ಮಡಿಕೇರಿ, ಅ. ೧೭: ಅಕ್ರಮವಾಗಿ ಲಾರಿಯಲ್ಲಿ ಮರದ ನಾಟಗಳನ್ನು ಸಾಗಾಟ ಮಾಡುತ್ತಿದ್ದ ಓರ್ವನನ್ನು ಅರಣ್ಯ ಇಲಾಖೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ತಲೆಮರೆಸಿ ಕೊಂಡಿರುವ ಇಬ್ಬರ ಪತ್ತೆಗೆ ಬಲೆ ಬೀಸಿದೆ.
ಚಾಲಕ ಕೆ. ಜಯನ್ ಬಂಧಿತ ಆರೋಪಿ. ದಾಳಿ ಸಂದರ್ಭ ಪರಾರಿಯಾದ ಮಡಿಕೇರಿಯ ರಾಣಿಪೇಟೆಯ ಅಬ್ದುಲ್ ಸಲೀಂ, ನಾಪೋಕ್ಲಿನ ಬೇತು ಗ್ರಾಮದ ಬಿ.ಎ. ಅಬ್ಬಾಸ್ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆ.
ಮೂರ್ನಾಡಿನಿಂದ ಮಡಿಕೇರಿ ಕಡೆಗೆ ಲಾರಿಯಲ್ಲಿ ಹಲಸು ಹಾಗೂ ಕರಡಿ ಮರಗಳನ್ನು ಕಡಿದು ನಾಟಗಳನ್ನು ಪರಿವರ್ತಿಸಿ ಸಾಗಾಟ ಮಾಡುವ ಸಂದರ್ಭ ದಾಳಿ ನಡೆಸಿದ ಸಿಬ್ಬಂದಿಗಳು ಮಾಲು ಸಹಿತ ಓರ್ವನನ್ನು ಬಂಧಿಸಿದ್ದಾರೆ.
ಡಿಸಿಎಫ್ ಭಾಸ್ಕರ್ ಮಾರ್ಗ ದರ್ಶನ, ಎಸಿಎಫ್ ಮೋಷಿನ್ ಪಾಷಾ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆರ್ಎಫ್ಓ ರವೀಂದ್ರ, ಡಿಆರ್ಎಫ್ಓ ಮಕ್ಕಯ್ಯ ಹಿರಿಮಠ್, ಬಿ.ಹೆಚ್. ಸಚಿನ್, ಗಸ್ತು ಅರಣ್ಯ ಪಾಲಕಿ ಹೆಚ್.ಪಿ. ಭವ್ಯ, ಅರಣ್ಯ ವೀಕ್ಷಕ ವಾಸುದೇವ್, ಸಿಬ್ಬಂದಿಗಳಾದ ನಿಖಿಲ್ಶರತ್, ವಿಕ್ಕಿನ್, ಚಾಲಕರುಗಳಾದ ಸಂಜು, ಮೋಹನ್, ಜೀವನ್, ಇದ್ದರು.