ಆರೋಪಿಯ ಬಂಧನ

ಮಡಿಕೇರಿ, ಅ. ೧೭: ಸಾಮಾಜಿಕ ಜಾಲತಾಣ ‘ಇನ್ಸಾ÷್ಟಗ್ರಾಂ’ನಲ್ಲಿ ಪರಿಚಯವಾದ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಕೊಡಗಿಗೆ ಕರೆ ತಂದು ಸಂಬAಧಿಕರ ಮನೆಯಲ್ಲಿ ಅತ್ಯಾಚಾರ ಮಾಡಿರುವ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಮೂಲದ ಯಜ್ಞೇಶ (೨೨) ಎಂದು ಗುರುತಿಸಲಾಗಿದೆ. ಈತನಿಗೆ ಕಳೆದ ಆರು ತಿಂಗಳ ಹಿಂದಷ್ಟೇ ಪುತ್ತೂರಿನ ೧೭ ವಯಸ್ಸಿನ ಬಾಲಕಿಯೊಬ್ಬಳ ಪರಿಚಯ ಆಗಿದೆ. ಪರಸ್ಪರ ಚಾಟಿಂಗ್ ಮೂಲಕ ಸಂಪರ್ಕದಲ್ಲಿದ್ದ ಬಾಲಕಿಯನ್ನು ಆರೋಪಿಯು ಮಡಿಕೇರಿಗೆ ಕರೆ ತಂದಿದ್ದಾನೆ. ನಂತರ ಮಡಿಕೇರಿ-ಕುಶಾಲನಗರದ ನಡುವೆ ಇರುವ ತನ್ನ ಸಂಬAಧಿಕರ ಮನೆಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ. ನಂತರ ಪುತ್ತೂರಿಗೆ ವಾಪಸ್ ಕರೆದುಕೊಂಡು ಹೋಗಿ ಬಿಟ್ಟಿದ್ದಾನೆ.

ತನ್ನ ಗೆಳತಿಯ ಮನೆಗೆ ಹೋಗುವುದಾಗಿ ತಿಳಿಸಿ ಮನೆಯಿಂದ ಹೋಗಿದ್ದ ಯುವತಿಯು ಹಿಂತಿರುಗಿ ಬಂದ ನಂತರ ಪೋಷಕರಿಗೆ ತನಗಾದ ಅನ್ಯಾಯವನ್ನು ತಿಳಿಸಿದ್ದಾಳೆ. ಕೂಡಲೇ ಶನಿವಾರ ಪುತ್ತೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೋಕ್ಸೋ ಕಾಯ್ದೆಯಡಿ ಮೊಕದ್ದಮೆ ದಾಖಲಾಗುತ್ತಿದ್ದಂತೆ ಆರೋಪಿ ನಾಪತ್ತೆ ಆಗಿದ್ದಾನೆ.

ಬೆಂಗಳೂರಿನಲ್ಲಿ ಅಡಗಿಕೊಂಡಿದ್ದ ಆರೋಪಿಯನ್ನು ಮಹಿಳಾ ಠಾಣೆ ಪೊಲೀಸರು ಬಂಧಿಸಿ ಕರೆ ತಂದಿದ್ದು ಪುತ್ತೂರಿನ ಪ್ರಥಮ ದರ್ಜೆ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದಾರೆ. ಆರೋಪಿಗೆ ನ್ಯಾಯಾಲಯವು ೧೪ ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ತನಿಖೆ ಮುಂದುವರೆದಿದೆ ಎಂದು ಮಹಿಳಾ ಠಾಣೆ ಇನ್ಸ್ಪೆಕ್ಟರ್ ಮಧುಸೂದನ ರಾವ್ ತಿಳಿಸಿದ್ದಾರೆ. -ಕೋವರ್ ಕೊಲ್ಲಿ ಇಂದ್ರೇಶ್