ವೀರಾಜಪೇಟೆ, ಅ. ೧೮: ಅಂಗನವಾಡಿ ಕಾರ್ಯಕರ್ತೆ ಯರು ಮತ್ತು ಸಹಾಯಕಿಯರು ಮಕ್ಕಳ ಭವಿಷ್ಯ ರೂಪಿಸುವ ಸಾಕಾರ ಮೂರ್ತಿಗಳು ಎಂದು ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರು ಮತ್ತು ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘ ವೀರಾಜಪೇಟೆ ನೂತನ ಸಂಘದ ಉದ್ಘಾಟನಾ ಕಾರ್ಯಕ್ರಮ ಅಮ್ಮತ್ತಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಆಗಮಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕರು. ಅಂಗನವಾಡಿ ಕಾರ್ಯಕರ್ತೆಯರು ಸೇವಾ ಮನೋಭಾವದಿಂದ ಸರ್ಕಾರದಿಂದ ಲಭಿಸುವ ಗೌರವಧನದೊಂದಿಗೆ ಸರ್ಕಾರಿ ಸೇವೆಯನ್ನು ಮಾಡುತಿದ್ದಾರೆ. ಪುಟ್ಟ ಮಕ್ಕಳ ಅರೈಕೆಯೋಂದಿಗೆ ಪೊಷಣೆ, ಶಾಲಾಪೂರ್ವ ಶಿಕ್ಷಣ ನೀಡಿ ಭವಿಷ್ಯ ರೂಪಿಸುವ ಕಾಯಕದಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ. ಮಕ್ಕಳ ಅರೈಕೆಯೋಂದಿಗೆ ಸರ್ಕಾರಿ ಹೆಚ್ಚುವರಿ ಕೆಲಸಗಳಿಂದ ನಿಗದಿತ ಸಮಯಕ್ಕಿಂತ ಹೆಚ್ಚಿನ ಸಮಯ ವಿನಿಯೋಗ ಮಾಡುತಿದ್ದಾರೆ. ಇದು ಸಮಾಜಕ್ಕೆ ನೀಡುವ ಕೊಡುಗೆಯಾಗಿದೆ ಎಂದರು. ತಾತ್ಕಾಲಿಕ ಅಂಗನವಾಡಿ ಕಾರ್ಯಕರ್ತೆಯರ ಪಟ್ಟಿ ಬಗ್ಗೆ ಮಾತನಾಡಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಡತಗಳಿದ್ದು ಅತೀ ಶೀಘ್ರದಲ್ಲಿ ಪರಿಹಾರಕ್ಕೆ ಮುಂದಾಗುತ್ತೇನೆ ಎಂದು ಈ ಸಂದÀರ್ಭದಲ್ಲಿ ಭರವಸೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಂಗನ ವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ಎ.ವಿ. ಶೀಲಾ ಅವರು ಅಂಗನವಾಡಿ ನೌಕರರ ಸಂಘ ಪೊನ್ನಂಪೇಟೆಯಲ್ಲಿ ಕಾರ್ಯನಿರ್ವಹಿಸುತಿತ್ತು. ಪೊನ್ನಂಪೇಟೆ ತಾಲೂಕು ಪ್ರತ್ಯೇಕಗೊಂಡ ನಂತರದಲ್ಲಿ ವೀರಾಜಪೇಟೆ ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘ ಎಂದು ನೂತನ ಸಂಘ ಅಸ್ಥಿತ್ವಕ್ಕೆ ಬಂದಿದೆ. ನೂತನ ಸಂಘ ಕಾರ್ಯರಂಭಗೊAಡು ವರ್ಷ ಕಳೆದಿದ್ದರು ಇದೀಗ ಅಧಿಕೃತವಾಗಿ ಅರಂಭಗೊAಡಿದೆ ಎಂದರು. ಇದೀಗ ಸರ್ಕಾರವು ಎಲ್ಲಾ ಸರ್ಕಾರಿ ಕಾರ್ಯಕ್ರಮಗಳಿಗೆ ಅಂಗನವಾಡಿ ನೌಕರರನ್ನು ಬಳಸಿಕೊಳ್ಳುತ್ತದೆ, ಅಲ್ಲದೆ ನಿಗದಿತ ಸಮಯ ನೀಡಿದೆ ಹೆಚ್ಚುವರಿಯಾಗಿ ದುಡಿಸಿಕೊಳ್ಳುತ್ತದೆ ಅದುದರಿಂದ ತಾತ್ಕಾಲಿಕ ಅಂಗನವಾಡಿ ನೌಕರರ ಪಟ್ಟಿಯನ್ನು ಅಂತಿಮಗೊಳಿಸಿ ಶೀಘ್ರವಾಗಿ ನಿಯುಕ್ತಿಗೊಳಸಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಚೋಂದಮ್ಮ, ಗೌ. ಅಧ್ಯಕ್ಷರಾದ ಮುತಾಹೀರ, ಕಾರ್ಯದರ್ಶಿ ಲೀಲಾವತಿ, ಕ್ಷೇಮನಿಧಿ ಅಧ್ಯಕ್ಷರಾದ ರುಕ್ಮೀಣಿ, ಕಾರ್ಯದರ್ಶಿ ಉಷ ಕುಮಾರಿ, ಖಜಾಂಚಿ ಅರ್ಚನಾ, ಅವರುಗಳು ಉಪಸ್ಥಿತರಿದ್ದರು. ಎ.ಎಂ. ಗುಣಾವತಿ ಸ್ವಾಗತಿಸಿ, ಉಷಾ ಕುಮಾರಿ ನಿರೂಪಣೆ ಮಾಡಿದರು, ಲೀಲಾವತಿ ವಂದಿಸಿದರು.