ಜಿಲ್ಲೆಯಲ್ಲಿ ಕುಶಾಲನಗರವು ವಾಣಿಜ್ಯ ನಗರವಾಗಿ ಎಷ್ಟು ವೇಗ ಪಡೆದುಕೊಂಡಿದೆಯೋ ಅಷ್ಟೇ ವೇಗವಾಗಿ ನಗರದಲ್ಲಿ ನಿರ್ಗತಿಕರು ಸೇರಿದಂತೆ ಭಿಕ್ಷುಕರ ಮತ್ತು ಮಾನಸಿಕ ರೋಗಿಗಳ ಸಂಖ್ಯೆಯು ಬೆಳೆಯುತ್ತಿದೆ. ಎಲ್ಲೆಂದರಲ್ಲಿ ಕಾಣಸಿಗುವ ಭಿಕ್ಷುಕರಿಗೆ ಸ್ಥಳೀಯರಿಗಿಂತ ಪ್ರವಾಸಿಗರು ಹಾಗೂ ಟಿಬೇಟಿಯನ್ನರ ಬಳಿ ಭಿಕ್ಷೆ ಬೇಡುವುದೆ ಮುಖ್ಯ ಉದ್ದೇಶ, ಕೊಡಗು ಅತೀ ಸುಂದರವಾದ ಪ್ರದೇಶವಾದ ಕಾರಣ ವಿದೇಶಿ ಪ್ರವಾಸಿಗರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕೊಡಗಿಗೆ ಬರುತ್ತಾರೆ. ಆದರೆ, ಅವರಿಗೆ ಇಲ್ಲಿನ ಭಿಕ್ಷುಕರನ್ನು ನೋಡಿ ಆಶ್ಚರ್ಯವೂ ಆಗುತ್ತದೆ, ಕಾರಣ ಇತ್ತೀಚೆಗೆ ಜಗತ್ತಿನಾದ್ಯಂತ ಮುಂದುವರಿದ ಕೆಲವೇ ರಾಷ್ಟçಗಳಲ್ಲಿ ಭಾರತದ ಹೆಸರು ಮುಖ್ಯವಾಹಿನಿಯಲ್ಲಿದೆ. ಆದರೆ ಭಾರತದ ಒಳಗೆ ಬಂದರೆ ಭಿಕ್ಷುಕರ ಸಂಖ್ಯೆ ಇಷ್ಟೊಂದಿದೆ ಎಂದು ಪ್ರವಾಸಿಗರು ಆಶ್ಚರ್ಯಪಡುವಂತಾಗಿದೆ.
ಜೊತೆಗೆ ಮಾನಸಿಕವಾಗಿ ಖಿನ್ನತೆಗೆ ಒಳಗಾದವರ ಸಂಖ್ಯೆಯೂ ಹೆಚ್ಚಾಗಿದೆ. ಎಲ್ಲೆಂದರಲ್ಲಿ ರಸ್ತೆಯಲ್ಲಿ ಸಂಚರಿಸುವ ವಿದ್ಯಾರ್ಥಿಗಳಿಗೆ ಮಹಿಳೆಯರಿಗೆ ಮಾತ್ರವೇನು ಪುರುಷರನ್ನು ಹೆದರಿಸುವ ಕಂಡೂ ಕಾಣದಂತೆ ಸಂಬAಧಪಟ್ಟ ಇಲಾಖೆಯು ಜಾಣ ಕುರುಡಾದರೆ, ಇನ್ನೂ ಕೆಲವು ಮರುಗುವ ಮನಸ್ಸುಗಳಿಗೆ ಅಯ್ಯೋ ಪಾಪ ಯಾರಾದರೂ ಆಸ್ಪತ್ರೆಯಲ್ಲಿ ಚಿಕಿತ್ಸೆಕೊಡಿಸಿದರೆ ಗುಣವಾಗಬಹುದಿತ್ತೇನೋ ಎಂದು ಮನಸ್ಸಿನಲ್ಲಿ ನೊಂದುಕೊಳ್ಳೊದು ಇಲ್ಲಿ ಸಹಜವಾಗಿದೆ.
ಆದರೆ ಯಾರಾದರೂ ಮನಸ್ಸು ಮಾಡಿ ಚಿಕಿತ್ಸೆ ಕೊಡಿಸಲು ಹೊರಟರೆ ಹಲವು ಕಾನೂನು ಎದುರಾಗಬಹುದು ಅದಕ್ಕಾಗಿ ನಮಗೇಕೆ ಊರಿನ ಉಸಾಬರಿ ಎಂದು ಹಲವರು ಬೇಸರ ಪಡುವುದು ಮಾಮೂಲಾಗಿದೆ, ಕುಶಾಲನಗರದಲ್ಲೇ ಈಗ ತಹಶೀಲ್ದಾರ್, ಪೊಲೀಸ್ ಉಪ ಅಧೀಕ್ಷಕರು ಇದ್ದು, ಈ ಬುದ್ಧಿಮಾಂದ್ಯರ ಬಗ್ಗೆ ಗಮನ ಹರಿಸಿದರೆ ಅವರಿಗೆ ಚಿಕಿತ್ಸೆ ನೀಡಬಹುದೇನೋ ಅಥವಾ ಸಂಬAಧಪಟ್ಟ ಇಲಾಖೆಯೂ ಗಮನಹರಿಸಿದರೆ ಆ ಮಾನಸಿಕ ರೋಗಿಗಳು ಗುಣಮುಖರಾಗಬಹುದು. ನಮ್ಮೂರಿನ ಹಾಗೂ ನಮ್ಮ ದೇಶದ ಹೆಸರನ್ನು ಕಾಪಾಡಿಕೊಳ್ಳಲು ಅನುಕೂಲವಾಗುತ್ತದೆ
-ಲೋಕೇಶ್ ಸಾಗರ್ ಬಿ.ಎಸ್.