*ಗೋಣಿಕೊಪ್ಪ, ಅ. ೧೭: ದಸರಾ ಪ್ರಯುಕ್ತ ತಾ.೨೨ ರಂದು ಕಾವೇರಿ ಕಲಾ ವೇದಿಕೆಯಲ್ಲಿ ಬಹುಭಾಷಾ ಕವಿಗೋಷ್ಠಿ ಆಯೋಜಿಸಲಾಗಿದೆ ಎಂದು ದಸರಾ ಕವಿಗೋಷ್ಠಿ ಸಂಚಾಲಕ ಕೆ. ಬಿ. ಜಗದೀಶ್ ಜೋಡುಬೀಟಿ ತಿಳಿಸಿದ್ದಾರೆ.
ಕೊಡವ, ಯರವ, ಕುಂಬಾರ, ಅರೆಭಾಷೆ, ಇಂಗ್ಲೀಷ್, ಕನ್ನಡ ಭಾಷೆಗಳ ಕವನಗಳಿದ್ದು, ಕವಿಗಳು ಆಗಮಿಸಿ ವಾಚಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮೊದಲ ಬಾರಿ ಸುಮಾರು ೧೩೦ ಕ್ಕೂ ಹೆಚ್ಚು ಕವನಗಳು ಆಯ್ಕೆಗೆ ಕವಿಗಳು ಕಳುಹಿಸಿರುವುದು ವಿಶೇಷವಾಗಿದೆ. ೬೦ ಕವನಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಅಂದು ಬೆಳಗ್ಗೆ ೧೦.೩೦ ಗಂಟೆಗೆ ಕವಿ ಸುನಿತಾ ಕುಶಾಲನಗರ ಉದ್ಘಾಟಿಸಲಿದ್ದಾರೆ. ಕವಿ ಮಮತಾ ಅರಸಿಕೆರೆ ಅಧ್ಯಕ್ಷತೆ ವಹಿಸಲಿದ್ದು, ಉಪನ್ಯಾಸಕ ಡಾ. ಜಮೀರ್ಅಹಮ್ಮದ್ ಅಶಯ ನುಡಿಯನ್ನಾಡಲಿದ್ದಾರೆ. ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮನ್ನಕಮನೆ ಸೌಮ್ಯಬಾಲು, ಸಂಚಾಲಕ ಜಗದೀಶ್ ಜೋಡುಬೀಟಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ಸಮಿತಿ ಸದಸ್ಯರಾದ ಎಸ್.ಎಂ. ರಜನಿ, ಮನೆಯಪಂಡ ಶೀಲಾ ಬೋಪಣ್ಣ, ಚಂದನ ಮಂಜುನಾಥ್, ಎಂ.ಎA. ಚನ್ನನಾಯಕ, ವಾಮನ ಇದ್ದರು