ಗೋಣಿಕೊಪ್ಪ ವರದಿ, ಅ. ೧೬: ಮುಂದಿನ ಪೀಳಿಗೆಗೂ ಕೋವಿ ಹಕ್ಕು ವಿನಾಯಿತಿ ಕಾಪಾಡಿಕೊಳ್ಳಲು ಕೊಡವ ಜನಾಂಗದ ಪ್ರತಿಯೊಬ್ಬ ರಿಗೂ ಕಾಳಜಿ ಬೇಕು ಎಂದು ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಹೇಳಿದರು.
ಅಮ್ಮತ್ತಿ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಅಮ್ಮತ್ತಿ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ತೆಂಗಿನಕಾಯಿಗೆ ಗುಂಡು ಹೊಡೆ ಯುವ ಸ್ಪರ್ಧೆ ಉದ್ಘಾಟಿಸಿ, ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕೋವಿ ಹಕ್ಕು ಶಾಶ್ವತ ವಿನಾಯಿತಿ ವಿಚಾರವಾಗಿ ಕೊಡವ ಸಮಾಜ, ಕೊಡವ ಜನಾಂಗದ ಪ್ರಮುಖರು, ಫೆಡರೇಷನ್ ಮತ್ತು ಜನಪ್ರತಿನಿಧಿಗಳು ಹಾಗೂ ವಕೀಲರು ಒತ್ತಾಯ ಮುಂದುವರಿಸಿದ್ದಾರೆ. ವಿನಾಯಿತಿ ಉಳಿಸಿಕೊಳ್ಳಲು ಹೋರಾಟಗಳು ಮುಖ್ಯ. ೨೦೧೬ ರ ನಂತರ ವಿನಾಯಿತಿ ಬಗ್ಗೆ ಕ್ಯಾ. ಚೇತನ್ ಹಾಕಿರುವ ಅರ್ಜಿ ಬಗ್ಗೆ ಹೋರಾಟ ಗಳು ಮುಂದುವರಿದಿವೆೆ. ಶಾಶ್ವತ ವಿನಾಯಿತಿ ಆರ್ಮ್ಸ್ ಆಕ್ಟ್ ಲೈಸೆನ್ಸ್ ಸೆಕ್ಷನ್ ೩ ರಂತೆ ವಿನಾಯಿತಿ ದೊರೆತಿದೆ. ಇದರಿಂದ ಸ್ವತಂತ್ರವಾಗಿ ನಾವು ಕೋವಿ ಇಟ್ಟುಕೊಳ್ಳಲು ಸಾಧ್ಯವಾಗಿದೆ. ಇಂತಹ ಹಕ್ಕು ಮುಂದಿನ ಪೀಳಿಗೆಗೂ ಕಾಪಾಡಿಕೊಳ್ಳ ಬೇಕಿದೆ. ಕೇಂದ್ರ ಸರ್ಕಾರವು ೧೦ ವರ್ಷಕ್ಕೆ ವಿನಾಯಿತಿಯನ್ನು ಮುಂದುವರಿ ಸಿರುವುದರಿಂದ ೨೦೨೯ರ ನಂತರವು ಮುಂದುವರಿ ಸಲು ಒತ್ತಾಯ ಮುಂದುವರಿಯ ಬೇಕಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಸನ್ಮಾನ ಸ್ವೀಕರಿಸಿ ಮಾತನಾಡಿ, ಕೋವಿ ಕೊಡವರ ಜನ್ಮಸಿದ್ದ ಹಕ್ಕು ಎಂಬುವುದನ್ನು ತಿಳಿಸುವ ಕಾರ್ಯ ನಡೆಯಬೇಕಿದೆ. ನಮ್ಮ ಹುಟ್ಟು-ಸಾವುಗಳಲ್ಲಿ ಕೋವಿ ಸಂಸ್ಕೃತಿಯ ಭಾಗವಾಗಿರುವುದನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ತಿಳಿಸುವ ಕಾರ್ಯ ಮುಂದುವರಿಯಬೇಕು. ಕೈಲ್ಪೊಳ್ದ್, ಚಂಗ್ರಾAದಿ, ಪುತ್ತರಿ ಕೊಡವರ ಹಬ್ಬಗಳಾಗಿದ್ದು, ಇದರಲ್ಲಿ ಕೋವಿಗೆ ನೀಡುತ್ತಿರುವ ಪೂಜನೀಯ ಸ್ಥಾನವನ್ನು ಪೋಷಿಸಬೇಕಿದೆ ಎಂದರು.
ಅಸೋಸಿಯೇಷನ್ ಪ್ರಮುಖ ರಾದ ಬೋಸ್ ದೇವಯ್ಯ ಮಾತ ನಾಡಿ, ಕೋವಿ ನಮ್ಮ ಸಂಸ್ಕೃತಿಯ ಭಾಗವಾಗಿದ್ದು, ಇದರ ಗೌರವವನ್ನು ಉಳಿಸಿಕೊಳ್ಳಲಾಗುತ್ತಿದೆ ಎಂದರು.
ಶಾಸಕ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ, ಪ್ರೌಢಶಾಲೆ ಆಡಳಿತ ಮಂಡಳಿ ಅಧ್ಯಕ್ಷ ನಿವೃತ್ತ ಸೇನಾಧಿಕಾರಿ ಕ. ಕಂಡ್ರತAಡ ಸಿ ಸುಬ್ಬಯ್ಯ, ಕೂರ್ಗ್ ರೈಫಲ್ ಅಸೋಸಿಯೇಷನ್ ಅಧ್ಯಕ್ಷ ಲೆ. ಕ. ಪಟ್ಟಡ ಸಿ. ಕರುಂಬಯ್ಯ ತೆಂಗಿನ ಕಾಯಿಗೆ ಗುಂಡು ಹೊಡೆದು ಉತ್ಸಾಹ ಹೆಚ್ಚಿಸಿದರು. ೦.೨೨ ರೈಫಲ್, ೧೨ ಬೋರ್, ಆರ್ ರೈಫಲ್ ವಿಭಾಗದಲ್ಲಿ ಸ್ಪರ್ಧೆಗಳು ನಡೆದವು.
ಉದ್ಯಮಿ ಓಡಿಯಂಡ ಮಾಚಯ್ಯ, ವಿರಾಜಪೇಟೆ ವಕೀಲರ ಸಂಘದ ಅಧ್ಯಕ್ಷ ಕೊಕ್ಕಂಡ ಅಪ್ಪಣ್ಣ, ಅಧ್ಯಕ್ಷ ವೀರಾಜಪೇಟೆ ಯೂನಿಯನ್ ಬ್ಯಾಂಕ್ ಅಧಿಕಾರಿ ಜೇಮ್ಸ್ ಮೆನೆಜಸ್, ಅಮ್ಮತ್ತಿ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ಅಲ್ಲಾರಂಡ ದೀಪಕ್ ಅಪ್ಪಯ್ಯ, ನಿಕಟಪೂರ್ವ ಅಧ್ಯಕ್ಷರಾದ ಉದ್ದಪಂಡ ನರು ನಾಚಪ್ಪ, ಮೊಳ್ಳೇರ ರತನ್ ಪೂಣಚ್ಚ ಇದ್ದರು.