ಸುಂಟಿಕೊಪ್ಪ, ಅ. ೧೬: ಸಿಲಿಂಡರ್ ಸ್ಫೋಟದಿಂದ ಮೃತಪಟ್ಟ ವಿಕಾಸ ಜನಸೇವಾ ಟ್ರಸ್ಟ್ನ ರಮೇಶ್ ಮತ್ತು ಅವರ ಪತ್ನಿ ರೂಪ ಅವರಿಗೆ ಸುಂಟಿಕೊಪ್ಪ ಜೆಸಿಐ ಸಂಸ್ಥೆಯ ನೇತೃತ್ವದಲ್ಲಿ ಶೃದ್ಧಾಂಜಲಿ ಸಭೆಯನ್ನು ಸುಂಟಿಕೊಪ್ಪದ ವಾಹನ ಚಾಲಕರ ಸಂಘದ ವೇದಿಕೆಯಲ್ಲಿ ನಡೆಸಲಾಯಿತು.

ಸುಂಟಿಕೊಪ್ಪ ಜೆಸಿಐ ಸಂಸ್ಥೆಯ ಅಧ್ಯಕ್ಷ ಟಿ.ಜಿ. ಪ್ರೇಮ್‌ಕುಮಾರ್ ನೇತೃತ್ವದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ನಮ್ಮ ಸುಂಟಿಕೊಪ್ಪ, ಹೋಬಳಿ ಕಸಾಪ, ಕಾರ್ಯನಿರತ ಪತ್ರಕರ್ತರ ಸಂಘ, ವಾಹನ ಚಾಲಕರ ಸಂಘ, ಆಟೋ ಚಾಲಕ ಮತ್ತು ಮಾಲೀಕರ ಸಂಘ ಸೇರಿದಂತೆ ಇನ್ನಿತರ ಸಂಘ ಸಂಸ್ಥೆಯ ಪದಾಧಿಕಾರಿಗಳು ರಮೇಶ್ ಅವರ ಸ್ನೇಹಿತರು ಸಾರ್ವಜನಿಕರು ಪಾಲ್ಗೊಂಡಿದ್ದರು. ಗ್ರಾ.ಪಂ. ಅಧ್ಯಕ್ಷರಾದ ಪಿ.ಆರ್. ಸುನಿಲ್‌ಕುಮಾರ್, ಟಿ.ಜಿ. ಪ್ರೇಮ್‌ಕುಮಾರ್, ಮುರುಗೇಶ್, ರಮೇಶ್ ಅವರ ತಂದೆ ಕರಿಯಪ್ಪ, ನಮ್ಮ ಸುಂಟಿಕೊಪ್ಪ ಡೆನ್ನಿಸ್ ಡಿಸೋಜ, ಸುಂಟಿಕೊಪ್ಪ ನಾಡು ಪ್ರೌಢಶಾಲೆಯ ವಿದ್ಯಾರ್ಥಿನಿ ಶ್ರೀಶಾ, ಗ್ರಾ.ಪಂ. ಸದಸ್ಯೆ ಶಾಂತಿ, ದೇವಿಪ್ರಸಾದ್ ಮಾತನಾಡಿದರು. ಆಶ್ರಮದ ಉಪಾಧ್ಯಕ್ಷೆ ಪದ್ಮಶ್ರೀ ಪುರಸ್ಕೃತರಾದ ಐಮುಡಿಯಂಡ ರಾಣಿ ಮಾಚಯ್ಯ, ರಮೇಶ್ ಸಹೋದರ ಮಂಜು, ಸಹೋದರಿ ರಂಗಮ್ಮ, ಕಿರಿಯ ಪುತ್ರಿ ಐಶ್ವರ್ಯ, ಗ್ರಾ.ಪಂ. ಉಪಾಧ್ಯಕ್ಷೆ ಶಿವಮ್ಮ ಮಹೇಶ್, ಸದಸ್ಯರುಗಳಾದ ವಸಂತಿ, ರೇಷ್ಮ, ಆಟೋ ಚಾಲಕರ ಸಂಘದ ಅಧ್ಯಕ್ಷ ಶರೀಫ್, ವಾಹನ ಚಾಲಕರ ಸಂಘದ ಪದಾಧಿಕಾರಿಗಳು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸದಸ್ಯರು ಪಾಲ್ಗೊಂಡಿದ್ದರು.