ಸೋಮವಾರಪೇಟೆ, ಅ. ೧೫: ಚಿತ್ರದುರ್ಗ ಬೃಹನ್ಮಠಕೆ ಸೇರಿದ ಬೇಳೂರು ಮಠದ ಆಸ್ತಿ ವಿವಾದಕ್ಕೆ ಸಂಬAಧಿಸಿದAತೆ ಆಡಳಿತಾಧಿಕಾರಿ ಗಳ ಪರವಾಗಿ ಮಾಹಿತಿ ಸಂಗ್ರಹಿಸಲು ಬಂದಿದ್ದ ಪ್ರತಿನಿಧಿಯ ಮುಂದೆ ವಾಗ್ವಾದ ನಡೆದು ಕೆಲಕಾಲ ಬೇಳೂರು ಮಠದ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾದ ಘಟನೆ ನಡೆದಿದೆ.
ಪೋಕ್ಸೋ ಮೊಕದ್ದಮೆಯಿಂ ದಾಗಿ ಮುರುಘಾ ಶರಣರು ಜೈಲು ಸೇರಿದ ನಂತರ ಮುರುಘಾ ಮಠದ ವಿಚಾರಗಳು ಒಂದೊAದಾಗಿ ವಿವಾದ ಪಡೆದುಕೊಳ್ಳುತ್ತಿವೆ.
ಕೊಡಗು ಜಿಲ್ಲೆಯಲ್ಲೂ ಅಂದಿನ ರಾಜರು ನೀಡಿದ ೩೫೦೦ ಎಕರೆ ಜಮೀನು ಇಂದು ಕೇವಲ ೫೫೦ ಎಕ ರೆಗೆ ಬಂದು ನಿಂತಿದೆ. ಉಳುವವನಿಗೆ ಭೂಮಿ ಕಾಯಿದೆ ಅನ್ವಯ ಒಂದಷ್ಟು ಭೂಮಿ ಉಳುವವರ ಪಾಲಾದರೆ ಬಹುತೇಕ ಭೂಮಿ ಅನಧಿಕೃತವಾಗಿ ಮಠದ ಆಡಳಿತ ಹಿಡಿತವಿದ್ದವರೆ ಅನ್ಯರಿಗೆ ಪರಭಾರೆ ಮಾಡಿದ್ದಾರೆ ಎಂಬ ದೂರಿನ ಹಿನ್ನಲೆಯಲ್ಲಿ ಬೃಹನ್ಮಠದ ಆಡಳಿತಾಧಿಕಾರಿಗಳು ಮಠದ ಕಾನೂನು ಸಲಹೆಗಾರರು ಹಾಗೂ ಹಿರಿಯ ವಕೀಲರಾದ ವಿಶ್ವನಾಥ್ ರವರನ್ನು ಸ್ಥಳಪರಿಶೀಲನೆ ನಡೆಸಿ ವಸ್ತುಸ್ಥಿತಿ ತಿಳಿದು ವರದಿ ನೀಡುವಂತೆ ತಿಳಿಸಿದ ಹಿನ್ನೆಲೆಯಲ್ಲಿ ಜಿಲ್ಲೆಗೆ ಆಗಮಿಸಿದ ಅವರು ಚಂಗಡಹಳ್ಳಿ ಮಠಕ್ಕೆ ತೆರಳಿ ಅಲ್ಲಿನ ವಿವರ ಸಂಗ್ರಹಿಸಿದ್ದಾರೆ.
ನAತರ ಬೇಳೂರು ಮಠಕ್ಕೆ ಸೇರಿದ ಮಾದಾಪುರ, ಗುತ್ತಿಮಠ, ಅಭಿಮಠಕ್ಕೆ ಸೇರಿದ ಜಮೀನಿನ ವಿವರ ಸಂಗ್ರಹಿಸಲು ತೆರಳುತ್ತಿದ್ದ ಸಂದರ್ಭ ಈ ಬಗ್ಗೆ ಮಾಹಿತಿ ತಿಳಿದ ವೀರಶೈವ ಮುಖಂಡರು ಹಾಗೂ ಕೆಲವು ಗ್ರಾಮಸ್ಥರು ಬೇಳೂರು ಮಠಕ್ಕೆ ದೌಡಾಯಿಸಿ ‘ನೀವು ಬರುವ ವಿಚಾರ ಯಾರಿಗೂ ಗೊತ್ತಿಲ್ಲ; ಹೀಗೆ ಏಕಪಕ್ಷೀಯವಾಗಿ ಮಾಹಿತಿ ಸಂಗ್ರಹಿ ಸುವುದು ಸರಿಯಲ್ಲ' ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಆಡಳಿತಾ ಧಿಕಾರಿಗಳ ಪ್ರತಿನಿಧಿ ವಿಶ್ವನಾಥ್, ಇಲ್ಲಿನ ಆಸ್ತಿ ಹಾಗೂ ಬೇಳೂರು ಮಠದ ವ್ಯವಸ್ಥಾಪಕರ ಮೇಲೆ ಸಾಕಷ್ಟು ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿ ಒಂದು ವಾಸ್ತವ ವರದಿ ನೀಡಲು ತಿಳಿಸಿರುವ ಹಿನ್ನೆಲೆ ತಾನು ಆಗಮಿಸಿದ್ದು, ಯಾರೊಂ ದಿಗೂ ಸಭೆ ನಡೆಸುವಂತಿಲ್ಲ. ಮಠಕ್ಕೆ ಸಂಬAಧಿಸಿದAತೆ ಏನಾದರೂ ಮಾಹಿತಿ ಇದ್ದರೆ ನೀಡಬಹುದು. ತಾನು ವರದಿ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭ ಹಲವರು ಇಲ್ಲಿನ ವ್ಯವಸ್ಥಾಪಕರು ಹಲವರಿಂದ ಹಣಪಡೆದು ಸಾಗುವಳಿ ಮಾಡಲು ಬಿಟ್ಟಿದ್ದಾರೆ. ಇವರು ಬಂದಮೇಲೆ ಮಠದ ಸಾಕಷ್ಟು ಆಸ್ತಿ ಅನ್ಯರ ಪಾಲಾಗಿದೆ. ತೋಟದಲ್ಲಿದ್ದ ಬಹು ತೇಕ ಮರಗಳು ನೆಲಕಚ್ಚಿವೆ. ಇವೆಲ್ಲದರ ಬಗ್ಗೆ ತನಿಖೆಯಾಗಬೇಕು ಎಂದು ಒಂದು ತಂಡ ಆಗ್ರಹಿಸಿತು.
