ಸಿದ್ದಾಪುರ, ಅ. ೧೪: ಕರಡಿ ಗೋಡು ಭಾಗದ ಕಾಫಿ ತೋಟಗಳಲ್ಲಿ ಮತ್ತೆ ಹುಲಿಯ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದು ಕೆಲಸಕ್ಕೆ ತೆರಳಿದ ಕಾರ್ಮಿಕರು ಮನೆಗೆ ಹಿಂತಿರುಗಿದ್ದಾರೆ.

ಎರಡನೇ ದಿನವು ಕೂಂಬಿAಗ್ ಕಾರ್ಯಾಚರಣೆ ಮುಂದುವರಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಕರಡಿಗೋಡು, ಶಿಲ್ಪಿ, ಹೇರೂರು, ಚಿಕ್ಕನಹಳ್ಳಿ ಭಾಗದ ಕಾಫಿ ತೋಟಗಳಲ್ಲಿ ಹುಲಿಯ ಹೆಜ್ಜೆ ಗುರುತು ಜಾಡು ಹಿಡಿದು ಕೂಂಬಿAಗ್ ನಡೆಸಿದರೂ, ಹುಲಿ ಪತ್ತೆಯಾಗಲಿಲ್ಲ. ದುಬಾರೆ ಅರಣ್ಯದಿಂದ ರಾತ್ರಿ ವೇಳೆಯಲ್ಲಿ ಕರಡಿ ಗೋಡು ಗ್ರಾಮ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಸಂಚರಿಸಿ ಮತ್ತೆ ಮರಳಿ ಹಿಂತಿರುಗುತ್ತಿದೆ ಎಂದು ಶಂಕಿಸಲಾಗಿದೆ.

ಶನಿವಾರ ಕಾಫಿ ತೋಟಕ್ಕೆ ತೆರ ಳಿದ ಕಾರ್ಮಿಕರಿಗೆ ಕೆರೆಯೊಂದರ ಬಳಿ ಹುಲಿಯ ಹೆಜ್ಜೆ ಗುರುತು ಪತ್ತೆಯಾದ ಹಿನ್ನೆಲೆಯಲ್ಲಿ ಕೆಲಸ ಬಿಟ್ಟು ಮನೆಗೆ ಹಿಂತಿರುಗಿದ್ದಾರೆ.

ಇತರ ಕೆಲವು ಕಾಫಿ ತೋಟಗಳಲ್ಲಿ ತೋಟದ ಮಾಲೀಕರೆ ಕಾರ್ಮಿಕರಿಗೆ ರಕ್ಷಣೆ ನೀಡುವ ಮೂಲಕ ಕೆಲಸ ನಿರ್ವಹಿಸಿದ್ದಾರೆ.

ಅರಣ್ಯ ಇಲಾಖೆಯಿಂದ ಕರಡಿ ಗೋಡು ಶಾಲೆ ಬಳಿಯ ಮುಖ್ಯ ರಸ್ತೆಯ ಬದಿಯಲ್ಲಿ ಎಲ್‌ಇಡಿ ಸೂಚನಾ ನಾಮಫಲಕವನ್ನು ಅಳವಡಿಸಲಾಗಿದ್ದು, ಕಾಡು ಪ್ರಾಣಿಗಳಿವೆ ಎಚ್ಚರದಿಂದಿರಿ ಎಂಬ ಸಂದೇಶ ರವಾನಿಸಿದ್ದಾರೆ.

ಇದರಿಂದ ಬೆಳೆಗಾರರು, ಕಾರ್ಮಿ ಕರು, ಸಾರ್ವಜನಿಕರು ರಸ್ತೆಯಲ್ಲಿ ಸಂಚರಿಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಸಿದ್ದಾಪುರ ಸುತ್ತಮುತ್ತಲ ಭಾಗಗಳಿಂದ ಕರಡಿಗೂಡು ಗ್ರಾಮಕ್ಕೆ ಬಾಡಿಗೆ ವಾಹನಗಳು ಬರುತ್ತಿಲ್ಲ. ಆಸ್ಪತ್ರೆ ಸೇರಿದಂತೆ ತುರ್ತು ಸಂದರ್ಭ ದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಿದೆ.

ಕಾಡಾನೆ, ಹುಲಿ ಹಾವಳಿಯ ಸಮಸ್ಯೆ ಎದುರಿಸುತ್ತಿರುವ ಜನರಿಗೆ ಅರಣ್ಯ ಇಲಾಖೆಯಿಂದ ವಾಹನ ವ್ಯವಸ್ಥೆ ಕಲ್ಪಿಸಬೇಕೆಂದು ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಕರ್ಪಯ್ಯ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

ಕಾಫಿ ಬೆಳೆಗಾರ ಕುಕ್ಕನೂರು ಚಂದ್ರಶೇಖರ್ ಮಾತನಾಡಿ ನಿರಂತರ ಕಾಡಾನೆ ಹಾವಳಿಯಿಂದ ಕೃಷಿ ಪಸಲು ನಾಶವಾಗುವ ಮೂಲಕ ಅಪಾರ ನಷ್ಟ ಉಂಟಾಗುತ್ತಿದೆ. ವರ್ಷವಿಡಿ ಕಷ್ಟಪಟ್ಟು ಬೆಳೆದ ಫಸಲುಗಳು ಪ್ರಾಣಿಗಳ ಪಾಲಾಗುತ್ತಿವೆ. ಕಾರ್ಮಿಕರು ಕೆಲಸಕ್ಕೆ ತೆರಳಲು ಭಯಪಡುತ್ತಿದ್ದಾರೆ.

