ಮಡಿಕೇರಿ, ಅ. ೧೮: ಕಾವೇರಿ ತುಲಾಸಂಕ್ರಮಣದ ಹಿನ್ನೆಲೆ ಕಾವೇರಿ ತೀರ್ಥೋದ್ಭವದ ಮರುದಿನ ದೇವಟ್ ಪರಂಬುವಿಗೆ ಭೇಟಿ ನೀಡಿದ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಹಾಗೂ ಸದಸ್ಯರು ಅಗಲಿದ ಹಿರಿಯರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಕೊಡವ ಸಂಪ್ರದಾಯದAತೆ ದೋಸೆ, ಪುಟ್ಟ್ ಮತ್ತು ಬೊತ್ತ್ ಬಳ್ಳಿಯನ್ನು ಇರಿಸಿ, ಲೋಕ ಕಲ್ಯಾಣಕ್ಕಾಗಿ ಕಾವೇರಿ ಮಾತೆಯನ್ನು ಸ್ಮರಿಸಿದರು. ದೇವಟ್ ಪರಂಬು ನರಮೇಧದಲ್ಲಿ ಮೃತಪಟ್ಟ ಹಿರಿಯರಿಗೆ ಗೌರವ ಸಲ್ಲಿಸಿದ ನಾಚಪ್ಪ ಅವರು, ಕೊಡವರ ಹಿತ ಕಾಯಲು ಸಂವಿಧಾನಾತ್ಮಕ ಹೋರಾಟಕ್ಕೆ ಸಿಎನ್‌ಸಿ ಬದ್ಧವಾಗಿದೆ ಎಂದರು.

ಇದೇ ಸಂದರ್ಭ ವಿವಿಧ ಹಕ್ಕೋತ್ತಾಯಗಳನ್ನು ಮಂಡಿಸಿದರು. ಸಿಎನ್‌ಸಿ ಸದಸ್ಯರುಗಳಾದ ಕಲಿಯಂಡ ಪ್ರಕಾಶ್, ಅಳಮಂಡ ಜೈ, ಕಾಂಡೇರ ಸುರೇಶ್, ಪಟ್ಟಮಾಡ ಕುಶ, ಅರೆಯಡ ಗಿರೀಶ್, ಮಂದಪAಡ ಮನೋಜ್, ಮಣವಟ್ಟೀರ ಜಗದೀಶ್, ಮಣವಟ್ಟೀರ ಜೀವಿತ್ ಬೊಳ್ಳಿಯಪ್ಪ, ಮಣವಟ್ಟೀರ ಉತ್ತಮ ಅಯ್ಯಪ್ಪ, ಮಂದಪAಡ ಸೂರಜ್, ಚೀಯಬೆರ ಸತೀಶ್ ಮತ್ತಿತರರು ಪಾಲ್ಗೊಂಡು ಪವಿತ್ರ ಕಾವೇರಿ ತೀರ್ಥವನ್ನಿರಿಸಿ ಹಿರಿಯರನ್ನು ಪ್ರಾರ್ಥಿಸಿದರು.