ಮಡಿಕೇರಿ, ಅ. ೧೬: ಹಾಕಿ ಇಂಡಿಯಾ ವತಿಯಿಂದ ತಮಿಳುನಾಡಿನ ಚೆನ್ನೆöÊನಲ್ಲಿ ಏರ್ಪಡಿಸಲಾಗಿರುವ ಪ್ರಥಮ ದಕ್ಷಿಣ ವಲಯ ಸಬ್ ಜೂನಿಯರ್ ಬಾಲಕ-ಬಾಲಕಿಯರ ಹಾಕಿ ಪಂದ್ಯಾವಳಿ ತಾ.೧೭ರಿಂದ (ಇಂದಿನಿAದ) ಆರಂಭಗೊಳ್ಳಲಿದೆ. ಬಹುತೇಕ ಕೊಡಗಿನ ಆಟಗಾರರನ್ನು ಒಳಗೊಂಡಿರುವ ಹಾಕಿ ಕರ್ನಾಟಕ ತಂಡ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು, ಬಾಲಕರ ಪಂದ್ಯಾಟ ಇಂದು ನಡೆಯಲಿದ್ದು, ಮೊದಲ ಪಂದ್ಯದಲ್ಲಿ ಪುದುಚೇರಿ ಹಾಕಿ ತಂಡದೆದುರು ಸೆಣಸಲಿದೆ. ಹಾಕಿ ಕರ್ನಾಟಕ ಬಾಲಕಿಯರ ಪಂದ್ಯಾವಳಿ ತಾ.೧೮ರಿಂದ ಆರಂಭಗೊಳ್ಳಲಿದ್ದು, ಹಾಕಿ ತೆಲಂಗಾಣ ತಂಡದೆದುರು ಆಡಲಿದೆ.

ಶ್ರೇಯಸ್ ಆಯ್ಕೆ: ಹಾಕಿ ಕರ್ನಾಟಕ ಬಾಲಕರ ತಂಡಕ್ಕೆ ೧೮ ಮಂದಿ ಆಟಗಾರರ ಪೈಕಿ ಕೂಡಿಗೆಯ ಶ್ರೇಯಸ್ ಕೆ.ಎಂ. ಕೂಡ ಆಯ್ಕೆಯಾಗಿದ್ದಾನೆ.