ಮಡಿಕೇರಿ, ಅ. ೧೬: ಐತಿಹಾಸಿಕ ನಾಡಹಬ್ಬ ದಸರಾ ಉತ್ಸವದಲ್ಲಿ ಡಿಜೆ ಹಾಗೂ ಲೇಸರ್ ಲೈಟ್ ಬಳಕೆಗೆ ಸಂಬAಧಿಸಿದAತೆ ಸರ್ವೋಚ್ಚ ನ್ಯಾಯಾಲಯದ ನಿಯಮಗಳು ಪಾಲನೆಯಾಗಬೇಕು. ಇಲ್ಲವಾದರೆ ಸಂಬAಧಿಸಿದ ಅಧಿಕಾರಿಗಳ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗುವುದಾಗಿ ಹೈಕೋರ್ಟ್ ವಕೀಲ ಹಾಗೂ ವಾಯ್ಸ್ ಆಫ್ ಪಬ್ಲಿಕ್ನ ಪ್ರಮುಖರಾದ ಎನ್.ಪಿ. ಅಮೃತೇಶ್ ಎಚ್ಚರಿಕೆ ನೀಡಿದ್ದಾರೆ.
ಪತ್ರಿಕಾ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಮಡಿಕೇರಿ ದಸರಾ ಉತ್ಸವ ಇತ್ತೀಚಿನ ವರ್ಷಗಳಲ್ಲಿ ವಾಣಿಜ್ಯೀಕರಣವಾಗುತ್ತಿದೆ. ಕೇವಲ ಮೋಜು ಮಸ್ತಿಗೆ ಸೀಮಿತವಾಗುತ್ತಿದೆ ಎಂದು ಅವರು ಆರೋಪಿಸಿದರು. ದಸರಾ ಉತ್ಸವದಲ್ಲಿ ಡಿಜೆ ಬಳಕೆ ಹಾಗೂ ಲೇಸರ್ ಬಳಕೆ ಸಂಬAಧ ಸರ್ವೋಚ್ಚ ನ್ಯಾಯಾಲಯ ಕೆಲವೊಂದು ಷರತ್ತುಗಳನ್ನು ವಿಧಿಸಿದ್ದರೂ ಕೂಡ ಅದನ್ನು ಉಲ್ಲಂಘಿಸಲಾಗುತ್ತಿದೆ. ಇದರಿಂದಾಗಿ ಹೃದ್ರೋಗಿಗಳಿಗೆ, ಹಿರಿಯ ನಾಗರಿಕರಿಗೆ ತೊಂದರೆ ಆಗುತ್ತಿದೆ. ಮಿತಿ ಮೀರಿದ ಡಿಜೆ ಶಬ್ಧದಿಂದ ಸಾವುಗಳು ಕೆಲವೆಡೆ ಸಂಭವಿಸಿವೆ. ಪ್ರಾಣಗಳಿಗೂ ತೊಂದರೆಯಾಗುತ್ತಿವೆ. ಹಲವರು ಕಿವುಡುತನಕ್ಕೆ ಒಳಗಾದ ನಿದರ್ಶನಗಳಿವೆ. ಲೇಸರ್ ಲೈಟ್ನಿಂದ ದೃಷ್ಠಿ ಕಳೆದುಕೊಂಡ ಘಟನೆಯೂ ಕೆಲವೆಡೆ ಸಂಭವಿಸಿದೆ. ಕೈಗಾರಿಕಾ ಪ್ರದೇಶಗಳಲ್ಲಿ ಹಗಲಿನಲ್ಲಿ ೭೫ ಡಿಬಿ, ರಾತ್ರಿಯಲ್ಲಿ ೭೦ ಡಿಬಿ, ವಾಣಿಜ್ಯ ಪ್ರದೇಶಗಳಲ್ಲಿ ಹಗಲು ೬೫ ಡಿಬಿ, ರಾತ್ರಿ ೫೫ ಡಿಬಿ ಹಾಗೂ ಜನವಸತಿ ಪ್ರದೇಶಗಳಲ್ಲಿ ಹಗಲು ೫೫ ಡಿಬಿ, ರಾತ್ರಿ ೪೫ ಡಿಬಿ ಪ್ರಮಾಣದ ಧ್ವನಿವರ್ಧಕ ಬಳಸಬೇಕೆಂಬ ನಿಯಮವಿದ್ದರೂ ಅದು ಪಾಲನೆಯಾಗುತ್ತಿಲ್ಲ ಎಂದು ಅವರು ದೂರಿದರು. ಡಿಜೆ ಬಳಕೆಗೆ ಇರುವ ಶಬ್ಧದ ಪ್ರಮಾಣ ಮಿತಿ ಹಾಗೂ ಸಮಯದ ಮಿತಿಯನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು. ಲೇಸರ್ ಲೈಟ್ ಬಳಕೆ ಸಂಬAಧ ಇರುವ ನಿಯಮಗಳು ಕೂಡ ಪಾಲನೆಯಾಗಬೇಕು.
