ಮಡಿಕೇರಿ, ಅ. ೧೫: ಮಡಿಕೇರಿ ದಸರಾ ಪ್ರಯುಕ್ತ ಮಡಿಕೇರಿ ನಗರದಲ್ಲಿ ತಾ. ೧೫ರಿಂದ ೨೫ ರವರೆಗೆ ತಾತ್ಕಾಲಿಕ ಐಸ್ಕ್ರೀಂ ಅಂಗಡಿ ಹಾಗೂ ತಾತ್ಕಾಲಿಕ ಅಂಗಡಿ ಮಳಿಗೆಗಳನ್ನು ಹಾಕುವ ವ್ಯಾಪಾರಸ್ಥರಿಂದ ಶುಕ್ಲ ಸಂಗ್ರಹಾತಿಗೆ ಬಹಿರಂಗ ಹರಾಜು ನಡೆಸಲಾಗಿದೆ.
ನಗರಸಭೆಯ ಹಲವು ಷರತ್ತಿಗೆ ಒಳಪಟ್ಟಂತೆ ತಾ. ೧೩ರಂದು ಹರಾಜು ಪ್ರಕ್ರಿಯೆ ನಡೆಸಲಾಗಿದ್ದು, ಈ ಬಾರಿ ನಿಗದಿತ ಅವಧಿಯಲ್ಲಿ ತಾತ್ಕಾಲಿಕ ಐಸ್ಕ್ರೀಂ ಅಂಗಡಿ ವ್ಯಾಪಾರಕ್ಕೆ ರೂ. ೭೧ ಸಾವಿರಕ್ಕೆ ಹರಾಜು ನಡೆದಿದೆ. ಮಡಿಕೇರಿಯ ಮೋಹನ್ ಎಂಬವರು ಇದನ್ನು ಪಡೆದುಕೊಂಡಿದ್ದು, ಸುಮಾರು ೭ ರಿಂದ ೮ ಕಡೆಗಳಲ್ಲಿ ತಾತ್ಕಾಲಿಕ ಐಸ್ಕ್ರೀಂ ಅಂಗಡಿ ನಡೆಸಲು ಅವಕಾಶ ಮಾಡಿಕೊಡಲಾಗುತ್ತಿದೆ. ಇದಕ್ಕೆ ಜಾಗವನ್ನು ನಗರಸಭೆ ಮೂಲಕ ಗುರುತಿಸಿಕೊಡಲಾಗುವುದು.
ಇದರೊಂದಿಗೆ ತಾತ್ಕಾಲಿಕವಾದ ಅಂಗಡಿ ಮಳಿಗೆಗಳಿಗೆ ಸಂಬAಧಿಸಿದAತೆ ಇದು ಒಟ್ಟು ರೂ. ೧.೨೧ ಲಕ್ಷಕ್ಕೆ ಹರಾಜಾಗಿದೆ. ಸುಮಾರು ೧೦೦ ರಿಂದ ೧೨೦ ರಷ್ಟು ತಾತ್ಕಾಲಿಕ ಅಂಗಡಿಗಳಿಗೆ ಸಂಬAಧಿಸಿದAತೆ ಇಷ್ಟು ಮೊತ್ತ ಸಂಗ್ರಹವಾಗಿದೆ. ತಾತ್ಕಾಲಿಕ ಅಂಗಡಿ ಮಳಿಗೆಗಳನ್ನು ದೊಡ್ಡದು, ಸಣ್ಣದು ಎಂಬAತೆ ವಿಂಗಡಿಸಲಾಗಿದೆ. ದೊಡ್ಡ ಮಳಿಗೆ ಎಂದು ಪರಿಗಣಿಸಲ್ಪಡುವುದಕ್ಕೆ ದಿನವೊಂದಕ್ಕೆ ರೂ. ೨೦೦ ಹಾಗೂ ಸಣ್ಣ ಮಳಿಗೆಗಳಿಗೆ ರೂ. ೧೦೦ ರಂತೆ ಶುಲ್ಕ ವಿಧಿಸಲಾಗಿದೆ. ಇದು ಹೊರತುಪಡಿಸಿ ಹೆಚ್ಚುವರಿಯಾಗಿ ವಸೂಲಿ ಮಾಡಲಾಗುವುದಿಲ್ಲ ಎಂದು ನಗರ ದಸರಾ ಸಮಿತಿಯ ಖಜಾಂಚಿ ಅರುಣ್ಶೆಟ್ಟಿ ತಿಳಿಸಿದ್ದಾರೆ. ಎಲ್ಲಾ ಮಳಿಗೆಗಳಿಗೆ ಸಂಬAಧಿಸಿದAತೆ ಕಸ ವಿಲೇವಾರಿ ಮತ್ತಿತರ ಷರತ್ತುಗಳು ಅನ್ವಯವಾಗಲಿದೆ ಎಂದು ಅವರು ಹೇಳಿದ್ದಾರೆ.