ಮುಳ್ಳೂರು, ಅ. ೧೮: ಜಿಲ್ಲಾ ಉಸ್ತವಾರಿ ಹಾಗೂ ಸಣ್ಣ ನೀರಾವರಿ ಸಚಿವ ಎಸ್.ಎಸ್. ಬೋಸರಾಜು ಅವರು ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಗೆ ಭೇಟಿ ನೀಡಿದರು. ನಂದಿಪುರ ಕೆರೆ ಪರಿಶೀಲನೆ. ಕೊಡ್ಲಿಪೇಟೆ ವಿದ್ಯಾಸಂಸ್ಥೆಗೆ ಭೇಟಿ ಹಾಗೂ ಕೊಡಗು-ಹಾಸನ ಜಿಲ್ಲಾ ಗಡಿಭಾಗದಲ್ಲಿರುವ ದೊಡ್ಡಕೊಡ್ಲಿ ಗ್ರಾಮದಲ್ಲಿ ಹೇಮಾವತಿ ನೀರಾವರಿ ಯೋಜನೆ ವತಿಯಿಂದ ಹೇಮಾವತಿ ನದಿಗೆ ಅಡ್ಡಲಾಗಿ ಹಾಸನ ಕಡೆಯ ರಸ್ತೆಗೆ ಸಂಪರ್ಕ ಕಲ್ಪಿಸುವ ಸಲುವಾಗಿ ೨೦೧೭ ರಲ್ಲಿ ನಿರ್ಮಿಸಿದ್ದ ಸೇತುವೆ ಪರಿಶೀಲನೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ಕೊಡ್ಲಿಪೇಟೆ ವಿದ್ಯಾಸಂಸ್ಥೆಗೆ ಭೇಟಿ ನೀಡಿದ ಸಂದರ್ಭ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ದ್ದೇಶಿಸಿ ಮಾತನಾಡಿದ ಸಚಿವರು, ಶಿಕ್ಷಣ ಪಡೆಯುವುದು ಪ್ರತಿಯೊಬ್ಬ ರಿಗೂ ಅವಶ್ಯವಾಗಿದ್ದು, ಈ ಹಿನ್ನೆಲೆ ಯಲ್ಲಿ ಶಿಕ್ಷಣ ಕ್ಷೇತ್ರದ ಪ್ರಗತಿಗಾಗಿ ರಾಜ್ಯ ಮತ್ತು ಕೇಂದ್ರ ಸರಕಾರಗಳು ಬಹಳಷ್ಟು ಪ್ರಯತ್ನಿಸುತ್ತಿದೆ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮ ಮುಂದಿನ ಭವಿಷ್ಯಕ್ಕಾಗಿ ಓದಿನ ಕಡೆಗೆ ಹೆಚ್ಚಿನ ಗಮನಹರಿಸಬೇಕು ವಿದ್ಯಾಭ್ಯಾಸ ದಿನಗಳಲ್ಲಿ ವಿದ್ಯಾರ್ಥಿ ಗಳು ಶಿಸ್ತು, ಶ್ರದ್ಧೆಯನ್ನು ಅಳವಡಿಸಿ ಕೊಳ್ಳಬೇಕೆಂದರು. ವಿದ್ಯಾರ್ಥಿಗಳು ಭವಿಷ್ಯದಲ್ಲಿ ಮುಂದೆ ಬರಬೇಕಾದರೆ ಉತ್ತಮ ಶಿಕ್ಷಣ ಪಡೆಯಬೇಕಾಗುತ್ತದೆ ಈ ದಿಸೆಯಲ್ಲಿ ವಿದ್ಯಾಭ್ಯಾಸ ಪೂರ್ಣ ಗೊಳ್ಳುವವರೆಗೂ ಶ್ರದ್ಧೆಯಿಂದ ವಿದ್ಯಾ ರ್ಜನೆ ಪಡೆಯುವಂತೆ ವಿದ್ಯಾರ್ಥಿ ಗಳಿಗೆ ಕಿವಿ ಮಾತು ಹೇಳಿದರು.

ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂಥರ್‌ಗೌಡ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾಭ್ಯಾಸದ ದಿನಗಳಲ್ಲಿ ಇತಿಮಿತಿಯ ಅಂತರದಲ್ಲಿ ಸಂತೋಷ ಸಂಭ್ರಮದಿAದ ಶಿಕ್ಷಣ ಪಡೆಯವುದರ ಜೊತೆಯಲ್ಲಿ ಉತ್ತಮ ವಿದ್ಯಾರ್ಥಿಯಾಗಲು ಪ್ರಯತ್ನಿಸಬೇಕು. ಆದಷ್ಟು ಮೊಬೈಲ್ ಬಳಕೆಯಿಂದ ದೂರ ಇರುವಂತೆ ಸಲಹೆ ನೀಡಿದರು.

