ಮಡಿಕೇರಿ, ಅ. ೧೬: ಗುಂಡಿನ ದಾಳಿ ನಡೆಸಿ ವ್ಯಕ್ತಿಯನ್ನು ಕೊಲೆ ಮಾಡಲು ಯತ್ನಿಸಿದ ಆರೋಪಿಗೆ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯ ಶಿಕ್ಷಿ ವಿಧಿಸಿ ತೀರ್ಪು ಘೋಷಿಸಿದೆ. ಮಡಿಕೇರಿ ನಗರ ಠಾಣಾ ವ್ಯಾಪ್ತಿಯ ಹಿಲ್ ರಸ್ತೆಯಲ್ಲಿ ಕ್ಯಾಂಟಿನ್ ನಡೆಸುತ್ತಿದ್ದ ರಿಯಾಜ್ ಹಾಗೂ ಶಮೀಮ್ ಅನ್ಸಾರಿ ಎಂಬವರ ಮೇಲೆ ಗುಂಡಿನ ದಾಳಿ ನಡೆಸಿದ್ದ ಮೂಲತಃ ವೀರಾಜಪೇಟೆ ಬಿಟ್ಟಂಗಾಲ ಗ್ರಾಮದ ಸಿ.ಎಸ್. ಲೋಕೇಶ್ ಆರೋಪ ಸಾಭೀತಾದ ಹಿನ್ನೆಲೆ ನ್ಯಾಯಾಲಯದ ನ್ಯಾಯಾಧೀಶರಾದ ಹೆಚ್.ಸಿ. ಶ್ಯಾಂ ಪ್ರಸಾದ್ ಶಿಕ್ಷೆ ವಿಧಿಸಿದ್ದಾರೆ.
ಘಟನೆ ಹಿನ್ನೆಲೆ
ಮಡಿಕೇರಿಯ ಹಿಲ್ ರಸ್ತೆಯ ರಿಯಾಜ್ ಹಾಗೂ ಶಮೀಮ್ ಅನ್ಸಾರಿ ನಡೆಸುತ್ತಿದ್ದ ಕ್ಯಾಂಟೀನ್ಗೆ ಬಂದ ಆರೋಪಿ ಲೋಕೇಶ್ ಹಾಗೂ ಸಹಚರ ಮಡಿಕೇರಿಯ ಎಂ.ಎ. ಅಕ್ರಂ ಕೆಲವೊಂದು ತಿಂಡಿಯನ್ನು ತರಿಸಿಕೊಂಡು ತಿಂದು ಮಾಲೀಕರಿಂದಲೇ ಹಫ್ತಾ ವಸೂಲಿ ಮಾಡುತ್ತಿದ್ದ.
ತಾ. ೧೮.೧೦.೨೦೧೮ ರಂದು ರಾತ್ರಿ ೭.೪೫ಕ್ಕೆ ಆರೋಪಿ ಲೋಕೇಶ್ ಅಕ್ರಂ ಮೂಲಕ ೨ ಚಿಕನ್ ರೋಲ್ ತರಿಸಿಕೊಂಡು ತಿಂದ ನಂತರ ಪುನಃ ಒಂದು ಪ್ಲೇಟ್ ಗೋಬಿ ಮಂಚೂರಿ ತರುವಂತೆ ಅಕ್ರಂನನ್ನು ಕಳುಹಿಸಿದ್ದಾನೆ. ಈ ಸಂದರ್ಭ ಶಮೀಮ್ ಅನ್ಸಾರಿ ‘ನಿಮ್ಮ ಹಳೇ ಬಾಕಿ ಇದೆ. ಮೊದಲು ಅದನ್ನು ನೀಡಿ’ ಎಂದು ಹೇಳಿದ್ದಾನೆ. ಈ ವಿಚಾರವನ್ನು ಅಕ್ರಂ ಬಂದು ಲೋಕೇಶ್ಗೆ ತಿಳಿಸಿದ್ದು, ಕುಪಿತಗೊಂಡ ಲೋಕೇಶ್ ತನ್ನ ಬಂದೂಕನ್ನು ಕೊಂಡೊಯ್ದು ಮೂರು ಬಾರಿ ಗುಂಡು ಹಾರಿಸಿದ್ದಾನೆ. ಇದರಿಂದ ರಿಯಾಜ್ ಬಲತೊಡೆಗೆ ಹಾಗೂ ಶಮೀಮ್ ಅವರ ಎರಡು ಮೊಣಕಾಲಿಗೆ ಗುಂಡು ತಗುಲಿ ಗಾಯವಾಗಿದೆ.
(ಮೊದಲ ಪುಟದಿಂದ) ಈ ವಿಚಾರದ ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ಈ ಹಿಂದೆ ಆಕ್ರಂನನ್ನು ಸಾಕ್ಷಾö್ಯಧಾರದ ಕೊರತೆಯಿಂದ ಬಿಡುಗಡೆಗೊಳಿಸಿದ್ದು, ಆರೋಪಿ ಲೋಕೇಶ್ ಅಪರಾಧ ಸಾಭೀತಾದ ಕಾರಣ ಆತನ ಬಂದೂಕನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಜೊತೆಗೆ ಸೆಕ್ಷನ್ ೩೦೭ ಅಡಿ ಅಪರಾಧಕ್ಕೆ ೩ ವರ್ಷಗಳ ಕಠಿಣ ಶಿಕ್ಷೆ, ರೂ. ೫ ಸಾವಿರ ದಂಡ, ದಂಡ ಕಟ್ಟದಿದ್ದಲ್ಲಿ ೧ ವರ್ಷ ಕಠಿಣ ಸಜೆ, ಕಲಂ ೫೦೬ ಅಡಿ ಅಪರಾಧಕ್ಕೆ ೨ ವರ್ಷ ಕಠಿಣ ಸಜೆ ಮತ್ತು ರೂ. ೫ ಸಾವಿರ ದಂಡ, ದಂಡ ಕಟ್ಟಲು ತಪ್ಪಿದ್ದಲ್ಲಿ ೧ ವರ್ಷಗಳ ಕಠಿಣ ಸಜೆ ಮತ್ತು ಕಲಂ ೨, ೨೭ ಅಡಿಯ ಅಪರಾಧಕ್ಕೆ ೩ ವರ್ಷಗಳ ಕಠಿಣ ಸಜೆ, ರೂ. ೧ ಸಾವಿರ ದಂಡ, ದಂಡ ಕಟ್ಟಲು ತಪ್ಪಿದ್ದಲ್ಲಿ ೬ ತಿಂಗಳ ಸಜೆ ವಿಧಿಸಿ ತೀರ್ಪು ನೀಡಲಾಗಿದೆ. ಸರಕಾರಿ ಅಭಿಯೋಜಕರಾದ ಕೆ.ಜಿ. ಅಶ್ವಿನಿ ವಾದ ಮಂಡಿಸಿದರು. ಕೊಲೆಗೆ ಯತ್ನಿಸಿದ ಆರೋಪಿಗೆ ಶಿಕ್ಷೆ