾಟದ ಶೈಲಿಯನ್ನು ಮನ ಮುಟ್ಟುವಂತೆ ಬರೆದಿದ್ದಾರೆ. ನಮ್ಮ ಸಮಾಜದಲ್ಲಿ ಧಾರ್ಮಿಕತೆ ಹೇಗೆ ಪ್ರಭಾವ ಬೀರಿದೆ ಎಂಬುವುದನ್ನು ತಿಳಿಸಲಾಗಿದೆ ಎಂದು ಹೇಳಿದರು.

ಲೇಖಕಿ ದಿ. ಮಳವಂಡ ಗೌರಮ್ಮ ಅಚ್ಚಯ್ಯ ಅವರ ಕೊಡಗಿನಿಂದ ಗಿರಿಯವರೆಗೆ ಪುಸ್ತಕವನ್ನು ನಾಗೇಶ್ ಕಾಲೂರು ಅವರು ಬಹಳ ಸುಂದರವಾಗಿ ತರ್ಜುಮೆ ಮಾಡಿದ್ದು, ಅದರ ಭಾವಾರ್ಥಕ್ಕೆ ಅಪಚಾರ ಆಗದ ರೀತಿಯಲ್ಲಿ ನೋಡಿಕೊಂಡಿದ್ದಾರೆ ಎಂದರು.

ಕೊಡವ ಸಾಂಸ್ಕೃತಿಕ ಅಧ್ಯಯನಕ್ಕೆ ಸಹಕಾರ ನೀಡಿದ್ದ ಪದ್ಮಶ್ರೀ ರಾಣಿ ಮಾಚಯ್ಯ ಅವರು, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದ ಸಂದರ್ಭ ಅನುದಾನ ನೀಡುವ ಮೂಲಕ ಸಾಕಷ್ಟು ಪ್ರೋತ್ಸಾಹ ನೀಡಿದ್ದಾರೆ ಎಂದು ಸ್ಮರಿಸಿಕೊಂಡರು.

ಕೊಡವ ಸಾಂಸ್ಕೃತಿಕ ಅಧ್ಯಯನ ಪೀಠದ ಸಂಯೋಜಕಿ ಡಾ. ಎಂ.ಎA. ಮೀನಾಕ್ಷಿ ಪ್ರಾಸ್ತಾವಿಕ ಮಾತನಾಡಿ, ಕೊಡವ ಸಾಂಸ್ಕೃತಿಕ ಅಧ್ಯಯನ ಪೀಠ ಕೊಡವ ಭಾಷೆ, ಸಂಸ್ಕೃತಿ, ಇತಿಹಾಸಕ್ಕೆ ಸಂಬAಧಿಸಿದ ಹಲವು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು, ಪುಸ್ತಕಗಳನ್ನು ಬಿಡುಗಡೆ ಮಾಡುತ್ತಾ ಬಂದಿದೆ. ಮುಂದೆಯೂ ಕೊಡಗಿನ ಬಗ್ಗೆ ಅಧ್ಯಯನ ಮತ್ತು ಸಂಶೋಧನೆ ಮಾಡಲಾಗುವುದು ಎಂದರು.

ಕೊಡಗಿನಿAದ ಗಿರಿಯವರೆಗೆ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಪದ್ಮಶ್ರೀ ಐಮುಡಿಯಂಡ ರಾಣಿ ಮಾಚಯ್ಯ, ವಿದ್ಯಾರ್ಥಿಗಳು ತಾವು ಮಾಡುವ ಕೆಲಸವನ್ನು ಹೃದಯದಿಂದ ಮಾಡಬೇಕು, ತಮ್ಮ ಗುರಿಯನ್ನು ಸಾಧಿಸುವ ಛಲ ಹೊಂದಿರಬೇಕು. ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚು ಗುರುತಿಸಿಕೊಳ್ಳಬೇಕು. ತಂದೆತಾಯಿಯನ್ನು ಸಮಾಜದಲ್ಲಿ ಗೌರವದಿಂದ ಕಾಣಬೇಕು ಎಂದರು.