ಕೊಡಗು ಜಿಲ್ಲಾಧಿಕಾರಿ ವೆಂಕಟ್‌ರಾಜಾ, ಪೊಲೀಸ್ ವರಿಷ್ಠಾ ಧಿಕಾರಿ ರಾಮರಾಜನ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ಣಿತ್ ನೇಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಈ ಸಂದರ್ಭ ಕೊಡ್ಲಿಪೇಟೆ ವಿದ್ಯಾಸಂಸ್ಥೆ ಅಧ್ಯಕ್ಷ ಮತ್ತು ಹೈಕೋರ್ಟ್ ಹಿರಿಯ ವಕೀಲ ಎಚ್.ಎಸ್. ಚಂದ್ರಮೌಳಿ, ವಿದ್ಯಾಸಂಸ್ಥೆ ಪ್ರಾಂಶುಪಾಲ ಎಂ.ಆರ್.ನಿರAಜನ್, ಜಿ.ಪಂ. ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ ಮುಂತಾ ದವರು ಹಾಜರಿದ್ದರು.

ತದನಂತರ ಉಸ್ತುವಾರಿ ಸಚಿವರು ಮತ್ತು ಶಾಸಕರು ಹಾಗೂ ಅಧಿಕಾರಿಗಳು ಅಭಿವೃದ್ಧಿ ಪಡಿಸಿರುವ ಕೊಡ್ಲಿಪೇಟೆ ಸಮಿಪದ ನಂದಿಪುರ ಗ್ರಾಮದ ಸಾರ್ವಜನಿಕರ ಕೆರೆಯನ್ನು ಪರಿಶೀಲನೆ ನಡೆಸಿದರು. ಬಳಿಕ ದೊಡ್ಡಕೊಡ್ಲಿ ಗ್ರಾಮದಲ್ಲಿ ಜಿಲ್ಲೆಯಿಂದ ಹಾಸನ ಜಿಲ್ಲೆಗೆ ಸಂಪರ್ಕ ಕಲ್ಪಿಸಲು ಎಚ್‌ಆರ್‌ಪಿ ವತಿಯಿಂದ ೨೦೧೭ರಲ್ಲಿ ಹೇಮಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆಯನ್ನು ವೀಕ್ಷಿಸಿದ ಸಚಿವರು ೨೦೧೭ರಲ್ಲಿ ಎಚ್‌ಆರ್‌ಪಿಯ ಕ್ರಿಯಾಯೋಜನೆಯ ಅನುದಾನ ದಂತೆ ೯ ಕೋಟಿ ರೂ. ವೆಚ್ಚದಲ್ಲಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಮತ್ತು ಕೊಡಗು ಜಿಲ್ಲೆಯ ಭಾಗದ ೨ ಕಿ.ಮೀ. ವರೆಗೂ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಪೂರ್ಣಗೊಳಿ ಸಬೇಕಿತ್ತು. ಆದರೆ ಸೇತುವೆ ನಿರ್ಮಾಣ ಕಾಮಗಾರಿಯೊಂದನ್ನು ಪೂರ್ಣಗೊಳಿಸಿ ಕೊಡಗು ಭಾಗದಲ್ಲಿ ೧ ಅಡಿಯಷ್ಟು ಸಹ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಸದೆ ಎಚ್‌ಆರ್‌ಪಿ ಅಧಿಕಾರಿಗಳು ಬಿಲ್ ಪಡೆದಿರುವ ಮಾಹಿತಿ ಪಡೆದ ಸಚಿವ ಬೋಸ ರಾಜು ಮತ್ತು ಶಾಸಕ ಡಾ.ಮಂಥರ್ ಗೌಡ ಹಾಸನದ ಗೊರೂರಿನ ಎಚ್‌ಆರ್‌ಪಿ ಹಿರಿಯ ಅಧಿಕಾರಿ ಗಳನ್ನು ತರಾಟೆಗೆ ತೆಗೆದುಕೊಂಡರು. ಕೊಡಗು ಭಾಗದ ರಸ್ತೆಯನ್ನು ಅಭಿ ವೃದ್ಧಿ ಪಡಿಸುವಂತೆ ಸೂಚಿಸಿದರು.

-ಭಾಸ್ಕರ್ ಮುಳ್ಳೂರು