ಶನಿವಾರಸಂತೆ, ಅ. ೧೮: ಬಂಟ್ವಾಳ ತಾಲೂಕಿನ ಗೋವಿನ ತೋಟ ಪುದುವಿನ ಬ್ರಹ್ಮಗಿರಿಯ ಶ್ರೀ ರಾಧಾ ಸುರಭಿ ಗೋ ಮಂದಿರ ರಾಷ್ಟಿçÃಯ ಗೋಸೇವಾ ಸಂಸ್ಥಾನ ಹಾಗೂ ಕರ್ನಾಟಕ ಗೋ ಸೇವಾ ಗತಿವಿಧಿ ಸಂಯುಕ್ತ ಆಶ್ರಯದಲ್ಲಿ ಭಕ್ತಿ ಭೂಷಣ್ ದಾಸ್ ಪ್ರಭೂಜಿ ಅವರ ಮಾರ್ಗದರ್ಶನದಲ್ಲಿ ಧರ್ಮಾಧಾರಿತ ವಿಶ್ವಗುರು ಭಾರತಕ್ಕಾಗಿ ನಡೆಯಲಿ ರುವ ಗೋ ನವರಾತ್ರಿ ಉತ್ಸವ ಕಾರ್ಯದ ಪೂರ್ವಭಾವಿಯಾಗಿ ಹಮ್ಮಿಕೊಂಡಿರುವ ಗೋ ರಥಯಾತ್ರೆ ಕೊಡಗು ಜಿಲ್ಲೆಯಾದ್ಯಂತ ಸಂಚರಿ ಸಲಿದ್ದು ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಇರುವ ಅಲಂಕೃತ ಬನ್ನಿ ಮಂಟಪಕ್ಕೆ ಆಗಮಿಸಿತು.
ಪಟ್ಟಣದಲ್ಲಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಗೋ ರಥ ಯಾತ್ರೆಗೆ ಭವ್ಯ ಸ್ವಾಗತ ದೊರೆಯಿತು. ರಥದಲ್ಲಿದ್ದ ಗೋಮಾತೆಗೆ ಹಾಗೂ ಶ್ರೀಕೃಷ್ಣ ಮೂರ್ತಿಗೆ ವಿಜಯ ವಿನಾಯಕ ದೇವಸ್ಥಾನದ ಅರ್ಚಕ ಮಂಜುನಾಥ್ ಶರ್ಮ ಪೂಜೆ ಸಲ್ಲಿಸಿ ಗೌರವಿಸಿದರು.
ಈ ಸಂದರ್ಭ ಹಿಂದೂ ಜಾಗರಣ ವೇದಿಕೆಯ ಗೌರವಾಧ್ಯಕ್ಷ ಸೋಮ ಶೇಖರ್ ಪೂಜಾರಿ, ಅಧ್ಯಕ್ಷ ಪುನೀತ್, ಪದಾಧಿಕಾರಿಗಳಾದ ಅರುಣ್ ಕುಮಾರ್, ಪೃಥ್ವಿ, ಸಚಿನ್, ಸಂದೀಪ್, ಎಸ್.ಎನ್, ರಘು, ಸಂದೀಪ್, ಎಚ್.ಆರ್.ಪ್ರಭಾಕರ್ ಹಾಗೂ ಇತರ ಕಾರ್ಯಕರ್ತರು ಹಾಜರಿದ್ದು ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡರು.