‘ಶಕ್ತಿ’ ವರದಿಗೆ ಸ್ಪಂದನ
ಕೂಡಿಗೆ, ಅ. ೧೬: ತಾ. ೧೩ ರಂದು ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ ಬಗೆಹರಿಯದ ಗೋಸದನ ವಿವಾದ, ಲೋಕಾಯುಕ್ತರಿಗೆ ದೂರು ಎಂಬ ವರದಿಗೆ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಅವರು ಸ್ಪಂದಿಸಿ ಸಂಬAಧಿಸಿದ ಎರಡು ಇಲಾಖೆಯ ಅಧಿಕಾರಿಗಳ ಸಭೆಯನ್ನು ಕರೆಯುವಂತೆ ಸೂಚನೆ ನೀಡಿದ್ದಾರೆ.
ಶಾಸಕರು ಸೋಮವಾರಪೇಟೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಹುದುಗೂರು ಗ್ರಾಮಸ್ಥರ ಮನವಿಯನ್ನು ಸಲ್ಲಿಸುವ ಸಂದರ್ಭದಲ್ಲಿ ಹಾಜರಿದ್ದ ಶಾಸಕರು ಈಗಾಗಲೇ ಈ ವಿಭಾಗದ ಗ್ರಾಮಸ್ಥರು ಮತ್ತು ಪತ್ರಿಕೆಯ ಮೂಲಕ ತನ್ನ ಗಮನಕ್ಕೆ ಬಂದಿದೆ. ಹೈನುಗಾರಿಕೆಗೆ ಒತ್ತು ನೀಡುವ ನಿಟ್ಟಿನಲ್ಲಿ ರೈತರಿಗೆ ಯಾವುದೇ ರೀತಿಯ ತೊಂದರೆಗಳು ಆಗದಂತೆ ಬಗೆಹರಿಸಲು ಅರಣ್ಯ, ಪಶುಪಾಲನೆ ಇಲಾಖೆ, ಮತ್ತು ಕಂದಾಯ ಇಲಾಖೆಯ ಸಮ್ಮುಖದಲ್ಲಿ ಸಭೆಯನ್ನು ಕರೆದು ಸಮಸ್ಯೆಗಳನ್ನು ಬಗೆಹರಿಸಲು ಕ್ರಮವನ್ನು ಕೈಗೊಳ್ಳಬೇಕಾಗುತ್ತದೆ. ಅದರಿಂದ ಅತಿ ಶೀಘ್ರದಲ್ಲಿ ಕುಶಾಲನಗರ ತಾಲೂಕು ಕೇಂದ್ರದಲ್ಲಿ ಸಭೆಯನ್ನು ಕರೆಯು ವಂತೆ ಕಂದಾಯ ಇಲಾಖೆಯ ತಹಶೀಲ್ದಾರ್ಗೆ ಸೂಚನೆ ನೀಡಿದರು.