ಮಡಿಕೇರಿ, ಅ. ೧೭: ನವ
ರಾತ್ರಿಯ
ಕೊನೆಯ ದಿನ ತಾ. ೨೪ರಂದು ರಾತ್ರಿ ನಡೆ ಯುವ ದಶಮಂಟಪಗಳ ಶೋಭಾ ಯಾತ್ರೆ ಸಂದರ್ಭ ಡಿಜೆ ಬಳಕೆಗೆ ಸಂಬAಧಿಸಿದAತೆ ನ್ಯಾಯಾಲಯದ ಕಾನೂನನ್ನು ಪಾಲಿಸುವಂತೆ ದಶಮಂಟಪ ಸಮಿತಿ ಪ್ರಮುಖರಿಗೆ ಎಸ್ಪಿ ಕೆ. ರಾಮರಾಜನ್ ಸೂಚಿಸಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಮಂಟಪ ಸಮಿತಿಗಳ ಪ್ರಮುಖರೊಂದಿಗೆ ಸಭೆ ನಡೆಸಿ ಅವರು ಸೂಚನೆ ನೀಡಿದರು. ಬಳಿಕ ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು ಕೈಗಾರಿಕಾ ಪ್ರದೇಶಗಳಲ್ಲಿ ಹಗಲಿನಲ್ಲಿ ೭೫ಡಿಬಿ, ರಾತ್ರಿ ೭೦ಡಿಬಿ, ವಾಣಿಜ್ಯ ಪ್ರದೇಶಗಳಲ್ಲಿ ಹಗಲು ೬೫ಡಿಬಿ, ರಾತ್ರಿ ೫೫ಡಿಬಿ ಹಾಗೂ ಜನವಸತಿ ಪ್ರದೇಶಗಳಲ್ಲಿ ಹಗಲು ೫೫ಡಿಬಿ, ರಾತ್ರಿ ೪೫ಡಿಬಿ ಪ್ರಮಾಣದ ಧ್ವನಿವರ್ಧಕ ಬಳಸ ಬೇಕೆಂಬ ನಿಯಮವಿದ್ದು ಅಬ್ಬರದ ಧ್ವನಿವರ್ಧಕ ಬಳಕೆ ಮಾಡುವಂತಿಲ್ಲ. ಸರ್ವೋಚ್ಚ ನ್ಯಾಯಾಲಯ ಹಾಗೂ ಉಚ್ಚ ನ್ಯಾಯಾಲಯಗಳು ಈ ಸಂಬAಧ ಆದೇಶಗಳನ್ನು ಹೊರಡಿಸಿವೆ. ಈ ಹಿನ್ನೆಲೆಯಲ್ಲಿ
ದಶಮಂಟಪ ಸಮಿತಿಗಳು ನಿಯಮವನ್ನು ಉಲ್ಲಂಘಿಸುವAತಿಲ್ಲ.
ಒಂದು ವೇಳೆ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ರಾಮರಾಜನ್ ತಿಳಿಸಿದ್ದಾರೆ.
(ಮೊದಲ ಪುಟದಿಂದ) ಮುಖವಾಡ ನಿಷೇಧ
ವಿಜಯದಶಮಿಯಂದು ಮುಖವಾಡಗಳ ಮಾರಾಟ ಹಾಗೂ ಧರಿಸುವುದನ್ನು ನಿರ್ಬಂಧಿಸಲಾಗಿದೆ. ಜೊತೆಗೆ ಕರ್ಕಶ ಧ್ವನಿ ಹೊರಸೂಸುವ ಪೀಪಿಗಳ ಮಾರಾಟ ಹಾಗೂ ಬಳಕೆಗೂ ಅವಕಾಶವಿಲ್ಲ ಎಂದು ಎಸ್ಪಿ ಕೆ. ರಾಮರಾಜನ್ ತಿಳಿಸಿದ್ದಾರೆ.
