ಪೊನ್ನಂಪೇಟೆ, ಅ. ೧೬: ಗೋಣಿಕೊಪ್ಪಲು ಪಟೇಲನಗರದಲ್ಲಿ ಒಬ್ಬಂಟಿಯಾಗಿ ಜೀವನ ಸಾಗಿಸುತ್ತಾ ಬಡತನ ಹಾಗೂ ವಯೋಸಹಜ ಅರೋಗ್ಯ ಸಮಸ್ಯೆ ಯಿಂದ ಬಳಲು ತ್ತಿದ್ದ ಖದೀಜಾ ಎಂಬವರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಧರ್ಮಾಧಿಕಾರಿಯವರ ಆದೇಶದ ಮೇರೆಗೆ ರೂ. ೭೫೦ ಮಾಸಾಶನ ಮಂಜೂರಾತಿ ಪತ್ರ ವಿತರಿಸಲಾಯಿತು. ಗ್ರಾಮ ಪಂಚಾಯಿತಿ ಸದಸ್ಯ ರಾಜೇಶ್, ಸಮಾಜ ಸೇವಕರಾದ ಶಶಿ, ಪೊನ್ನಂಪೇಟೆ ವಲಯ ಮೇಲ್ವಿಚಾರಕ ನರಸಿಂಹಮೂರ್ತಿ, ಸ್ಥಳೀಯ ಸೇವಾ ಪ್ರತಿನಿಧಿ ರೋಹಿಣಿ, ಸಂಘದ ಸದಸ್ಯರಾದ ಲೈಲಾ ಸೈಬ್ನ ಇದ್ದರು.