ಬೆಂಕಿ ಕಿಡಿ, ಜ್ವಾಲೆಗಳು, ಸಿಡಿಯುವ ಟ್ಯಾಬ್ಲೊಗಳು, ಪಟಾಕಿಗಳು, ರಾಸಾಯನಿಕ ಹೊಗೆ ಯಂತ್ರಗಳ ಬಳಕೆಗೂ ಕಡಿವಾಣ ಹಾಕಬೇಕೆಂದು ಅಮೃತೇಶ್ ಒತ್ತಾಯಿಸಿದರು. ೨೦೧೨ ರಿಂದ ನೋಂದಾಯಿತ ವೈದ್ಯರ ಸಂಘಟನೆ, ಹಿರಿಯ ನಾಗರಿಕರ ವೇದಿಕೆ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು ಡಿಜೆ ಬಳಕೆ ಬೇಡ ಎಂದು ಸಂಬAಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಾ ಬಂದಿವೆ. ಈ ಬಗ್ಗೆ ತಮ್ಮ ಬಳಿ ದಾಖಲೆಯಿದೆ. ಹೀಗಿದ್ದರೂ ಅಧಿಕಾರಿಗಳು ಏಕೆ ಈ ಬಗ್ಗೆ ಮೌನವಹಿಸಿದ್ದಾರೆ ಎಂದು ಪ್ರಶ್ನಿಸಿದ ಅವರು, ಜಿಲ್ಲಾಧಿಕಾರಿಗಳು ಸೇರಿದಂತೆ ಸಂಬAಧಪಟ್ಟ ಎಲ್ಲಾ ಅಧಿಕಾರಿಗಳು ಇನ್ನಾದರೂ ಕಾನೂನನ್ನು ಪಾಲಿಸಬೇಕು. ಇಲ್ಲವಾದರೆ ಅವರುಗಳ ವಿರುದ್ಧವೇ ಕಾನೂನು ಹೋರಾಟ ಕೈಗೊಳ್ಳಲಾಗುವುದು ಎಂದು ಅಮೃತೇಶ್ ಎಚ್ಚರಿಕೆ ನೀಡಿದರು.
ದಸರಾ ಹೆಸರಿನಲ್ಲಿ ಬಲತ್ಕಾರವಾಗಿ ದೇಣಿಗೆ ಸಂಗ್ರಹ ನಡೆಯುತ್ತಿದೆ ಎಂದು ಆಪಾದಿಸಿದ ಅವರು, ಸರ್ಕಾರದ ಅನುದಾನ ಲಭ್ಯವಿದ್ದರೂ ಬಲತ್ಕಾರವಾಗಿ ದೇಣಿಗೆ ಸಂಗ್ರಹ ಮಾಡುವುದಾದರೆ ಸರ್ಕಾರ ಅನುದಾನ ನೀಡುವುದನ್ನು ನಿಲ್ಲಿಸಲಿ ಎಂದು ಹೇಳಿದರು.
ಗೋಷ್ಠಿಯಲ್ಲಿ ವಾಯ್ಸ್ ಆಫ್ ಪಬ್ಲಿಕ್ನ ಸಂಚಾಲಕಿ ದೀಕ್ಷಾ ಅಮೃತೇಶ್, ವಕೀಲರು ಹಾಗೂ ಆರ್ಟಿಐ ಕಾರ್ಯಕರ್ತರಾದ ಸದಾನಂದಗೌಡ, ಸಾಮಾಜಿಕ ಕಾರ್ಯಕರ್ತರಾದ ರಮೇಶ್, ಜ್ಯೋತಿ, ವ್ಯಾಪಾರಿ ಶಿವರಾಂ ಉಪಸ್ಥಿತರಿದ್ದರು.