ಕೊಡಗಿನ ಹಾತೂರು ಗ್ರಾಮದಲ್ಲಿ ಒಕ್ಕಲಿಗರ ರಾಮಚಂದ್ರ ಹಾಗೂ ಬೋಜಮ್ಮ ದಂಪತಿಯರ ಪುತ್ರನಾಗಿ ರಘುನಾಥ್ ಅವರು ೦೧-೧೧-೧೯೮೬ ರಂದು ಜನಿಸಿದರು. ಬಾಲ್ಯದಿಂದಲೇ ಇವರ ತಂದೆ ತಾಯಿ ಹಾಕಿ ಆಡಲು ಪ್ರೋತ್ಸಾಹ ನೀಡಿದರು. ಪ್ರಾಥಮಿಕ ವಿದ್ಯಾಭ್ಯಾಸ ಲಯನ್ಸ್ ಶಾಲೆಯಲ್ಲಿ ಪ್ರಾರಂಭಿಸಿದರು. ಅಲ್ಲಿ ಹಾಕಿ ಆಡುತ್ತಾ S.ಂ.I ಗೆ ಪದಾರ್ಪಣೆ ಮಾಡಿದರು. ಸೆಂಟ್ ಜೋಸೆಫ್ ಶಾಲೆಯಲ್ಲಿ ಪ್ರೌಢಶಿಕ್ಷಣವನ್ನು ಹಾಗೂ ಸುರಾನದಲ್ಲಿ ಕಾಲೇಜು ಶಿಕ್ಷಣವನ್ನು ಮುಗಿಸಿದರು.

೨೦೦೧ ರಿಂದ ೨೦೦೪ ರವರೆಗೆ ಭಾರತದ ಸಬ್ ಜೂನಿಯರ್ ಹಾಗೂ ಜೂನಿಯರ್ ತಂಡಕ್ಕೆ ಆಡಿದರು. ೨೦೦೫ ರಿಂದ ೨೦೧೭ರ ವರೆಗೆ ಭಾರತದ ಸೀನಿಯರ್ ತಂಡದ ಪರವಾಗಿ ಆಡಿದರು. ೨೦೧೩ ರಿಂದ ೨೦೧೫ರ ವರೆಗೆ ಭಾರತ ತಂಡದ ಉಪನಾಯಕರಾಗಿದ್ದರು. ೨೦೧೬ರ ಚಾಂಪಿಯನ್ ಟ್ರೋಫಿಯ ಭಾರತ ತಂಡದ ನಾಯಕರಾಗಿದ್ದರು. ೨೦೧೨ರಲ್ಲಿ ಲಂಡನ್ ಹಾಗೂ ೨೦೧೬ರಲ್ಲಿ ರಿಯೋ ಒಲಂಪಿಕ್ಸ್ ನಲ್ಲಿ ಭಾಗವಹಿಸಿದ್ದರು.

ಇವರು ಮುಡಿಗೇರಿಸಿಕೊಂಡ ಪುರಸ್ಕಾರಗಳು : ೨೦೧೦ರಲ್ಲಿ ಏಕಲವ್ಯ ಪ್ರಶಸ್ತಿ, ೨೦೧೩ರಲ್ಲಿ ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಪ್ರಶಸ್ತಿ, ೨೦೧೫ರಲ್ಲಿ ೨೦೦ ಪಂದ್ಯಗಳನ್ನು ಆಡಿದ್ದಕ್ಕಾಗಿ ಮೈಲ್ ಸ್ಟೋನ್ ಪ್ರಶಸ್ತಿ ಹಾಗೂ ಏಷ್ಯಾ ಕಪ್ ನ ಉತ್ತಮ ಆಟಗಾರ ಪ್ರಶಸ್ತಿ, ೨೦೧೬ರಲ್ಲಿ ಅರ್ಜುನ ಪ್ರಶಸ್ತಿ, ಖಿಔISಂಯ ೨೦೧೭ರ ಉತ್ತಮ ಆಟಗಾರ ಪ್ರಶಸ್ತಿ ಹಾಗೂ ೨೦೧೭ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಇತರರಿಗೆ ಮಾದರಿ : ಇಷ್ಟು ದೊಡ್ಡ ಆಟಗಾರ, ಕೊಡಗಿನಲ್ಲಿ ಎಲ್ಲೇ ಹಿರಿಯರನ್ನು ಕಂಡರೂ ಬಹಳಷ್ಟು ವಿನಯ ಹಾಗೂ ಗೌರವದಿಂದ ಮಾತನಾಡುತ್ತಾರೆ. ಇದು ಇತರ ಆಟಗಾರರಿಗೆ ಮಾದರಿ ಎಂದೇ ಹೇಳಬಹುದು. ವಿಶ್ವದ ಡ್ರಾಗ್ ಫ್ಲಿಕರ್ ಹಾಲೆಂಡ್ ದೇಶದ ಬೋವೆಲೆಂಡರ್ ಅವರು ಇವರನ್ನು ಅತ್ಯುತ್ತಮ ಡ್ರಾಗ್ ಫ್ಲಿಕರ್ ಎಂದು ಬಣ್ಣಿಸಿದರು.

