ಸೋಮವಾರಪೇಟೆ, ಅ.೧೫: ಕೊಡವ ನ್ಯಾಷನಲ್ ಕೌನ್ಸಿಲ್ ಮೂಲಕ ಕೊಡವ ಲ್ಯಾಂಡ್ ಹಕ್ಕೊತ್ತಾಯಕ್ಕೆ ಗಂಭೀರ ಪ್ರಯತ್ನ ನಡೆಯುತ್ತಿರುವ ಪ್ರಸ್ತುತತೆಯಲ್ಲಿ, ಇದರ ಸಾಧಕ ಬಾಧಕ ಗಳ ಬಗ್ಗೆ ಜಿಲ್ಲಾ ಒಕ್ಕಲಿಗರ ಸಂಘದ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು.
ಕೊಡಗು ಜಿಲ್ಲಾ ಒಕ್ಕಲಿಗರ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಎಸ್.ಎಂ.ಚAಗಪ್ಪ ಅವರ ಅಧ್ಯಕ್ಷತೆಯಲ್ಲಿ ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆಯಿತು. ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ವಕೀಲ ಡಾ. ಸುಬ್ರ ಮಣ್ಯ ಸ್ವಾಮಿಯವರು ಕೊಡವ ಭೌಗೋಳಿಕ ರಾಜಕೀಯ ಸ್ವಾಯತ್ತತೆ (ಕೊಡವ ಲ್ಯಾಂಡ್) ಕುರಿತಂತೆ ಹೂಡಿರುವ ಪಿ.ಐ.ಎಲ್. ಮೊಕದ್ದಮೆ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು.
ಕೊಡವ ಭೌಗೋಳಿಕ ರಾಜ ಕೀಯ ಸ್ವಾಯತ್ತತೆಯ ಬಗ್ಗೆ ಜಿಲ್ಲೆಯ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ತಮ್ಮ ಮುಕ್ತ ಅಭಿಪ್ರಾಯ ಹಾಗೂ ಸ್ಪಷ್ಟನೆ ನೀಡ ಬೇಕು. ಈ ಬಗ್ಗೆ ಜನಪ್ರತಿನಿಧಿಗಳಿಗೆ ಲಿಖಿತ ಮನವಿ ಸಲ್ಲಿಸುವಂತೆ ಸಭೆಯಲ್ಲಿ ಭಾಗಿಯಾಗಿದ್ದವರು ಅಧ್ಯಕ್ಷರಿಗೆ ತಿಳಿಸಿದರು. ಇದರೊಂದಿಗೆ ಮುಂದಿನ ದಿನಗಳಲ್ಲಿ ಕೊಡವೇತರ ಸಮುದಾಯಗಳನ್ನು ಒಗ್ಗೂಡಿಸಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳನ್ನು ನಿಯೋಗದ ಮೂಲಕ ಭೇಟಿ ಮಾಡುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.
ಕೊಡವ ಲ್ಯಾಂಡ್ ಹೋರಾಟ ಎಂಬುದು ಜಿಲ್ಲೆಯಲ್ಲಿ ಜನಾಂಗೀಯ ಘರ್ಷಣೆ ಮತ್ತು ಅಶಾಂತಿಗೆ ಕಾರಣವಾಗಬಹುದು. ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಬಲಾಢ್ಯರಾದವರು, ಪರಿಶಿಷ್ಟವರ್ಗದ ಸ್ಥಾನಮಾನ ಕೇಳುವುದು, ನಿಜವಾದ ಬುಡಕಟ್ಟು ಜನಾಂಗದವರ ಮೀಸಲಾತಿಯನ್ನು ಕಿತ್ತುಕೊಳ್ಳುವ ಪ್ರಯತ್ನ ಎಂದು ವಿ.ಪಿ. ಶಶಿಧರ್ ಪ್ರತಿಪಾದಿಸಿದರು. ಕೊಡವ ಲ್ಯಾಂಡ್ ಸ್ಥಾಪನೆಯಾದರೆ ಜಿಲ್ಲೆಯಲ್ಲಿ ಇತರ ಜನಾಂಗದವರು ರಾಜಕೀಯವಾಗಿ ಅನ್ಯಾಯಕ್ಕೆ ಒಳಗಾಗಬೇಕಾಗುತ್ತದೆ. ಮೀಸಲಾತಿಯಲ್ಲೂ ತಾರತಮ್ಯವಾ ಗುವ ಆತಂಕವಿದೆ ಎಂದು ಅಭಿಪ್ರಾಯಿಸಿದರು.
ಕೊಡಗಿನ ಮೂಲನಿವಾಸಿ ಮತ್ತು ಇತರ ಸಮುದಾಯದವರನ್ನು ಒಗ್ಗೂಡಿಸಿ ಕೊಡವಲ್ಯಾಂಡ್ ವಿರುದ್ಧ ಹೋರಾಡಲು ವೇದಿಕೆ ಸೃಷ್ಟಿಸಬೇ ಕೆಂದು ಹಲವರು ಸಭೆಯಲ್ಲಿ ಒತ್ತಾಯಿ ಸಿದರು. ಈಗಾಗಲೇ ಜಿಲ್ಲೆಯ ವಿವಿಧ ಜನಾಂಗದ ಪ್ರಮುಖರ ಸಭೆ ಕರೆಯ ಲಾಗಿದೆ. ಮುಂದಿನ ೨೦ ದಿನಗಳ ಒಳಗೆ ಮತ್ತೊಂದು ಸಭೆ ಕರೆದು ಎಲ್ಲಾ ವಿಚಾರವನ್ನು ಚರ್ಚೆ ಮಾಡಲಾಗು ವುದು. ಉಚ್ಚ ನ್ಯಾಯಾಲಯದಲ್ಲಿ ಕಾನೂನು ಹೋರಾಟವನ್ನು ಮುಂದು ವರಿಸಲಾಗುವುದು ಎಂದು ಅಧ್ಯಕ್ಷ ಎಸ್.ಎಂ. ಚಂಗಪ್ಪ ಸಭೆಗೆ ತಿಳಿಸಿದರು.