ತಾನು ಹಲವು ಸವಾಲುಗಳ ನಡುವೆ ಪ್ರಪಂಚದಲ್ಲಿ ಉಮ್ಮತ್ತಾಟ್ ಅನ್ನು ಪರಿಚಯಿಸುವ ಕೆಲಸ ಮಾಡಿದ್ದು, ಮುಂದಿನ ದಿನಗಳಲ್ಲಿ ಕತ್ತಿಯಾಟ್ ಮಾಡುವ ಯೋಚನೆಯಿದೆ. ಉಮ್ಮತ್ತಾಟ್‌ನಲ್ಲಿ ಆಸಕ್ತಿ ಇರುವ ವಿದ್ಯಾರ್ಥಿನಿಯರು ತನ್ನನ್ನು ಸಂಪರ್ಕಿಸುವAತೆ ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲ ಪ್ರೊ. ಮೇಜರ್ ಬಿ. ರಾಘವ ಮಾತನಾಡಿ, ಮಾಜಿ ಸಚಿವ ಯಂ.ಸಿ. ನಾಣಯ್ಯ ಅವರು ಕಾಲೇಜಿನ ಸಮಸ್ಯೆಯನ್ನು ಪರಿಹರಿಸಲು ತಮ್ಮದೇ ಆದ ಪ್ರಯತ್ನ ಮಾಡಲು ಮುಂದಾಗಿರುವುದಕ್ಕೆ ಅಭಿನಂದನೆ ಸಲ್ಲಿಸಿದರು. ವಿದ್ಯಾರ್ಥಿಗಳು ಮೊಬೈಲ್‌ಗಳಿಗೆ ಹೆಚ್ಚು ದಾಸರಾಗದೆ ತಮ್ಮದೇ ಆದ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವ ಮೂಲಕ ಶೈಕ್ಷಣಿಕ ಜ್ಞಾನಾರ್ಜನೆಯನ್ನು ಸಂಪಾದಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕೊಡವ ಮಕ್ಕಡ ಕೂಟ ಸಾರಸ್ವತ ಲೋಕಕ್ಕೆ ಅಪಾರ ಕೊಡುಗೆ ನೀಡುತ್ತ್ತಾ ಬಂದಿದ್ದು, ಮುಂದೆ ಮತ್ತಷ್ಟು ಕಾರ್ಯಗಳನ್ನು ಮಾಡುವಂತಾಗಲಿ ಎಂದು ಆಶಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ, ನಾಗೇಶ್ ಕಾಲೂರು ಅವರು ತಮ್ಮ ಮಾತೃ ಭಾಷೆ ತುಳು ಆದರೂ, ಕೊಡವ ಸಾಹಿತ್ಯ ಕ್ಷೇತ್ರಕ್ಕೆ ಹಲವು ಕೊಡುಗೆ ನೀಡಿದ್ದಾರೆ ಎಂದರು.

ವಿದ್ಯಾರ್ಥಿಗಳು ಹೆಚ್ಚು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಪುಸ್ತಕಗಳನ್ನು ಓದದಿದ್ದರೆ ಇತರರೊಂದಿಗೆ ವ್ಯವಹರಿಸಲು ಸಾಧ್ಯವಿಲ್ಲ. ಸಾಮಾಜಿಕ ಜಾಲತಾಣವನ್ನು ಉತ್ತಮ ಕಾರ್ಯಗಳಿಗೆ ಸದುಪಯೋಗ ಪಡಿಸಿಕೊಂಡು ಓದಿನೆಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಐಮುಡಿಯಂಡ ರಾಣಿ ಮಾಚಯ್ಯ, ಶ್ರೀಕಾವೇರಿ ದರ್ಶನಂ ಲೇಖಕ, ಕೊಡಗಿನಿಂದ ಗಿರಿಯವರೆಗೆ (ಮೂಲ ಲೇಖಕರು ದಿ. ಮಳವಂಡ ಗೌರಮ್ಮ ಅಚ್ಚಯ್ಯ) ಭಾಷಾಂತರಕಾರ ನಾಗೇಶ್ ಕಾಲೂರು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಚಿಯಕ್‌ಪೂವಂಡ ಶ್ವೇತ ಚಂಗಪ್ಪ ಪ್ರಾರ್ಥಿಸಿ, ಕರವಂಡ ಸಿ. ಗಣಪತಿ ಸ್ವಾಗತಿಸಿ, ಐಚಂಡ ರಶ್ಮಿ ಮೇದಪ್ಪ ನಿರೂಪಿಸಿದರು. ಬೊಪ್ಪಂಡ ಶಾಮ್ ಪೂಣಚ್ಚ ಅವರು ನಾಗೇಶ್ ಕಾಲೂರು ಅವರ ಪರಿಚಯ ಮಾಡಿದರು. ಪುತ್ತರಿರ ವನಿತಾ ಮುತ್ತಪ್ಪ ವಂದಿಸಿದರು.