ಗೋಣಿಕೊಪ್ಪಲು, ಅ. ೧೬: ದಕ್ಷಿಣ ಕೊಡಗಿನಲ್ಲಿ ದಿಢೀರಾಗಿ ಹಲವು ಕೆಎಸ್ಆರ್ಟಿಸಿ ಬಸ್ ಸಂಚಾರ ಕಡಿತಗೊಂಡು ಪ್ರಯಾಣಿಕರು ಪರದಾಡುವಂತಾಗಿದೆ. ದಸರಾ ರಜೆ ಹಿನ್ನೆಲೆ ಈ ಹಿಂದೆ ಕೊಡಗು ಮೈಸೂರು ಬೆಂಗಳೂರು ನಡುವೆ ಹಲವು ವಿಶೇಷ ರಾಜ್ಯ ರಸ್ತೆ ಸಾರಿಗೆ ಸಂಖ್ಯೆಯಲ್ಲಿ ಓಡಾಡುತ್ತಿದ್ದವು. ಆದರೆ, ಈ ಬಾರಿ ದಸರಾ, ತಲಕಾವೇರಿ ತೀರ್ಥೋದ್ಭವ ಹೊತ್ತಿನಲ್ಲಿ ಹಲವು ಸಾರಿಗೆ ಬಸ್ಗಳು ಮಾಯವಾಗಿವೆ. ತಾ.೧೫ ರಂದು ಒಂದೇ ದಿನ ೧೧೬ ಒಟ್ಟು ರೂಟ್ಗಳ ಸಂಖ್ಯೆ ೯೧ಕ್ಕೆ ಕುಸಿತಗೊಂಡಿದೆ. ಅಂದರೆ ನಿನ್ನೆ ರಾತ್ರಿಯ ೧೦.೩೦ರ ಕೊನೆಯ ಕೆಂಪು ಬಸ್ ಕಾಣದೆ ಪ್ರಯಾಣಿಕರು ಕಂಗಾಲಾಗಿದ್ದಾರೆ.
ಭಾಗಮAಡಲ- ನಾಪೋಕ್ಲು- ವೀರಾಜಪೇಟೆ ಮಾರ್ಗದಲ್ಲಿ ನಿನ್ನೆ ರಾತ್ರಿ ಬೆಂಗಳೂರಿಗೆ ತೆರಳಬೇಕಾಗಿದ್ದ ಕೆಂಪು ಬಸ್ ಇಂದು ಬೆಳಿಗ್ಗೆ ಹೊರಟಿದ್ದ ಹಿನ್ನೆಲೆ ನಾಪೋಕ್ಲುವಿನಲ್ಲಿ ಖಾಸಗಿ ಬಸ್ ಹಾಗೂ ಸರ್ಕಾರಿ ಬಸ್ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದಿದೆ.
ಬೆಂಗಳೂರು ೫ನೇ ಡಿಪೋ ರೂಟ್ ನಂ.೪೫ ಸುಮಾರು ೨೫ ವರ್ಷದಿಂದಲೂ ಓಡಾಡುತ್ತಿದ್ದ ಬಸ್ ನಿನ್ನೆಯಿಂದ ದಿಢೀರ್ ಸಮಯ ಬದಲಾವಣೆ ಮಾಡಿದ್ದು ರಾತ್ರಿ ಓಡಾಟದ ಪ್ರಯಾಣಿಕರಿಗೆ ಅನಾನುಕೂ ಲವಾಗಿದೆ. ಸುಮಾರು ೨೫ಕ್ಕೂ ಅಧಿಕ ರೂಟ್ಗಳು ರದ್ದಾಗಿರುವದರಿಂದ ಪ್ರಯಾಣಿಕರು ತೀವ್ರ ತೊಂದರೆಗೀಡಾಗಿದ್ದಾರೆ. - ಶ್ರೀನಿವಾಸ್