ಮಡಿಕೇರಿ ಅ.೧೮ - ಮಡಿಕೇರಿ ದಸರಾ ಸಂದರ್ಭ ಅ.೨೨ ರಂದು ಆಯೋಜಿಸಲ್ಪಟ್ಟಿದ್ದ ಭಾರತದ ಹೆಸರಾಂತ ಗಾಯಕ ವಿಜಯ ಪ್ರಕಾಶ್ ಗಾಯನ ಕಾರ್ಯಕ್ರಮವನ್ನು ಅ.೨೩ ರಂದು ಆಯುಧ ಪೂಜೆಗೆ ನಿಗಧಿ ಪಡಿಸ ಲಾಗಿದೆ. ವಿಜಯಪ್ರಕಾಶ್ ಅವರನ್ನು ಮೈಸೂರಿನಲ್ಲಿ ಭೇಟಿಯಾದ ಮಡಿಕೇರಿ ಶಾಸಕ ಡಾ.ಮಂಥರ್ ಗೌಡ ಮಡಿಕೇರಿ ದಸರಾ ಕಾರ್ಯಕ್ರಮಕ್ಕೆ ದಸರಾ ಸಮಿತಿ ಪರವಾಗಿ ಆಹ್ವಾನ ನೀಡಿದರು.
ಶಾಸಕರಾದ ಡಾ.ಮಂಥರ್ ಗೌಡ ಅವರ ಸಹಕಾರದಲ್ಲಿ ನಡೆಯುವ ವಿಜಯಪ್ರಕಾಶ್ ಮತ್ತು ತಂಡದ ಸಂಗೀತ ರಸಮಂಜರಿ ಕಾರ್ಯಕ್ರಮವು ಅ.೨೩ ರಂದು ಸೋಮವಾರ ರಾತ್ರಿ ೮.೩೦ ಗಂಟೆಗೆ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಆಯೋಜಿಸಲ್ಪಟ್ಟಿದೆ ಎಂದು ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ಮಾಹಿತಿ ನೀಡಿದ್ದಾರೆ.
ಅ.೨೨ ರಂದು ಸಂಜೆ ೬ ಗಂಟೆಗೆ ಮಹಿಳಾ ದಸರಾ ಅಂಗವಾಗಿ ಜಿಲ್ಲೆಯ ಹಲವಾರು ಮಹಿಳಾ ತಂಡಗಳಿAದ ವೈವಿಧ್ಯಮಯ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.