ಮಡಿಕೇರಿ, ಅ. ೧೭: ದಸರಾ ಮಹೋತ್ಸವದ ಪ್ರಯುಕ್ತ ತಾ.೨೧ರಂದು ಮಡಿಕೇರಿಯಲ್ಲಿ ಯುವ ದಸರಾ ಆಯೋಜಿಸಲಾಗಿದೆ ಎಂದು ಯುವ ದಸರಾ ಸಮಿತಿ ಪ್ರಮುಖರಾದ ಆರ್.ಬಿ. ರವಿ ಹಾಗೂ ಸೋಮಶೇಖರ್ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಅಂದು ಬೆಳಿಗ್ಗೆ ೭.೩೦ ರಿಂದ ಗ್ರೀನ್ ಸಿಟಿ ಫೋರಂ ಸಹಕಾರದೊಂದಿಗೆ ಸೈಕಲ್ ಜಾಥಾ ಬಳಿಕ ಸೂಪರ್ ಬೈಕ್, ಬೈಕ್ ಸ್ಟಂಟ್ ಸೇರಿದಂತೆ ಏಳರಿಂದ ಎಂಟು ನೃತ್ಯ ತಂಡಗಳಿAದ ನೃತ್ಯ ಪ್ರದರ್ಶನ, ಮಹಿಳೆಯರಿಗೆ ವಿವಿಧ ಸ್ಪರ್ಧೆಗಳು ನಡೆಯಲಿವೆ. ಕನ್ನಡ ಚಿತ್ರರಂಗದ ಖ್ಯಾತ ರ್ಯಾಪರ್ ಚಂದನ್ಶೆಟ್ಟಿ, ಡಿಜೆ ಸೋಮಯ್ಯ, ಡಿಜೆ ಮಿಸ್ ಎಫ್ಟಿವಿ ಇವರುಗಳಿಂದ ವಿಶೇಷ ಕಾರ್ಯಕ್ರಮಗಳು ಮೂಡಿಬರಲಿವೆ ಎಂದು ಅವರು ಮಾಹಿತಿಯಿತ್ತರು.
ಗೋಷ್ಠಿಯಲ್ಲಿ ಸಮಿತಿಯ ಮೋಹನ್, ಯಕ್ಷಿತ್, ಕವನ್, ದಿಶಾಂತ್ ಉಪಸ್ಥಿತರಿದ್ದರು.