ಶ್ರೀಮಂಗಲ, ಅ. ೧೭: ಟಿ.ಶೆಟ್ಟಿಗೇರಿಯಲ್ಲಿರುವ ತಾವಳಗೇರಿ ಮೂಂದ್'ನಾಡ್ ಕೊಡವ ಸಮಾಜದ ಆಶ್ರಯದಲ್ಲಿ ಟಿ.ಶೆಟ್ಟಿಗೇರಿಯ ಸಾರ್ವಜನಿಕ ಗೌರಿ ಗಣೇಶ ಸೇವಾ ಸಮಿತಿ, ಸಂಭ್ರಮ ಪೊಮ್ಮಕ್ಕಡ ಕೂಟ ಹಾಗೂ ಕೊಡವ ತಕ್ಕ್ ಎಳ್ತ್'ಕಾರಡ ಕೂಟದ ಸಹಕಾರದಲ್ಲಿ ಕೊಡವ ಸಮಾಜದಲ್ಲಿ ತಾ. ೧೮ರಿಂದ (ಇಂದಿನಿAದ) ೨೭ರವರೆಗೆ ಹತ್ತು ದಿನಗಳವರೆಗೆ ೭ನೇ ವರ್ಷದ ಚಂಗ್ರಾAದಿ ಪತ್ತಲೋದಿ ಕಾರ್ಯಕ್ರಮ ನಡೆಯಲಿದೆ. ಪ್ರತಿ ದಿನ ಸಂಜೆ ೬ ರಿಂದ ೭-೩೦ರವರೆಗೆ ಜನೋತ್ಸವದ ರೀತಿಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ೧೯ರಂದು ತಿಂಡಿ ಮಾಡುವ ಸ್ಪರ್ಧೆ, ೨೬ರಂದು ಅಪರಾಹ್ನ ನಿಧಾನ ಬೈಕ್ ಚಾಲನಾ ಸ್ಪರ್ಧೆ, ೨೭ರಂದು ಹಗ್ಗ ಜಗ್ಗಾಟ, ವಿಷ ಚೆಂಡು ಹಾಗೂ ಸಂಗೀತ ಕುರ್ಚಿ ಸ್ಪರ್ಧೆ ನಡೆಯಲಿದೆ. ಕಳೆದ ಆರು ವರ್ಷಗಳಿಂದ ನಡೆಸುತ್ತಾ ಬಂದಿರುವ ಈ ವಿಶೇಷ ಕಾರ್ಯಕ್ರಮ ಏಳನೇ ವರ್ಷಕ್ಕೆ ಪದಾರ್ಪಣೆ ಮಾಡಿದ್ದು ಮತ್ತಷ್ಟು ವಿಜೃಂಭಣೆಯಿAದ ನಡೆಯಲಿದೆ.
ತಾ. ೧೮ರಂದು ಪೂರ್ವಾಹ್ನ ೧೦-೦೦ ಗಂಟೆಗೆ ಕೊಡವ ಸಮಾಜದ ಸಭಾಂಗಣದಲ್ಲಿ ಕಾವೇರಿ ತೀರ್ಥ ವಿತರಣೆ, ಸಂಜೆ ೬-೦೦ ಗಂಟೆಗೆ ಕೊಡವ ಸಮಾಜದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ. ೧೯ರಂದು ಸಂಜೆ ೫-೦೦ ಗಂಟೆಗೆ ಕುಲ್ಲೇಟಿರ ಪ್ರವಿ ಮೊಣ್ಣಪ್ಪರವರ ಪ್ರಾಯೋಜಕತ್ವದ ತಿಂಡಿ ಮಾಡುವ ಸ್ಪರ್ಧೆ, ೬-೦೦ ಗಂಟೆಗೆ ಗೋಣಿಕೊಪ್ಪದ ಜನನಿ ಪೊಮ್ಮಕ್ಕಡ ಕೂಟದ ವತಿಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ. ೨೦ರಂದು ಸಂಜೆ ೬-೦೦ ಗಂಟೆಗೆ ಶ್ರೀಮಂಗಲ ಕೊಡವ ಸಮಾಜ ಪೊಮ್ಮಕ್ಕಡ ಕೂಟದವರಿಂದ ಸಾಂಸ್ಕೃತಿಕ ಪ್ರದರ್ಶನ,
೨೧ರಂದು ಸಂಜೆ ೬-೦೦ ಗಂಟೆಗೆ ಕುರ್ಚಿ-ಬೀರುಗ ದಕ್ಷಿಣ ಗಂಗೆ ಕೊಡವ ಒಕ್ಕೂಟದವರಿಂದ ಸಾಂಸ್ಕೃತಿಕ ಕಾರ್ಯಕ್ರಮ, ೨೨ರಂದು ಸಂಜೆ ೬-೦೦ ಗಂಟೆಗೆ ತಿಂಗಕೋರ್ ಮೊಟ್ಟ್ ತಲಕಾವೇರಿಕ್ ಕೂಟ ಹಾಗೂ ಬೆಕ್ಕೆಸೊಡ್ಲೂರಿನ ಮಂದತವ್ವ ಟ್ರಸ್ಟ್ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಪ್ರದರ್ಶನ ಏರ್ಪಡಿಸಲಾಗಿದೆ.
