ಗೋಣಿಕೊಪ್ಪ ವರದಿ, ಅ. ೧೭: ಅಖಿಲ ಅಮ್ಮಕೊಡವ ಸಮಾಜದ ಮಹಾಸಭೆ ಗೋಣಿ ಕೊಪ್ಪದಲ್ಲಿರುವ ಅಮ್ಮಕೊಡವ ಸಭಾಂಗಣದಲ್ಲಿ ಸಮಾಜದ ಅಧ್ಯಕ್ಷ ಬಾನಂಡ ಎನ್. ಪೃಥ್ಯು ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭ ಆಡಳಿತ ಮಂಡಳಿ ಪುನರಚಿಸ ಲಾಯಿತು. ಸಾಂಸ್ಕೃತಿಕ ಸಮಿತಿ, ಕ್ರೀಡಾ ಸಮಿತಿ ರಚಿಸಲಾಯಿತು. ಸಮಾಜದ ಅಧ್ಯಕ್ಷರಾಗಿ ಬಾನಂಡ ಎನ್. ಪೃಥ್ಯು, ಉಪಾಧ್ಯಕ್ಷರಾಗಿ ಪಾಡಿಯಮ್ಮಂಡ ಮುರುಳಿ ಕರುಂಬಮಯ್ಯ, ಕಾರ್ಯದರ್ಶಿಯಾಗಿ ಪುತ್ತಾಮನೆ ಅನಿಲ್ ಪ್ರಸಾದ್, ಜಂಟಿ ಕಾರ್ಯದರ್ಶಿಯಾಗಿ ಅಮ್ಮತ್ತೀರ ಸುರೇಶ್, ಖಜಾಂಚಿಯಾಗಿ ಅಮ್ಮತ್ತೀರ ಟಿಟ್ಟು ಗಣೇಶ್, ನಿರ್ದೇಶಕರಾಗಿ ನೆರೆಯಂಡ ಮ್ಮಂಡ ಉಮ ಪ್ರಭು, ಅಮ್ಮತ್ತೀರ ರೇವತಿ ಪರಮೇಶ್ವರ, ಬಾನಂಡ ಅಶೋಕ್, ನೆರೆಯಂಡಮ್ಮAಡ ಜನಾರ್ಧನ, ಪುತ್ತಾಮನೆ ವಿದ್ಯಾ ಜಗದೀಶ್, ಗುಂಭೀರ ವಿನಾಯಕ್, ಸಾಂಸ್ಕೃತಿಕ ಸಮಿತಿಗೆ ಮನ್ನಕಮನೆ ಶ್ವೇತಾ ರವಿ, ಹೆಮ್ಮಚ್ಚಿಮನೆ ಕಾವ್ಯ, ನೆರೆಯಂಡ ಮ್ಮಂಡ ಉಮಾ ಪ್ರಭು, ಕ್ರೀಡಾ ಸಮಿತಿಗೆ ಹೆಮ್ಮಚ್ಚಿಮನೆ ಆಶಿತ, ಅಚ್ಚಿಯಂಡ ಮನೋಜ್, ನೆರೆಯಂಡಮ್ಮAಡ ಸುಬ್ರಮಣಿ, ಸಂಚಾಲಕರಾಗಿ ಬಲ್ಯಂಡ ದಿನು ಅವರುಗಳನ್ನು ಆಯ್ಕೆ ಮಾಡಲಾಯಿತು.