‘ಶಕ್ತಿ’ಯೊಂದಿಗೆ ಮಾತನಾಡಿದ ಅವರು ಮುಖವಾಡಗಳನ್ನು ಮಾರಾಟ ಮಾಡುವುದರಿಂದ
ಅವುಗಳನ್ನು ಧರಿಸಿಕೊಂಡು ದುಷ್ಕರ್ಮಿಗಳು ಅಕ್ರಮ ಚಟುವಟಿಕೆ ನಡೆಸುವ ಹಾಗೂ ಅಸಭ್ಯ ವರ್ತನೆ ತೋರುವ ಸಾಧ್ಯತೆಗಳು ಹೆಚ್ಚಿರುವುದರಿಂದ ಅದನ್ನು ಮಾರಾಟ ಮಾಡಲು ಅವಕಾಶ ನೀಡುವುದಿಲ್ಲ. ಅಲ್ಲದೆ ಕರ್ಕಶ ಧ್ವನಿ ಹೊರಸೂಸುವ ಪೀಪಿಗಳಿಂದ ಕಿರಿಕಿರಿ ಉಂಟಾಗುವ ಹಿನ್ನೆಲೆಯಲ್ಲಿ ಅದನ್ನು ಕೂಡ ಮಾರಾಟ ಮಾಡಲು ಬಿಡುವುದಿಲ್ಲ ಎಂದು ಅವರು ಹೇಳಿದರು. ಪೀಪಿ ಹಾಗೂ ಮುಖವಾಡಗಳು ಮಾರಾಟವಾಗುವುದನ್ನು ಹಾಗೂ ಬಳಸುವುದನ್ನು ತಡೆಯುವ ನಿಟ್ಟಿನಲ್ಲಿ ವಿಶೇಷ ಪೊಲೀಸ್ ತಂಡವನ್ನು ನಿಯೋಜಿಸಲಾಗುವುದು ಎಂದು ಎಸ್ಪಿ ತಿಳಿಸಿದರು.
೧೦ ಕಡೆ ಪೊಲೀಸ್ ಪಾಯಿಂಟ್
ತೋರುವ ಸಾಧ್ಯತೆಗಳು ಹೆಚ್ಚಿರುವುದರಿಂದ ಅದನ್ನು ಮಾರಾಟ ಮಾಡಲು ಅವಕಾಶ ನೀಡುವುದಿಲ್ಲ. ಅಲ್ಲದೆ ಕರ್ಕಶ ಧ್ವನಿ ಹೊರಸೂಸುವ ಪೀಪಿಗಳಿಂದ ಕಿರಿಕಿರಿ ಉಂಟಾಗುವ ಹಿನ್ನೆಲೆಯಲ್ಲಿ ಅದನ್ನು ಕೂಡ ಮಾರಾಟ ಮಾಡಲು ಬಿಡುವುದಿಲ್ಲ ಎಂದು ಅವರು ಹೇಳಿದರು. ಪೀಪಿ ಹಾಗೂ ಮುಖವಾಡಗಳು ಮಾರಾಟವಾಗುವುದನ್ನು ಹಾಗೂ ಬಳಸುವುದನ್ನು ತಡೆಯುವ ನಿಟ್ಟಿನಲ್ಲಿ ವಿಶೇಷ ಪೊಲೀಸ್ ತಂಡವನ್ನು ನಿಯೋಜಿಸಲಾಗುವುದು ಎಂದು ಎಸ್ಪಿ ತಿಳಿಸಿದರು.
೧೦ ಕಡೆ ಪೊಲೀಸ್ ಪಾಯಿಂಟ್
ವಿಜಯದಶಮಿಯAದು ಸಾರ್ವಜನಿಕರಿಗೆ ಯಾವುದೇ ತೊಂದರೆ ಆದರೂ ತಕ್ಷಣ ಸಂಪರ್ಕಿಸುವ ನಿಟ್ಟಿನಲ್ಲಿ ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಹತ್ತು ಕಡೆಗಳಲ್ಲಿ ಪೊಲೀಸ್ ಪಾಯಿಂಟ್ಗಳನ್ನು ತೆರೆಯಲಾಗುವುದು.
ಈ ಬಾರಿ ದಸರಾದಂದು ಹೆಚ್ಚಿನ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗುವುದು. ಜಿಲ್ಲೆಯ ಪೊಲೀಸರು ಮಾತ್ರವಲ್ಲದೆ ಹೊರ ಭಾಗದಿಂದಲೂ ಪೊಲೀಸರನ್ನು, ಗೃಹರಕ್ಷಕದಳ ಸಿಬ್ಬಂದಿಯನ್ನು ಭದ್ರತೆಗೆ ಬಳಸಿಕೊಳ್ಳಲಾಗುವುದು ಎಂದು ಎಸ್ಪಿ ತಿಳಿಸಿದರು.