೨೩ರಂದು ಸಂಜೆ ೬-೦೦ ಗಂಟೆಗೆ ಪಿ&ಜಿ ಕ್ರಿಯೇಷನ್ಸ್ರವರಿಂದ ಕಲ್ಲಕೆರೆ ಮಾದೇವಿ ಕೊಡವ ಚಲನ ಚಿತ್ರದ ಉಚಿತ ಪ್ರದರ್ಶನ, ೨೪ರಂದು ಸಂಜೆ ೬-೦೦ ಗಂಟೆಗೆ ಶ್ರೀಮಂಗಲ ಜೆ.ಸಿ. ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಕಾರ್ಯಕ್ರಮ, ೨೫ರಂದು ಸಂಜೆ ೬-೦೦ ಗಂಟೆಗೆ ಟಿ.ಶೆಟ್ಟಿಗೇರಿಯ ಸಂಭ್ರಮ ಕ್ರೀಡೆ ಹಾಗೂ ಸಾಂಸ್ಕೃತಿಕ ಸಂಸ್ಥೆಯ ವತಿಯಿಂದ ಕಲಾ ಪ್ರದರ್ಶನ, ೨೬ರಂದು ಅಪರಾಹ್ನ ೧-೩೦ ಗಂಟೆಗೆ ತಾವಳಗೇರಿ ಮೂಂದ್ ನಾಡ್ಗೆ ಒಳಪಟ್ಟ ಗ್ರಾಮಸ್ಥರು ಹಾಗೂ ಕೊಡವ ಸಮಾಜದ ಸದಸ್ಯರಿಗೆ ನಿಧಾನ ಬೈಕ್ ಚಾಲನಾ ಸ್ಪರ್ಧೆ ಹಾಗೂ ಸಂಜೆ ೬-೦೦ ಗಂಟೆಗೆ ಚೆಟ್ಟಂಗಡ ಕುಟುಂಬದ ಮಹಿಳೆಯರ ಸಾಂಸ್ಕೃತಿಕ ಕಾರ್ಯಕ್ರಮ.
ತಾ. ೨೭ರಂದು ಅಪರಾಹ್ನ ೧-೩೦ ಗಂಟೆಗೆ ಟಿ.ಶೆಟ್ಟಿಗೇರಿ, ವಗರೆ, ಈಸ್ಟ್ನೆಮ್ಮಲೆ, ವೆಸ್ಟ್ನೆಮ್ಮಲೆ, ತಾವಳಗೇರಿ, ಹರಿಹರ ಗ್ರಾಮಗಳ ನಡುವೆ ಪುರುಷ ಹಾಗೂ ಮಹಿಳೆಯರ ಪ್ರತ್ಯೇಕ ವಿಭಾಗಗಳಲ್ಲಿ ಹಗ್ಗ ಜಗ್ಗಾಟ ಸ್ಪರ್ಧೆ, ಸಂಜೆ ೫-೦೦ ಗಂಟೆಗೆ ಮಹಿಳೆಯರಿಗೆ ವಿಷ ಚೆಂಡು ಹಾಗೂ ಸಂಗೀತ ಕುರ್ಚಿ ಸ್ಪರ್ಧೆ, ೬-೦೦ ಗಂಟೆಗೆ ಟಿ.ಶೆಟ್ಟಿಗೇರಿಯ ರೂಟ್ಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಪ್ರತಿದಿನವೂ ರಾತ್ರಿ ಊಟದ ವ್ಯವಸ್ಥೆ ಇದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕೊಡವಾಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯನ್ನು ತಾವಳಗೇರಿ ಮೂಂದ್ನಾಡ್ ಕೊಡವ ಸಮಾಜದ ಆಡಳಿತ ಮಂಡಳಿ ವ್ಯಕ್ತಪಡಿಸಿದೆ.