ನೆಮ್ಮದಿಯಾಗಿ ರಸ್ತೆಯಲ್ಲಿ ನಡೆದಾಡಲು ಸಾಧ್ಯವಾಗದಂತಹ ಪರಿ ಸ್ಥಿತಿ ನಿರ್ಮಾಣವಾಗಿದೆ. ಆದಷ್ಟು ಬೇಗ ಅರಣ್ಯ ಇಲಾಖೆ ಹುಲಿ ಆನೆ ಹಾವಳಿ ಯನ್ನು ಶಾಶ್ವತವಾಗಿ ತಡೆಗಟ್ಟಬೇಕೆಂದು ಅರಣ್ಯ ಇಲಾಖೆಯನ್ನು ಒತ್ತಾಯಿಸಿ ದರು. ಈ ಸಂದರ್ಭ ಸ್ಥಳೀಯರಾದ ಸುರೇಶ್, ಅನೀಲ್, ಮುತ್ತು ರಾಜ್, ಕಾರ್ತಿಕ್, ರಾಜೇಶ್, ಮುಸ್ತಪ, ಸನ್ನು ಕುಕುನೂರು, ಸುಲೈಮಾನ್ ಸೇರಿದಂತೆ ಮತ್ತಿತರರು ಹಾಜರಿದ್ದರು .

ಕೊಡಗು ಜಿಲ್ಲಾ ರೈತ ಸಂಘದ ಅಧ್ಯಕ್ಷ ಮನುಸೋಮಯ್ಯ ‘ಶಕ್ತಿ’ಯೊಂದಿಗೆ ಮಾತನಾಡಿ ಸರ್ಕಾರ, ಜನಪ್ರತಿನಿಧಿಗಳು ಹಾಗೂ ಅರಣ್ಯ ಇಲಾಖೆಯ ನಿರ್ಲಕ್ಷö್ಯದಿಂದ ಕಾಡುಪ್ರಾಣಿಗಳು ನಿರಂತರ ಕಾಫಿ ತೋಟಗಳು ಹಾಗೂ ಗ್ರಾಮ ವ್ಯಾಪ್ತಿಯಲ್ಲಿ ಉಳಿದುಕೊಂಡಿವೆ.

ನಿರAತರವಾಗಿ ಬೆಳೆಗಾರರು, ಕಾರ್ಮಿಕರು ಹಾಗೂ ಸಾರ್ವಜನಿಕರ ಸಾವು ನೋವುಗಳು ಸಂಭವಿಸುತ್ತಿವೆ. ದಕ್ಷಿಣ ಕೊಡಗಿನಲ್ಲಿ ಹುಲಿ ದಾಳಿಗೆ ಹಲವರು ಪ್ರಾಣ ಕಳೆದುಕೊಂಡಿದ್ದರು. ಸರ್ಕಾರ ಹಾಗೂ ಅರಣ್ಯ ಇಲಾಖೆ ಎಚ್ಚೆತ್ತುಕೊಂಡಿಲ್ಲ. ಇದೀಗ ಕಳೆದೆರಡು ದಿನಗಳಿಂದ ಕರಡಿಗೋಡು ಗ್ರಾಮ ವ್ಯಾಪ್ತಿಯಲ್ಲಿ ಹುಲಿ ಸಂಚಾರ ಕಂಡು ಬಂದಿದ್ದು ಆ ಭಾಗದ ರೈತರು, ಕಾರ್ಮಿಕರು, ಸಾರ್ವಜನಿಕರು ಮನೆ ಯಿಂದ ಹೊರಬರಲು ಸಾಧ್ಯವಾಗ ದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಅರಣ್ಯ ಅಂಚಿನಲ್ಲಿ ಕಂದಕ, ಸೋಲಾರ್ ಸೇರಿದಂತೆ ಯೋಜನೆ ಗಳು ನಿಷ್ಕಿçಯಗೊಂಡಿರುವ ಕಾರಣದಿಂದ ಕಾಡು ಪ್ರಾಣಿಗಳು ನಿರಂತರ ರೈತರ ಕೃಷಿ ಫಸಲುಗಳ ಮೇಲೆ ದಾಳಿ ಮಾಡುತ್ತಿವೆೆ. ಅರಣ್ಯ ಇಲಾಖೆ ಕೂಡಲೇ ಹುಲಿಯನ್ನ ಸೆರೆ ಹಿಡಿಯಬೇಕು ಹಾಗೂ ಕಾಡು ಪ್ರಾಣಿಗಳ ಹಾವಳಿಯನ್ನು ಶಾಶ್ವತವಾಗಿ ತಡೆಗಟ್ಟದಿದ್ದಲ್ಲಿ ರೈತ ಸಂಘದ ಮೂಲಕ ಬೆಳೆಗಾರರು ಕಾರ್ಮಿಕರು ಸಾರ್ವಜನಿಕರನ್ನು ಒಗ್ಗೂಡಿಸಿ ಬೃಹತ್ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

-ಎಸ್.ಎಂ. ಮುಬಾರಕ್/ ವಾಸು