ಗೋಣಿಕೊಪ್ಪಲು, ಅ.೧೫ : ಗೋಣಿಕೊಪ್ಪಲುವಿನ ಶ್ರೀ ಕಾವೇರಿ ದಸರಾ ಸಮಿತಿ ವತಿಯಿಂದ ಹಮ್ಮಿಕೊಂಡಿರುವ ೪೫ ನೇ ವರ್ಷದ ಗೋಣಿಕೊಪ್ಪ ದಸರಾಕ್ಕೆ ವಿಧ್ಯುಕ್ತ ಚಾಲನೆ ನೀಡಲಾಯಿತು.

ನಗರದ ಸ್ವಾತಂತ್ರö್ಯ ಹೋರಾಟಗಾರ ಭವನದಲ್ಲಿ ಚಾಮುಂಡೇಶ್ವರಿ ದೇವಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು.

ಮುಂಜಾನೆಯಿAದಲೇ ಸಕಲ ಪೂಜಾ ಕೈಂಕರ್ಯಗಳು ನಡೆದವು. ಪ್ರತಿ ವರ್ಷದಂತೆ ಈ ಬಾರಿಯೂ ಚಾಮುಂಡೇಶ್ವರಿ ವಿಗ್ರಹ ದಾನಿಗಳಾದ ಕೇಶವ್ ಕಾಮತ್ ಹಾಗೂ ಕುಟುಂಬದ ಸದಸ್ಯರು ದಾನಿಗಳಾಗಿ ಆಗಮಿಸಿ ದೇವಿಯ ದರ್ಶನ ಪಡೆದರು.

ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣನವರು ಆಗಮಿಸಿ ದೇವಿಯ ಪ್ರತಿಷ್ಠಾಪನೆಯಲ್ಲಿ ಪಾಲ್ಗೊಂಡು ದೇವಿಗೆ ಮಾಲಾರ್ಪಣೆ ಮಾಡಿದರು. ನಗರದ ಸ್ವಾತಂತ್ರö್ಯ ಹೋರಾಟಗಾರರ ಭವನದಲ್ಲಿ ಚಾಮುಂಡೇಶ್ವರಿ ದೇವಿಯ ಪ್ರತಿಷ್ಠಾಪನೆ ಮಾಡಲಾಗಿದ್ದು ಮುಂಜಾನೆಯಿAದಲೇ ಗಣಪತಿ ಹೋಮ ಸೇರಿದಂತೆ ಪೂಜಾ ಕೈಂಕರ್ಯಗಳು ಯಶಸ್ವಿಯಾಗಿ ನಡೆದವು.

ಪೂಜಾ ಸಮಿತಿಯ ಸಂಚಾಲಕ ರಾಜಶೇಖರ್ ಹಾಗೂ ತಂಡದ ಸದಸ್ಯರು ದೇವಿ ಪ್ರತಿಷ್ಠಾಪನೆ ಹಾಗೂ ದೈನಂದಿನ ಪೂಜಾ ೩ಐದನೇ ಪುಟಕ್ಕೆ

(ಮೊದಲ ಪುಟದಿಂದ) ಕಾರ್ಯಕ್ರಮದ ಜವಾಬ್ದಾರಿ ನಿಭಾಯಿಸಿದರು. ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿ, ಗೋಣಿಕೊಪ್ಪ ದಸರಾ ಜನೋತ್ಸವ ತನ್ನದೇ ಆದ ವೈಭವ ಹೊಂದಿದೆ. ದಶಮಂಟಪಗಳು ಸೇರಿ ಹಬ್ಬವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿವೆ. ತನ್ನದೇ ಆದ ಇತಿಹಾಸ ಹಾಗೂ ವಿಶಿಷ್ಟತೆಯನ್ನು ಹೊಂದಿದೆ. ಈ ಬಾರಿ ಒಟ್ಟು ರೂ. ೬೦ ಲಕ್ಷ ಅನುದಾನ ಸರ್ಕಾರದ ವತಿಯಿಂದ ಮಂಜೂರು ಮಾಡಲಾಗಿದೆ. ಉತ್ತಮ ಕಾರ್ಯಕ್ರಮ ನೀಡುವ ಮೂಲಕ ನಾಡಿನ ಪ್ರತಿಭೆಗಳಿಗೆ ಉತ್ತಮ ವೇದಿಕೆ ಸಿಗುವ ಉದ್ದೇಶದಿಂದ ಹೆಚ್ಚುವರಿ ಅನುದಾನ ಸರ್ಕಾರ ನೀಡಿದೆ ಎಂದರು.

ದೇವಿ ಪ್ರತಿಷ್ಠಾಪನೆ ವೇಳೆ ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಗ್ರಾ.ಪಂ.ಅಧ್ಯಕ್ಷೆ ಮನ್ನಕಮನೆ ಸೌಮ್ಯಬಾಲು, ಹಿರಿಯರಾದ ಡಾ.ಶಿವಪ್ಪ, ಡಾ.ಚಂದ್ರಶೇಖರ್, ದಸರಾ ಸಮಿತಿಯ ಪದಾಧಿಕಾರಿಗಳಾದ ಬಿ.ಎನ್. ಪ್ರಕಾಶ್, ಶಿವಾಜಿ, ಜಪ್ಪು ಸುಬ್ಬಯ್ಯ, ರಮೇಶ್, ಕಂದಾ ದೇವಯ್ಯ ಸೇರಿದಂತೆ ವಿವಿಧ ಸಮಿತಿಗಳ ಪದಾಧಿಕಾರಿಗಳಾದ ದಿಲನ್ ಚಂಗಪ್ಪ, ಓಮನ, ಶೀಲಾ ಬೋಪಣ್ಣ, ರಮೇಶ್, ಮಂಜುಳಾ, ಲಕ್ಷಿö್ಮÃ, ಧನಲಕ್ಷಿö್ಮ, ವರಲಕ್ಷಿö್ಮ ಧನ್ಯ, ಸೇರಿದಂತೆ ದಸಮಂಟಪದ ವಿವಿಧ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.