ಈ ಹಿಂದೆ ೩೫೦೦ ಎಕರೆ ಇದ್ದ ಪ್ರದೇಶ ಈಗ ೫೫೦ ಎಕರೆ ಪ್ರದೇಶ ವಾಗಿದೆ ಎಂದು ಕೆಲವರು ಹೇಳುತ್ತಿದ್ದು, ಮೊದಲಿನಿಂದಲೂ ತನಿಖೆಯಾಗಲಿ. ಎಲ್ಲರಿಂದಲೂ ಜಾಗವನ್ನು ವಾಪಸ್ ಬಿಡಿಸಿ ಎಂದು ಮತ್ತೊಂದು ತಂಡ ತಮ್ಮ ವಾದ ಮಂಡಿಸಿತು. ಈ ಸಂದರ್ಭ ಎರಡು ತಂಡಗಳ ನಡುವೆ ಪರಸ್ಪರ ವಾಗ್ವಾದ ನಡೆಯಿತು. ವಾಗ್ವಾದದ ನಡುವೆ ಮಠದ ವ್ಯವಸ್ಥಾಪಕ ಶಶಿಧರ್ ವಿರುದ್ಧ ಬಹುತೇಕರು ತಿರುಗಿಬಿದ್ದರು.
ಬೇಳೂರು ಮಠದ ಆಸ್ತಿಪಾಸ್ತಿ ಗಳನ್ನು ಸಂರಕ್ಷಿಸಬೇಕು, ಮಠ ಅಭಿವೃದ್ದಿ ಪಡಿಸಬೇಕು. ಆದ್ದರಿಂದ ಈ ಬಗ್ಗೆ ಸಾರ್ವಜನಿಕವಾಗಿ ಮಾಹಿತಿ ಸಂಗ್ರಹಿಸಬೇಕು. ಇದಕ್ಕಾಗಿ ಆಡಳಿತಾ ಧಿಕಾರಿಗಳೊಡನೆ ಚರ್ಚಿಸಿ ದಿನಾಂಕ ನಿಗದಿಪಡಿಸಬೇಕೆಂದು ವೀರಶೈವ ಸಮಾಜದ ಮುಖಂಡರು ಆಗ್ರಹಿ ಸಿದರು. ಇದಕ್ಕೆ ಒಪ್ಪಿದ ವಕೀಲ ವಿಶ್ವನಾಥ್ ರವರು ಈ ಬಗ್ಗೆ ಆಡಳಿತಾಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.
ಈ ಸಂದರ್ಭ ಮಠದ ಮಾಜಿ ವ್ಯವಸ್ಥಾಪಕ ಶ್ರೀಕಂಠ, ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಶಿವಪ್ಪ, ಯುವ ಘಟಕದ ಜಿಲ್ಲಾದ್ಯಕ್ಷ ಮೋಕ್ಷಿತ್, ತಾಲೂಕು ಅಧ್ಯಕ್ಷ ಆದರ್ಶ, ವೀರಶೈವ ಮುಖಂಡ ರುಗಳಾದ ಡಿ.ಬಿ.ಧರ್ಮಪ್ಪ, ಶಾಂತ ವೇರಿ ವಸಂತ್, ಶಿವಾನಂದ, ನಿತಿನ್, ಸೋಹನ್, ಚಂಗಡಹಳ್ಳಿಯ ಹಾಲಪ್ಪ, ರುದ್ರೇಶ್, ಬೇಳೂರು ಗ್ರಾಮದ ನವೀನ್, ಮಹೇಶ್, ದೇವೇಂದ್ರ ಸೇರಿದಂತೆ ಇತರರು ಹಾಜರಿದ್ದರು.