ನಮ್ಮ ಜನಾಂಗದ ಅಸ್ತಿತ್ವಕ್ಕೆ ಧಕ್ಕೆಯಾದಾಗ ಇಡೀ ಸಮುದಾಯ ಒಗ್ಗಟ್ಟಾಗಿ ಹೋರಾಟ ಮಾಡಬೇಕು. ಕಾನೂನು ರೀತಿಯಲ್ಲೂ ವ್ಯವಸ್ಥಿತ ಹೋರಾಟ ಮಾಡಲೇಬೇಕು ಎಂದು ರಾಜ್ಯ ಒಕ್ಕಲಿಗರ ಸಂಘದ ಸದಸ್ಯ ಹರಪಳ್ಳಿ ರವೀಂದ್ರ ಹೇಳಿದರು. ಕೊಡವ ಲ್ಯಾಂಡ್ ರಚನೆಯಾದರೆ ಅದರ ಪರಿಣಾಮಗಳು, ಇತರ ಸಮುದಾಯಗಳ ಮೇಲೆ ಆಗುವ ಪ್ರಭಾವ, ಸಾಧಕ-ಬಾಧಕಗಳ ಬಗ್ಗೆ ಗ್ರಾಮ ಮಟ್ಟದಲ್ಲಿ ಜಾಗೃತಿ ಮೂಡಿಸಬೇಕು.ಇತರ ಜನಾಂಗದಲ್ಲಿ ಈ ಬಗ್ಗೆ ತಿಳುವಳಿಕೆ ಮೂಡಿಸ ಬೇಕೆಂದು ಸಭೆಯಲ್ಲಿ ಹಲವರು ಅಭಿಪ್ರಾಯಿಸಿದರು.
ಚಿಂತಕ ಭಗವಾನ್ ಅವರು ಸಭೆಯೊಂದರಲ್ಲಿ ಒಕ್ಕಲಿಗರ ಜನಾಂಗದ ಬಗ್ಗೆ ಅವಹೇಳನಕಾರಿ ಪದ ಬಳಸಿದ್ದಾರೆ. ಇದಕ್ಕೆ ಖಂಡನಾ ನಿರ್ಣಯ ಕೈಗೊಳ್ಳಬೇಕು ಎಂದು ಕೆ.ಟಿ. ಪರಮೇಶ್ ಹೇಳಿದರು. ತಾಲೂಕು ಕಚೇರಿ ಎಂದು ಪ್ರತಿಭಟನೆ ನಡೆಸಿ, ಕ್ರಮಕ್ಕೆ ಆಗ್ರಹಿಸಿ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲು ಸಭೆ ತೀರ್ಮಾನಿಸಿತು.
೨೦೨೩ನೇ ಸಾಲಿನ ಹತ್ತನೆ ತರಗತಿಯಲ್ಲಿ ಅತೀಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಗೊಂದಳ್ಳಿ ಗ್ರಾಮದ ಮೃದು ಪ್ರವೀಣ್(ಶೇ.೯೯.೩೬), ತಾಕೇರಿ ಗ್ರಾಮದ ಅನುಜ್ ಸೋಮಯ್ಯ(೯೮.೭೨), ಯಡೂರು ಗ್ರಾಮದ ಧನ್ಯ ಸತೀಶ್(೯೭.೧೨), ಯಡೂರು ಗ್ರಾಮದ ಡಿ.ಸಿ.ತಿಲಕ್ (೯೬.೮), ಹಾರಳ್ಳಿ ಗ್ರಾಮದ ನಿತೀನ್ ದೇವರಾಜ್(೯೬), ಮಡಿಕೇರಿ ಹೇಮಶ್ರೀ ಚಂದ್ರಶೇಖರ್(೯೫.೦೪) ಅವರುಗಳಿಗೆ ಪ್ರೋತ್ಸಾಹ ಧನ ನೀಡಿ ಸನ್ಮಾನಿಸಲಾಯಿತು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ರಾದ ವಿ.ಪಿ. ಸುರೇಶ್, ಪಿ.ಕೆ.ರವಿ, ಕೆ.ಪಿ.ನಾಗರಾಜ್, ಕಾರ್ಯದರ್ಶಿ ಎಸ್.ಎಲ್. ಬಸವರಾಜ್, ಭರತ್ ಕುಮಾರ್, ಪುರುಷೋತ್ತಮ್, ವಿ.ಜಿ. ಮೋಹನ್, ಕೆ.ಎಂ. ಲೋಕೇಶ್, ಬಿ.ಬಿ. ಸತೀಶ್ ಸೇರಿದಂತೆ ಪದಾಧಿಕಾರಿಗಳಿದ್ದರು.