ಭಾಗಮಂಡಲ, ಅ. ೧೬: ದಕ್ಷಿಣ ಭಾರತಕ್ಕೆ ನೀರುಣಿಸುವ, ರೈತರ ಜೀವನಾಡಿಯಾಗಿರುವ ಕಾವೇರಿ ಮಾತೆ ತೀರ್ಥರೂಪಿಣಿಯಾಗಿ ದರ್ಶನ ನೀಡಲು ಕ್ಷಣಗಣನೆ ಆರಂಭಗೊAಡಿದ್ದು, ಭಕ್ತಗಣ ಇದಕ್ಕಾಗಿ ತುದಿಗಾಲಿನಲ್ಲಿ ಕಾಯುತ್ತಿದೆ. ಈ ಸಂಬAಧ ತಲಕಾವೇರಿ ಹಾಗೂ ಭಾಗಮಂಡಲದಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಜೊತೆಗೆ ಧಾರ್ಮಿಕ ಕಾರ್ಯ ಭರದಿಂದ ಸಾಗುತ್ತಿದೆ.
ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿಯಲ್ಲಿ ಪ್ರತಿವರ್ಷದಂತೆ ನಡೆಯಲಿರುವ ಪವಿತ್ರ ತೀರ್ಥೋದ್ಭವಕ್ಕೆ ಸಂಬAಧಿಸಿದAತೆ ಅಂತಿಮ ಹಂತದ ಸಿದ್ಧತೆಗಳು ಪೂರ್ಣಗೊಂಡಿವೆ. ಭಾಗಮಂಡಲ, ತಲಕಾವೇರಿ ಎರಡು ಕ್ಷೇತ್ರಗಳಲ್ಲಿ ಭಕ್ತರ ಅನುಕೂಲಕ್ಕಾಗಿ ವಿವಿಧ ಸಿದ್ಧತೆಗಳನ್ನು ಮಾಡಲಾಗಿದೆ. ತಲಕಾವೇರಿ ಕ್ಷೇತ್ರದಲ್ಲಿ ತೀರ್ಥೋದ್ಭವದ ಸಂದರ್ಭದಲ್ಲಿ ಭಕ್ತಾದಿಗಳ ನಿಯಂತ್ರಣಕ್ಕಾಗಿ ಬ್ಯಾರಿಕೇಡ್ಗಳನ್ನು ಅಳವಡಿಸಲಾಗಿದೆ.
ಕಂಗೊಳಿಸುತ್ತಿರುವ ಕ್ಷೇತ್ರಗಳು
ಹೂವಿನ ಅಲಂಕಾರಗಳಿAದ ಎರಡೂ ಕ್ಷೇತ್ರಗಳು ಶೃಂಗಾರಗೊAಡಿವೆ. ಕಾವೇರಿ ಮಾತೆಗೆ ತೊಡಿಸುವ ಆಭರಣಗಳನ್ನು ಇಂದು ಭಾಗಮಂಡಲದಿAದ ತಲಕಾವೇರಿಗೆ ಕೊಂಡೊಯ್ಯಲಾಯಿತು. ತಲಕಾವೇರಿಯ ಬ್ರಹ್ಮಕುಂಡಿಕೆಗೆ ಬೆಳ್ಳಿ ಕವಚವನ್ನು ಅಳವಡಿಸಲಾಯಿತು, ತಾ. ೧೭ ರಂದು (ಇಂದು) ಆಭರಣ ತೊಡಿಸುವ ಕಾರ್ಯ ನಡೆಯಲಿದೆ.
ಕ್ಷೇತ್ರಗಳಲ್ಲಿ ಪೊಲೀಸ್ ಭದ್ರತಾ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ಲೈಟಿಂಗ್ ವ್ಯವಸ್ಥೆ ಪೂರ್ಣಗೊಂಡಿದ್ದು ಕ್ಷೇತ್ರಗಳು ಬಣ್ಣದ ಬೆಳಕಿನಿಂದ ಝಗಮಗಿಸುತ್ತಿವೆ. ಭಾಗಮಂಡಲದಿAದ ತಲಕಾವೇರಿವರೆಗೆ ಟ್ಯೂಬ್ಲೈಟ್ ಗಳನ್ನು ಅಳವಡಿಸಲಾಗಿದೆ. ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಸ್ನಾನಘಟ್ಟದ ಸುತ್ತ ಪರದೆ ಹಾಕಲಾಗಿದೆ. ತಲಕಾವೇರಿಯಲ್ಲಿ ಕುಂಕುಮಾರ್ಚನೆಗೆ ನಾಲ್ಕು ಭಾಗಗಳನ್ನು ಮಾಡಿಕೊಳ್ಳಲಾಗಿದೆ.
