ವೀರಾಜಪೇಟೆ, ಅ. ೧೬: ವೀರಾಜಪೇಟೆ ಕಾವೇರಿ ಕಾಲೇಜಿಗೆ ತಾ.೧೯ ಮತ್ತು ೨೦ ರಂದು ನ್ಯಾಕ್ ಸಮಿತಿ ನಾಲ್ಕನೇ ಬಾರಿ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ ಎಂದು ವೀರಾಜಪೇಟೆ ಕಾವೇರಿ ಕಾಲೇಜಿನ ಪ್ರಾಂಶುಪಾಲ ಡಾ. ಆನಂದ್ ಕಾರ್ಲ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಾ. ಆನಂದ್ ಕಾರ್ಲಾ ಅವರು, ಈಗಾಗಲೆ ಬಿ+ ಮಾನ್ಯತೆ ಪಡೆದುಕೊಂಡಿರುವ ಕಾವೇರಿ ವಿದ್ಯಾಸಂಸ್ಥೆ ೧೯೮೦ರ ದಶಕದಲ್ಲಿ ಪ್ರಾರಂಭಗೊAಡಿತು. ಸಹಸ್ರಾರು ಗ್ರಾಮೀಣ ವಿದ್ಯಾರ್ಥಿಗಳು ವಿದ್ಯಾಬ್ಯಾಸ ಮಾಡಿ ಉನ್ನತ ಹುದ್ದೆಯನ್ನು ಪಡೆದುಕೊಂಡಿದ್ದಾರೆ. ಬಿ.ಎ, ಬಿಕಾಂ, ಬಿಬಿಎಂ, ವಿಷಯಗಳೊಂದಿಗೆ ಕಮ್ಯೂನಿಕೇಟಿಂಗ್ ಇಂಗ್ಲಿಷ್, ಕಂಪ್ಯೂಟರ್, ಬ್ಯೂಟಿಷಿಯನ್, ಫೋಟೋಗ್ರಫಿ, ಕಿರುಚಿತ್ರ ನಿರ್ಮಾಣದ ತರಬೇತಿಗಳನ್ನು ನೀಡಲಾಗುತ್ತಿದೆ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ೬೦ ವಿದ್ಯಾರ್ಥಿಗಳು ದಾಖಲಾತಿ ಪಡೆದುಕೊಂಡಿದ್ದಾರೆ. ಡಿಜಿಟಲ್ ಗ್ರಂಥಾಲಯ ದಲ್ಲಿ ೨೪ ಸಾವಿರ ಪುಸ್ತಕಗಳಿವೆ. ಸಂಸ್ಥೆ ಜಿಮ್, ಬಾಸ್ಕೆಟ್ಬಾಲ್, ಟೇಬಲ್ಟೆನ್ನಿಸ್ ಕೋರ್ಟ್ಗಳನ್ನು ಹೊಂದಿದೆ. ಕ್ರೀಡೆಯಲ್ಲಿ ರಾಜ್ಯ ಹಾಗೂ ರಾಷ್ಟçಮಟ್ಟದಲ್ಲಿ ಹೆಸರುಗಳಿಸಿದೆ. ಎನ್.ಸಿ.ಸಿ, ಎನ್.ಎಸ್.ಎಸ್ ಕೋರ್ಸ್ಗಳಿದೆ. ಈವರೆಗೆ ಎನ್.ಸಿ.ಸಿ.ಯಲ್ಲಿ ೨೪ ವಿದ್ಯಾರ್ಥಿಗಳು ಗಣರಾಜ್ಯೋತ್ಸವ ಪೆರೇಡ್ನಲ್ಲಿ ಭಾಗವಹಿಸಿದ್ದಾರೆ. ಅಪ್ಸಿ÷್ಟÃಕಲ್ ರೇಂಜ್ ಕೋರ್ಸ್ ಹಾಗೂ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಮುಂದಿನ ಗುರಿಯಾಗಿದೆ ಎಂದು ಹೇಳಿದರು. ಐಕ್ಯೂಸಿ ಸಂಚಾಲಕಿ ಡಾ. ಕುಪ್ಪಂಡ.ಜಿ ವೀಣಾ ಮಾತನಾಡಿ, ನ್ಯಾಕ್ ಸಮಿತಿಯ ನಾಲ್ಕನೇ ಭೇಟಿಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು. ಗೋಷ್ಠಿಯಲ್ಲಿ ಐಕ್ಯೂಎಸಿ ಸಹ ಸಂಚಾಲಕ ಸಿ.ಎಂ ಸೋಮಣ್ಣ, ಗ್ರಂಥಪಾಲಕ ರಾದ ಡಾ ಎ.ಆರ್. ಮುತ್ತಮ್ಮ, ದೈಹಿಕ ಶಿಕ್ಷಕ ಕೆ.ಎಸ್ ತಮ್ಮಯ್ಯ ಉಪಸ್ಥಿತರಿದ್ದರು.