ಮಡಿಕೇರಿ, ಅ. ೧೫: ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ನಗರಸಭಾ ಸದಸ್ಯೆಯರು, ಮಹಿಳೆಯರ ಬಳಗ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ತಾ. ೨೨ ರಂದು ಗಾಂಧಿ ಮೈದಾನದಲ್ಲಿ ಆಯೋಜಿಸಲಾಗಿರುವ ಮಹಿಳಾ ದಸರಾದ ವಿವಿಧ ಸ್ಪರ್ಧೆಗಳಿಗೆ ಸ್ಥಳದಲ್ಲಿಯೇ ಹೆಸರು ನೋಂದಾ ಯಿಸಲು ಅವಕಾಶ ನೀಡಲಾಗಿದೆ ಎಂದು ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ಮತ್ತು ಮಹಿಳಾ ದಸರಾ ಸಮಿತಿ ಸಂಚಾಲಕಿ ಕುಡೆಕಲ್ಲು ಸವಿತಾ ಸಂತೋಷ್ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾ.೨೨ ರಂದು ಬೆಳಿಗ್ಗೆ ೧೦ ಗಂಟೆ ಯಿಂದಲೇ ನಗರದ ಗಾಂಧಿ ಮೈದಾನ ದಲ್ಲಿ ೮ನೇ ವರ್ಷದ ಮಹಿಳಾ ದಸರಾವನ್ನು ಸಂಭ್ರಮ ದಿಂದ ಆಚರಿಸಲು ತೀರ್ಮಾನಿ ಸಲಾಗಿದ್ದು, ವಿವಿಧ ಸ್ಪರ್ಧೆಗಳು ಜಿಲ್ಲೆಯ ಮಹಿಳೆ ಯರಿಗಾಗಿ ನಡೆಯಲಿವೆೆ.
ಸ್ಪರ್ಧೆಗಳ ವಿವರ
ಎಥ್ನಿಕ್ ಫ್ಯಾಷನ್ ಶೋ ೨೦ ರಿಂದ ೩೦ ವಯೋಮಾನದವರಿಗೆ, ಹಾಗೂ ೩೧ ರಿಂದ ೫೫ ವರ್ಷ ವಯೋಮಿತಿಯ ಮಹಿಳೆಯರಿಗೆ ಸಾಂಪ್ರದಾಯಿಕ ಉಡುಗೆ ಸ್ಪರ್ಧೆ. (ಕರ್ನಾಟಕದ ವಿವಿಧ ಉಡುಗೆಗಳಿಗೆ ಆದ್ಯತೆ, ಉಡುಗೆ, ಆಭರಣ, ವಸ್ತç, ನಡುಗೆ, ಕೇಶ ವಿನ್ಯಾಸ, ಎಲ್ಲವನ್ನು ಗಣನೆಗೆ ತೆಗೆದುಕೊಳ್ಳಲಾಗುವುದು.) ಈ ಸ್ಪರ್ಧೆ ವೈಯಕ್ತಿಕ ವಿಭಾಗದಲ್ಲಿ ಆಯೋಜಿಸಲ್ಪಟ್ಟಿದೆ.
ಗಾರ್ಭಾ ನೃತ್ಯ ಸ್ಪರ್ಧೆ ೨೦ ರಿಂದ ೩೦ ವರ್ಷದ ಮಹಿಳೆಯ ರಿಗಾಗಿ, ೩೦ ರಿಂದ ೪೦ ವರ್ಷ ವಯೋಮಿತಿ ಮಹಿಳೆಯರಿಗೆ ೧೦೦ ಮೀಟರ್ ಓಟದ ಸ್ಪರ್ಧೆ, ತೆಂಗಿನ ಕಾಯಿಗೆ ಕಲ್ಲು ಹೊಡೆಯುವುದು, ಹಾಗೂ ಹಗ್ಗ ಜಗ್ಗಾಟ, (ಒಂದು ಗುಂಪಿನಲ್ಲಿ ೧೦ ಜನ ಇರಬೇಕು), ೪೦ ರಿಂದ ೫೦ ವರ್ಷ ವಯೋಮಿತಿ ಮಹಿಳೆಯರಿಗೆ ೧೦೦ ಮೀಟರ್ ಓಟದ ಸ್ಪರ್ಧೆ, ಚಮಚದಲ್ಲಿ ನಿಂಬೆ ಹಣ್ಣು ಇಟ್ಟು ವೇಗವಾಗಿ ನಡೆಯು ವುದು., ಬಕೆಟ್ಗೆ ಚೆಂಡನ್ನು ಹಾಕು ವುದು. ೫೦ ರಿಂದ ೬೦ ವರ್ಷ ವಯೋಮಿತಿ ಮಹಿಳೆಯರಿಗೆ ಬಕೆಟ್ಗೆ ಚೆಂಡು ಹಾಕುವ ಸ್ಪರ್ಧೆ, ತಲೆಯ ಮೇಲೆ ಪುಸ್ತಕ ಇಟ್ಟು ನಡೆಯುವುದು, ಕೋಲಿಗೆ ರಿಂಗ್ ಹಾಕುವುದು. ೬೦ ರಿಂದ ೭೦ ವರ್ಷ ವಯೋಮಿತಿ ಮಹಿಳೆಯರಿಗೆ ನಿಧಾನವಾಗಿ ನಡೆಯುವುದು. ಸೂಜಿಗೆ ನೂಲನ್ನು ಹಾಕುವುದು, ಬಾಂಬ್ ಇನ್ ಸಿಟಿ, ೭೦ ರಿಂದ ೮೦ ವರ್ಷ ವಯೋಮಿತಿ ಮಹಿಳೆಯರಿಗೆ ಸೂಜಿಗೆ ನೂಲನ್ನು ಹಾಕುವುದು, ಚೆಂಡನ್ನು ವರ್ಗಾಯಿ ಸುವುದು, ನಿಧಾನವಾಗಿ ನಡೆಯು ವುದು. ವೇದಿಕೆ ಮೇಲೆ ನಡೆಯುವ ಇತರ ಸ್ಪರ್ಧೆಗಳು - ಎಲ್ಲಾ ವಯಸ್ಸಿನ ಮಹಿಳೆಯರಿಗಾಗಿ ಮೆಹೆಂದಿ ಹಾಕುವುದು, ಸೀರೆಯ ನಿಖರವಾದ ಬೆಲೆ ಹೇಳುವುದು ಮತ್ತು ವಾಲಗ ಕುಣಿತ ಸ್ಪರ್ಧೆಗಳು ನಡೆಯಲಿವೆ.
ಮಡಿಕೇರಿ ಗಾಂಧಿ ಮೈದಾನದ ಸ್ಪರ್ಧಾ ಸ್ಥಳದಲ್ಲಿಯೇ ಸ್ಪರ್ಧಿಗಳು ಹೆಸರನ್ನು ನೋಂದಾಯಿ ಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.ಮಹಿಳಾ ದಸರಾ ಸಂಬAಧಿತ ಹೆಚ್ಚಿನ ಮಾಹಿತಿಗೆ ೯೫೩೫೮೯೮೩೫೨, ೮೩೧೦೮೯೧೨೬೯, ೭೭೬೦೮೪೦೭೫೪ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.