ಭಕ್ತಾದಿಗಳಿಗೆ ಅನ್ನದಾನದ ವ್ಯವಸ್ಥೆ ಇಂದು ಸಂಜೆಯಿAದ ಆರಂಭಗೊಳ್ಳಲಿದೆ. ಏಕಕಾಲದಲ್ಲಿ ೩೦೦ ಜನರು ಕುಳಿತು ಊಟ ಮಾಡಲು ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ. ತಾ. ೧೭ ಮತ್ತು ೧೮ರಂದು ಒಟ್ಟು ೩೦ ಸಾವಿರ ಮಂದಿಗೆ ಅನ್ನದಾನ ವ್ಯವಸ್ಥೆ ಕೈಗೊಳ್ಳಲು ಸನ್ನದ್ಧರಾಗಿದ್ದೇವೆ ಎಂದು ಕೊಡಗು ಏಕೀಕರಣರಂಗದ ಪ್ರಮುಖರಾದ ಬಿದ್ದಾಟಂಡ ತಮ್ಮಯ್ಯ ತಿಳಿಸಿದರು.
ಮಳೆಯಿಂದ ಸಮಸ್ಯೆ ಉಂಟಾಗದAತೆ ಮ್ಯಾಟ್ ವ್ಯವಸ್ಥೆ ಕೈಗೊಳ್ಳಲಾಗಿದೆ. ವಿಐಪಿಗಳಿಗೆ ವಾಟರ್ ಪ್ರೂಫ್ ಶಾಮಿಯಾನ ಅಳವಡಿಸಲಾಗಿದೆ. ತಲಕಾವೇರಿಯಲ್ಲಿ ದೇವಾಲಯಕ್ಕೆ ತೆರಳುವ ಏಕಮುಖ ಸಂಚಾರ ವ್ಯವಸ್ಥೆಗಾಗಿ ಬ್ಯಾರಿಕೇಡ್ಗಳನ್ನು ಅಳವಡಿಸಲಾಗಿದೆ ಚಿಕ್ಕ ಮಕ್ಕಳಿಗೆ ಹಾಲುಣಿಸಲು ತಾಯಂದಿರ ಕೊಠಡಿಯನ್ನು ಈ ಬಾರಿ ಪ್ರಥಮವಾಗಿ ವ್ಯವಸ್ಥೆ ಕಲ್ಪಿಸಲಾಗಿದೆ. ಭಕ್ತರಿಗೆ ತೀರ್ಥ ವಿತರಣೆಗೆ ಪಾತ್ರೆ ಹಾಗೂ ಡ್ರಂಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಅಗಸ್ತೆö್ಯÃಶ್ವರ ಹಾಗೂ ಗಣಪತಿ ಗುಡಿಗೆ ತೆರಳಲು ಭಕ್ತರಿಗೆ ಏಕಮುಖ ವ್ಯವಸ್ಥೆ ಮಾಡಲಾಗಿದೆ.
ತಾ. ೧೭ ರ ಬೆಳಿಗ್ಗೆಯಿಂದಲೇ ಕ್ಷೇತ್ರದಲ್ಲಿ ವಿಶೇಷ ಪೂಜೆಗಳು ಆರಂಭಗೊಳ್ಳಲಿವೆ. ಕುಂಡಿಕೆಗೂ ಪೂಜೆ ನಡೆಯಲಿದ್ದು, ತೀರ್ಥೋದ್ಭವ ಸಮಯದಲ್ಲಿ ಮಂತ್ರಘೋಷಗಳು ಮೊಳಗಲಿವೆ.
-ಸುನಿಲ್ ಕುಯ್ಯಮುಡಿ