ಮಡಿಕೇರಿ, ಅ. ೧೫: ತಾ. ೧೬ರಿಂದ (ಇಂದಿನಿAದ) ಮೈಸೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಮುಖ್ಯಮಂತ್ರಿಗಳ ಕಪ್ (ಸಿಎಂ ಕಪ್) ಹಾಕಿ ಪಂದ್ಯಾವಳಿಯಲ್ಲಿ ಜಿಲ್ಲೆಯಿಂದ ಹಾಕಿ ಕೂರ್ಗ್ ಮಹಿಳಾ ತಂಡ ಪಾಲ್ಗೊಳ್ಳಲಿದ್ದು, ತಂಡ ಇಂದು ಮೈಸೂರಿಗೆ ತೆರಳಿದೆ.
ತಂಡದಲ್ಲಿ ಕೂಡಿಗೆ ಕ್ರೀಡಾ ಶಾಲೆಯ ನೇಹ ಶಂಕರ್ ಮುಟಗರ್, ಡಿ.ಯು. ಚೈತನ್ಯ, ಎಸ್.ಆರ್. ಪುಣ್ಯ, ಆರ್. ದೀಪಿಕಾ, ಟಿ.ಎಸ್. ವಿದ್ಯಾಶ್ರೀ, ಎಂ.ಎಸ್. ಗಗನ, ಪೊನ್ನಂಪೇಟೆ ಕ್ರೀಡಾ ವಸತಿ ನಿಲಯದ ಎಂ.ಯು. ದಿಶಾ ಪೊನ್ನಮ್ಮ, ಲೇಖ ಮುತ್ತಮ್ಮ, ಮಡಿಕೇರಿ ಸಾಯಿ ತರಬೇತಿ ಕೇಂದ್ರದ ಪಿ. ನಂದಿನಿ, ಪಿ. ನಂದಿನಿದೇವಿ, ಆರ್. ಕೀರ್ತಿಲಯ, ಮಹಿ ಸರ್ವಿ, ಡಿ.ಜೆ. ಭೂಮಿಕಾ, ಜಶ್ಮಿತಾ ಪಿ.ಎಸ್, ಪಿ. ಶೆಯಿಲ್ ರಾಯಾಲಿನ್ ಅವರುಗಳು ಆಡಲಿದ್ದಾರೆ. ಕೊಕ್ಕಲೆಮಾಡ ಗೌತಮಿ ತಂಡದ ವ್ಯವಸ್ಥಾಪಕಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಹಾಕಿ ಕೂರ್ಗ್ನ ಅಧ್ಯಕ್ಷ ಪಳಂಗAಡ ಲವ, ಕಾರ್ಯದರ್ಶಿ ಅಮ್ಮಂಡಿರ ಚೇತನ್, ಕುಡೆಕಲ್ ಸಂತೋಷ್, ಸಮಿತಿ ತರಬೇತಿ ಕೇಂದ್ರದ ಆಡಳಿತಾಧಿಕಾರಿ ಮಿನಿ ಉನ್ನಿರಾಜ್ ತಂಡಕ್ಕೆ ಶುಭ ಹಾರೈಸಿ ಬೀಳ್ಕೊಟ್ಟರು.
ಎ. ಪೂಲ್ನಲ್ಲಿ ಹಾಕಿ ಮೈಸೂರು, ಬಾಗಲಕೋಟೆ, ಬೆಳಗಾಂ, ಹಾಸನ್ ಹಾಗೂ ಬಿ ಪೂಲ್ನಲ್ಲಿ ಹಾಕಿ ಕೂರ್ಗ್, ಧಾರವಾಡ, ದಕ್ಷಿಣ ಕನ್ನಡ, ಬಳ್ಳಾರಿ ತಂಡಗಳು ಸೆಣಸಾಡಲಿವೆ. ತಾ. ೧೬ರಂದು ಇಂದು ಹಾಕಿ ಕೂರ್ಗ್ ತಂಡ ಹಾಕಿ ದಕ್ಷಿಣ ಕನ್ನಡ ತಂಡದೆದುರು ಮೊದಲ ಪಂದ್ಯ ಆಡಲಿವೆ.