೨೦೧೮ರಲ್ಲಿ ಕುಲ್ಲೆಟೀರ ಕೌಟುಂಬಿಕ ಹಾಕಿ ಹಬ್ಬದಲ್ಲಿ ಕರ್ನಾಟಕ ಹಾಗೂ ಒಲಂಪಿಯನ್ ತಂಡಗಳ ನಡುವೆ ಪ್ರದರ್ಶನ ಪಂದ್ಯ ನಡೆಯುವಾಗ ರಘುನಾಥ್ ಅವರು ಮೈದಾನಕ್ಕೆ ಇಳಿದಾಗ ಅವರ ತಂದೆ ತಾಯಿಯ ಸಡಗರ ಹಾಗೂ ಸಂಭ್ರಮ ಮುಗಿಲು ಮುಟ್ಟಿತ್ತು. ಅವರ ತಂದೆ ರಾಮಚಂದ್ರ ಅವರು S.ಂ.I ಯ ಹಾಕಿ ತರಬೇತಿದಾರ ರಾಗಿ ಅದೆಷ್ಟೋ ಆಟಗಾರ ರನ್ನು ತಯಾರು ಮಾಡಿದ್ದಾರೆ. ಈ ಹಾಕಿ ಹಬ್ಬದಲ್ಲಿ ಕುಲ್ಲೆಟೀರ ಕುಟುಂಬ ದವರು ಕೊಡಗಿನ ಸಾಂಪ್ರದಾಯಿಕ ಒಡಿಕತ್ತಿಯನ್ನು ನೀಡಿ ರಘು ಅವರನ್ನು ಗೌರವಿಸಿದರು.

ಕೊಡಗಿನ ದಾಖಲೆ : ರಘುನಾಥ್ ಅವರು ಕೊಡಗಿನಿಂದ, ಭಾರತ ತಂಡದಲ್ಲಿ ೩೦೩ ಪಂದ್ಯಗಳನ್ನು ಆಡಿ, ೧೫೧ ಗೋಲುಗಳನ್ನು ಬಾರಿಸಿ, ಹಲವು ಪುರಸ್ಕಾರಗಳನ್ನು ಗಳಿಸಿದ, ಕೊಡಗಿನ ಹಾಕಿಯ ಚರಿತ್ರೆಯಲ್ಲಿ ಬಂಗಾರದ ಅಕ್ಷರದಲ್ಲಿ ಹೆಸರು ಬರೆಯಬಹುದಾದ ಹಾಕಿ ಆಟಗಾರ.ಲಯನ್ಸ್ ಸಂಸ್ಥೆ: ಇವರ ಅನಿಸಿಕೆ ಪ್ರಕಾರ ಲಯನ್ಸ್ ಸಂಸ್ಥೆಯ ದೈಹಿಕ ಶಿಕ್ಷಣ ಹಾಗೂ ಎಲ್ಲಾ ಶಿಕ್ಷಕರು ಹಾಕಿಕೊಟ್ಟ ಅಡಿಪಾಯ ಮರೆಯಲಾಗದು. ಅವರಿಗೆ ಜೀವನಪರ್ಯಂತ ನಮನಗಳನ್ನು ಸಲ್ಲಿಸುತ್ತೇನೆ ಎಂದು ಈಗಲೂ ನುಡಿಯುತ್ತಾರೆ. ಇತ್ತೀಚೆಗೆ ಲಯನ್ಸ್ ಸಂಸ್ಥೆಯಲ್ಲಿ ಆಸ್ಟೊçÃಟರ್ಫನ್ನು ಅಳವಡಿಸಿದ್ದನ್ನು ನೋಡಿ ಸಂಸ್ಥೆಗೆ ಧನ್ಯವಾದವನ್ನು ಕೂಡ ಅರ್ಪಿಸಿದರು.

