ಮಡಿಕೇರಿ, ಅ.೧೬; ವಿಜಯದಶಮಿ, ದಸರಾ ಅಂಗವಾಗಿ ಒಂಭತ್ತು ದಿನಗಳ ಕಾಲ ಗೊಂಬೆಗಳನ್ನು ಪೂಜಿಸುವದು ಪ್ರಾಚೀನ ಕಾಲದಿಂದಲೂ ಬಂದಿರುವ ಪದ್ಧತಿ. ಈ ಪದ್ಧತಿಯನ್ನು ಮಡಿಕೇರಿಯಲ್ಲಿಯೂ ನವರಾತ್ರಿ ಸಂದರ್ಭದಲ್ಲಿ ಕೆಲವರು ತಮ್ಮ ಮನೆಗಳಲ್ಲಿ ಆಚರಿಸಿಕೊಂಡು ಬರುತ್ತಿದ್ದಾರೆ.

ನಗರದ ಮಹದೇವಪೇಟೆಯ ಬನ್ನಿ ಮಂಟಪದ ಬಳಿಯ ನಿವಾಸಿ ಬಿ.ಎಸ್.ಶಾಂತಾ ಮೋಹನ್ ಅವರು ಈ ಒಂದು ಪದ್ಧತಿಯನ್ನು ಕಳೆದ ೪೫ ವರ್ಷಗಳಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ರಕ್ತಚಂದನದ ಬೊಂಬೆಯೊAದಿಗೆ ಇತರ ನೂರಾರು ಗೊಂಬೆಗಳನ್ನು ಅಂದವಾಗಿ ಜೋಡಿಸಿ, ನವದಿನಗಳ ಕಾಲ ಪೂಜಿಸುತ್ತಾ ಬರುತ್ತಿದ್ದಾರೆ. ಇವರಿಗೆ ಮಗ ರಾಕೇಶ್, ಸೊಸೆ, ನಗರಸಭಾ ಉಪಾಧ್ಯಕ್ಷರಾಗಿರುವ ಸವಿತಾ ರಾಕೇಶ್, ಪುತ್ರ ಸಾತ್ವಿಕ್ ಸಹಾಯ ಮಾಡುತ್ತಾರೆ. ಅಂದವಾಗಿ ಜೋಡಿಸಿರುವ, ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕೃತವಾಗಿ ಕಂಗೊಳಿಸುತ್ತಿರುವ ಗೊಂಬೆಗಳು ನೋಡುಗರ ಕಣ್ಮನ ಸೆಳೆಯುತ್ತವೆ. ನವದಿನಗಳಲ್ಲಿ ಗೊಂಬೆ ಪ್ರದರ್ಶನವನ್ನು ನೋಡಲು ಮನೆಗೆ ಬರುವ ಅತಿಥಿಗಳನ್ನು ಅರಿಶಿನ ಕುಂಕುಮ, ತಿಂಡಿ ತಿನಿಸನ್ನು ನೀಡಿ ಸತ್ಕರಿಸಿ ಕಳುಹಿಸುವದೇ ಶಾಂತಾ ಅವರಿಗೊಂದು ಖುಷಿ.. -ಸಂತೋಷ್