ಮಡಿಕೇರಿ, ಅ. ೧೬: ಮೈಸೂರು ವಿಶ್ವವಿದ್ಯಾನಿಲಯ ನೀಡುವ ಗೌರವ ಡಾಕ್ಟರೇಟ್‌ಗೆ ಮೈಸೂರು ಮಿತ್ರ ಹಾಗೂ ಸ್ಟಾರ್ ಆಫ್ ಮೈಸೂರು ಪತ್ರಿಕೆ ಸ್ಥಾಪಕ ಸಂಪಾದಕರಾದ ಕಲ್ಯಾಟಂಡ ಬಿ. ಗಣಪತಿ ಆಯ್ಕೆಗೊಂಡಿದ್ದಾರೆ.

೫ ದಶಕಗಳಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡಿರುವ ಗಣಪತಿ ಅವರು, ೫ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಇವರ ಸೇವೆ ಪರಿಗಣಿಸಿ ಗೌರವಕ್ಕೆ ವಿವಿ ಆಯ್ಕೆಗೊಳಿಸಿದೆ.