ಹೆಚ್ಚಿನ ಜವಾಬ್ದಾರಿ: ಪ್ರಸ್ತುತ ಇವರು ಹಾಕಿ ಇಂಡಿಯಾದ ಆಯ್ಕೆದಾರರಾಗಿದ್ದಾರೆ ಹಾಗೂ ಹಾಕಿ ಕರ್ನಾಟಕದ ಉಪಾಧ್ಯಕ್ಷರು. ಬಹಳಷ್ಟು ಪೋಷಕರು ಹಾಗೂ ಕ್ರೀಡಾಭಿಮಾನಿಗಳು ಇವರ ಮೇಲಿನ ನಂಬಿಕೆಯಿAದ, ಕೊಡಗಿನಿಂದ ಆಟಗಾರರು ಭಾರತ ತಂಡಕ್ಕೆ ಹೋಗ ಬಹುದು ಎಂದು ತಮ್ಮ ಮನದಾಳದ ಮಾತನ್ನು ಹೇಳಿದ್ದಾರೆ. ಇದು ಕೊನೆಯ ತಂತಿ ತುಂಡಾದರೆ ಕೊಡಗಿಗೆ ಭವಿಷ್ಯವೇ ಇಲ್ಲ ಎಂಬುದು ಹಿರಿಯ ಆಟಗಾರರ ಅನಿಸಿಕೆ.

ಪ್ರಸ್ತುತ ಇವರು ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ತಮ್ಮ ಪತ್ನಿ ಸೂರ್ಯ ಹಾಗೂ ಮಗಳು ಶಾರ್ವಿ ಅವರೊಡನೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇವರ ಅಭಿಲಾಷೆಯಂತೆ ಚಿಕ್ಕ ಮಕ್ಕಳಿಗೆ ಯಾವ ಕ್ರೀಡೆಯಲ್ಲಾದರೂ ಮುನ್ನಡೆಸುವ ಹಂಬಲದಿAದ ತರಬೇತಿ ನೀಡುತ್ತಾ ಬರುತ್ತಿದ್ದಾರೆ. ಇಂತಹ ಹಾಕಿಯ ಮಹಾನ್ ವ್ಯಕ್ತಿ ಕೊಡಗಿನ ಹಾಕಿಗೆ ಮಾಡಬೇಕಾಗಿದ್ದು ಬಹಳಷ್ಟು ಇದೆ. ಇವರ ಬಗೆಗಿನ ಈ ಬರಹ ಎಲ್ಲರಿಗೂ ಮಾದರಿಯಾಗಲಿ ಎಂಬುದು ಕ್ರೀಡಾ ಅಭಿಮಾನಿಗಳ ಆಸೆ. ಕೊಡಗಿನ ಜನ ಇವರ ಮೇಲೆ ಅಪಾರ ನಂಬಿಕೆಯನ್ನು ಇಟ್ಟಿದ್ದಾರೆ. ಇದನ್ನು ಈಡೇರಿಸುತ್ತಾರೆ ಎಂಬ ಬಯಕೆ ಕಾವೇರಿ ಮಾತೆಯ ಮಡಿಲಲ್ಲಿದೆ.

-ಸಿ. ಎ. ಕಾರ್ಯಪ್ಪ, ನೊಕ್ಯ.