ಮಡಿಕೇರಿ, ಅ. ೧೭: ಮಡಿಕೇರಿ ನಗರ ದಸರಾ ಕ್ರೀಡಾ ಸಮಿತಿ ವತಿಯಿಂದ ತಾ.೧೮ ರಂದು (ಇಂದು) ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಸಾರ್ವಜನಿಕರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಈ ಪ್ರಯುಕ್ತ ಬೆಳಿಗ್ಗೆ ೭.೩೦ಕ್ಕೆ ಬನ್ನಿಮಂಟಪದಿAದ ಕ್ರೀಡಾಜ್ಯೋತಿ ಹೊರಡಲಿದೆ. ಕ್ರೀಡಾಪಟು ಮಂಜುನಾಥ್ ರಾಜೇಂದ್ರ ಕ್ರೀಡಾ ಜ್ಯೋತಿಯೊಂದಿಗೆ ಆಗಮಿಸಲಿದ್ದು, ಬಳಿಕ ವಿವಿಧ ಕ್ರೀಡೆಗಳು ಜರುಗಲಿದೆ. ದಸರಾ ಅಂಗವಾಗಿ ತಾ. ೧೯ರಂದು ಕ್ರಿಕೆಟ್ ಪಂದ್ಯಾಟ, ತಾ. ೨೨ರಂದು ಗಾಂಧಿ ಮೈದಾನದಲ್ಲಿ ಕಬಡ್ಡಿ ಪಂದ್ಯಾವಳಿ ನಿಗದಿಯಾಗಿದೆ. ತಾ. ೧೬ರಂದು ನಗರದ ರಾಜ್‌ದರ್ಶನ್ ಹೊಟೇಲ್ ಸಭಾಂಗಣದಲ್ಲಿ ಚೆಸ್ ಹಾಗೂ ಕೇರಮ್ ಪಂದ್ಯಾವಳಿ ಜರುಗಿತು. ಸುಮಾರು ೩೦೦ ರಷ್ಟು ಸ್ಪರ್ಧಿಗಳು ಪಾಲ್ಗೊಂಡಿದ್ದಾಗಿ ಕ್ರೀಡಾ ಸಮಿತಿ ಅಧ್ಯಕ್ಷ ಪ್ರದೀಪ್ ಕರ್ಕೆರಾ ತಿಳಿಸಿದ್ದಾರೆ.

ನಿನ್ನೆ ನಡೆದ ಕಾರ್ಯಕ್ರಮದ ಸಂದರ್ಭ ದಸರಾ ಸಮಿತಿ ಪದಾಧಿಕಾರಿಗಳಾದ ಅನಿತಾ ಪೂವಯ್ಯ, ಪ್ರಕಾಶ್ ಆಚಾರ್ಯ, ರಾಜೇಶ್ ಯಲ್ಲಪ್ಪ, ಟಿ.ಪಿ. ರಾಜೇಂದ್ರ, ಪ್ರಭುರೈ, ಜಗದೀಶ್ ಬಿ.ಕೆ, ಕ್ರೀಡಾ ಸಮಿತಿಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.